Salman Khan: ಮದುವೆ ಕಾರ್ಡ್ ಪ್ರಿಂಟ್ ಆದ ಬಳಿಕ ಸಲ್ಲು ಮದುವೆ ಅರ್ಧಕ್ಕೆ ನಿಂತಿದ್ದೇಕೆ? ಸತ್ಯ ಬಯಲಿಗೆ.
ನಿಶ್ಚಯವಾದ ಮದುವೆ ಮುರಿದು ಬಿದ್ದ ಬಗ್ಗೆ ಹೇಳಿಕೊಂಡ ನಟ ಸಲ್ಮಾನ್ ಖಾನ್.
Salman Khan About Marriage: ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ ಎಲಿಜಿಬಲ್ ಬ್ಯಾಚುಲರ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಸಲ್ಮಾನ್ ಖಾನ್ ಇನ್ನು ಬ್ಯಾಚುಲರ್ ಆಗಿ ಉಳಿದಿರುವುದಕ್ಕೆ ಕಾರಣ ಇದೀಗ ಹೊರ ಬಿದ್ದಿದೆ.
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಅನ್ನುವಷ್ಟರಲ್ಲಿ ಅವರ ಮದುವೆ ಮುರಿದು ಬಿದ್ದಿತ್ತಂತೆ. ಈ ವಿಚಾರ ಇಲ್ಲಿಯವರೆಗೆ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ. 1980 ರಲ್ಲಿ ಬಾಲಿವುಡ್ ನಟಿ ಸಂಗೀತ ಬಿಜಲಾನಿ ಜೊತೆಯಲ್ಲಿ ಬರೋಬ್ಬರಿ 8 ವರ್ಷಗಳ ಕಾಲ ಸಲ್ಮಾನ್ ಖಾನ್ ಡೇಟಿಂಗ್ ಮಾಡಿದ್ದರಂತೆ. ಅಲ್ಲದೆ ಅವರಿಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು, ಆದರೆ ವಿಧಿ ಅವರ ಹಣೆಯಲ್ಲಿ ಬೇರೆಯದ್ದನ್ನೇ ಬರೆದಿತ್ತು.
ಮದುವೆ ಮುರಿದು ಬಿದ್ದ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್
ನಟ ಸಲ್ಮಾನ್ ಈ ವಿಚಾರವನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ನಾನು ಮದುವೆಯಾಗಬೇಕು ಎಂದುಕೊಂಡಿದ್ದೆ. ನಾನು ಯಾರೊಂದಿಗೆ ಕ್ಲೋಸ್ ಆಗುವುದಕ್ಕೆ ಹೋದರು ಅದು ಸಹ ಕೆಲಸಕ್ಕೆ ಬರುವುದಿಲ್ಲ. ಬಹುಷಃ ಯುವತಿಯರಿಗೆ ನಾನು ಒಳ್ಳೆಯ ಬಾಯ್ ಫ್ರೆಂಡ್, ಆದರೆ ಮದುವೆಯಾಗೋಕೆ ಯೋಗ್ಯನಲ್ಲ ಎಂದೆನಿಸುತ್ತೆ.
ಸಂಗೀತಾ ಜೊತೆಯಲ್ಲಂತೂ ನಮ್ಮ ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕರಣ್ ನೀವು ಸಂಗೀತ ಅವರಿಗೆ ಮೋಸ ಮಾಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಸಲ್ಮಾನ್ ಹೌದು ಎಂದು ಉತ್ತರಿಸಿದ್ದಾರೆ. ಹೌದು ನಾನಾಗ ಮೂರ್ಖನಾಗಿದ್ದೆ . ಹೀಗಾಗಿ ಸಂಗೀತಾಳಿಗೆ ಚೀಟ್ ಮಾಡುವಾಗ ಸಿಕ್ಕಿಬಿದ್ದೆ ಎಂದಿದ್ದಾರೆ.
ಬ್ರೇಕಪ್ ನಂತರ ಅಂದರೆ ಮದುವೆ ಮುರಿದು ಬಿದ್ದ ಬಳಿಕವೂ ಇಂದಿಗೂ ಸಂಗೀತ ಹಾಗು ಸಲ್ಮಾನ್ ಖಾನ್ ಉತ್ತಮ ಸ್ನೇಹ ಹೊಂದಿದ್ದಾರೆ. ಈ ವಿಚಾರವಾಗಿ ಸ್ವತಃ ಸಂಗೀತ ಪ್ರತಿಕ್ರಿಯೆ ಕೂಡ ನೀಡಿದ್ದಾರೆ, ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಂಪರ್ಕ ತಪ್ಪಿ ಹೋಗಬಹುದು, ಆದರೆ ನಿಮ್ಮ ಪ್ರೀತಿ ಪಾತ್ರರು ಹಾಗೂ ಶಾಲಾ ಸಹಪಾಠಿಗಳ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗೋದಿಲ್ಲ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಹಾಗಂತ ನೀವು ಎಲ್ಲರೊಂದಿಗೆ ಸಂಬಂಧದಲ್ಲಿ ಕಹಿಯನ್ನು ಉಳಿಸಿಕೊಳ್ಳೋದು ಕೂಡ ಸರಿಯಲ್ಲ. ಜೀವನವೇ ಒಂದು ಅನುಭವವಿದ್ದಂತೆ ಎಂದು ಹೇಳಿದ್ದರು.