Salman Khan Car: ಸಲ್ಮಾನ್ ಖಾನ್ ಖರೀದಿಸಿದ ನಿಸ್ಸಾನ್ ಅತೀ ದುಬಾರಿ ಕಾರ್ ಬೆಲೆ ಎಷ್ಟು, ಈ ಕಾರಿನಲ್ಲಿ ಇದೆ ಹಲವು ಫೀಚರ್.

ಹೊಸ ಬುಲೆಟ್ ಪ್ರೂಫ್ ನಿಸ್ಸಾನ್ SUV ಕಾರನ್ನ ಖರೀದಿ ಮಾಡಿದ್ದಾರೆ ನಟ ಸಲ್ಮಾನ್ ಖಾನ್,

Salman Khan Nissan SUV New Car: ಬಾಲಿವುಡ್ ನ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟ ಸಲ್ಮಾನ್ ಖಾನ್ ಇದೀಗ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ನಟ ಸಲ್ಮಾನ್ ಖಾನ್ ಇದೀಗ ಹೊಸ ಕಾರ್ ಅನ್ನು ಖರೀದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಅವರ ಕಾರ್ ನ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಇನ್ನು ಸಲ್ಮಾನ್ ಖಾನ್ ಅವರ ದುಬಾರಿ ಕಾರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Salman Khan Nissan SUV New Car
Image Source: Zee News

ಬುಲೆಟ್ ಫ್ರೂಪ್ SUV ಕಾರ್ ಖರೀದಿಸಿದ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ಅವರ ಬಳಿ ಈಗಾಗಲೇ ಸಾಕಷ್ಟು ದುಬಾರಿ ಕಾರ್ ಗಳಿವೆ. ಇದೀಗ ಸಲ್ಮಾನ್ ಖಾನ್ ಹೊಸ ರೀತಿಯ ಬುಲೆಟ್ ಫ್ರೂಪ್ SUV ಅನ್ನು ಖರೀದಿಸಿದ್ದಾರೆ. ಈ ಕಾರ್ ನ ವಿಶೇಷತೆ ಏನೆಂದರೆ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಆಗ್ನೇಯ ಏಷ್ಯಾದ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ SUV ಆಗಿದೆ.

Salman Khan Nissan SUV New Car
Image Source: HT Auto

ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ (Bullet Proof Nissan Petrol SUV) 
ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರ್ ಸಿಗದ ಕಾರಣ ಸಲ್ಲು ನಿಸ್ಸಾನ್ ಪೆಟ್ರೋಲ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅತ್ಯಂತ ದುಬಾರಿ ಬೆಲೆಯ ಸುರಕ್ಷಿತ ಎಸ್ ಯುವಿ ಕಾರ್ ಅನ್ನು ಖರೀದಿಸಿದ್ದಾರೆ.

Salman Khan Nissan SUV New Car
Image Source: India Today

ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ ಕಾರ್ ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ. ಮಾಹಿತಿಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸಲ್ಮಾನ್ ಖರೀದಿ ಮಾಡಿರುವ ಈ ಕಾರಿನ ಬೆಲೆ ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

ಈ ನಿಸ್ಸಾನ್ ಕಾರ್ ನ ಎಲ್ಲಾ ಕಿಟಕಿಗಳು ಕೂಡ ದಪ್ಪವಾದ ಅಂಚು ಹಾಗೂ ಹೆಚ್ಚು ಬಲಿಷ್ಠತೆಯನ್ನು ಹೊಂದಿದೆ. ದಪ್ಪ ಕ್ಲಾಡಿಂಗ್ ವಿಂಡೋ ಗ್ಲಾಸ್ ಅನ್ನು ಹೊಂದಿದೆ. ಈ ಕಾರ್ 5 .6 ಲೀಟರ್ V8 ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿದೆ. ನಿಸ್ಸಾನ್ ಪೆಟ್ರೋಲ್ ಎಸ್ ಯುವಿ 405hp ಮತ್ತು 560Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Salman Khan Nissan SUV New Car
Image Source: India Today

Join Nadunudi News WhatsApp Group