Salman Khan: ಸಲ್ಮಾನ್ ಖಾನ್ ಜೊತೆ ಮದುವೆಗೆ ಅಂದು ಐಶ್ವರ್ಯ ರೈ ಹಾಕಿದ್ದು ಷರತ್ತು ಕೊನೆಗೂ ವೈರಲ್
ಬಾಲಿವುಡ್ ನ ಲವ್ ಬರ್ಡ್ಸ್ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್, ಸಲ್ಲು ಗೆ ಕಂಡೀಷನ್ ಹಾಕಿದ ಐಶ್ವರ್ಯ ರೈ.
Salman Khan And Aishwarya Rai Love Story: ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇದೀಗ ಮದುವೆಯ ವಿಚಾರವಾಗಿ ಬಾರಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಮದುವೆಯಾಗಿದ್ದರು ಕೂಡ ಸಲ್ಮಾನ್ ಖಾನ್ ಇನ್ನು ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಅವರ ಬಳಿ ಸಾಕಷ್ಟು ಆಸ್ತಿಗಳು ಇದ್ದರು ಅವರು ಮದುವೆಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.ಇನ್ನು ಸಲ್ಲು ಎಲ್ಲೇ ಹೋದರು ಕೂಡ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ತಪ್ಪಿದ್ದಲ್ಲ.
ಬಾಲಿವುಡ್ ನಲ್ಲಿ ಇನ್ನು ಕೆಲ ಸ್ಟಾರ್ ನಟ ನಟಿಯರು ಮದುವೆಯಾಗದೆ ಹಾಗೆ ಇದ್ದಾರೆ. ಬಾಲಿವುಡ್ ಸ್ಟಾರ್ ನಟರು ಸಿನಿಮಾ ವಿಚಾರವಾಗಿ ಹಾಗೂ ತಮ್ಮ ವೈಯಕ್ತಿಕ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನ ಕೆಲ ಸ್ಟಾರ್ ನಟರ ಡೇಟಿಂಗ್ ವಿಚಾರಗಳು ಸಾಕಷ್ಟು ಹರಡಿವೆ.
ಅದರಲ್ಲೂ ನಟ ಸಲ್ಮಾನ್ ಖಾನ್ ಅವರ ಡೇಟಿಂಗ್ ವಿಚಾರಗಳು ಹೆಚ್ಚಾಗಿ ಕೇಳಿಬಂದಿದ್ದವು. ಈಗಾಗಲೇ ಸಲ್ಮಾನ್ ಖಾನ್ ಅವರ ಪ್ರೀತಿಯ ವಿಚಾರಗಳು ಸಾಕಷ್ಟು ಬಹಿರಂಗವಾಗಿದೆ. ಇದೀಗ ಐಶ್ವರ್ಯ ರೈ (Aishwarya Rai) ಹಾಗು ಸಲ್ಮಾನ್ ಖಾನ್ ಪ್ರೀತಿಯ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಬಾಲಿವುಡ್ ನ ಲವ್ ಬರ್ಡ್ಸ್ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಸ್ಟಾರ್ ನಟಿ ಐಶ್ವರ್ಯ ರೈ ಈ ಹಿಂದೆ ಸಲ್ಮಾನ್ ಖಾನ್ ಅವರ ಜೊತೆ ಪ್ರೀತಿಯಲ್ಲಿದ್ದಿದ್ದರು. ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಹಾಗು ಐಶ್ವರ್ಯ ರೈ ಬಾಲಿವುಡ್ ನ ಲವ್ ಬರ್ಡ್ಸ್ ಆಗಿದ್ದರು. ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಶೂಟಿಂಗ್ ನ ವೇಳೆ ಈ ಇಬ್ಬರ ನಡುವೆ ಪ್ರೇಮ ಉಂಟಾಗಿತ್ತು ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಪ್ರೀತಿಯಲ್ಲಿ ಬಿದ್ದಿದ್ದ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಕೆಲವೇ ಸಮಯದಲ್ಲಿ ಬೇರೆಯಾಗಿದ್ದರೂ. ಇಬ್ಬರ ನಡುವಿನ ಪ್ರೀತಿ ಮತ್ತು ಬ್ರೇಕಪ್ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇನ್ನು ಐಶ್ವರ್ಯ ರೈ ಸಲ್ಮಾನ್ ಖಾನ್ ಗೆ ಒಂದಿಷ್ಟು ಷರತ್ತು ಹಾಕಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಕಾರಣಕ್ಕೆ ಈ ಇಬ್ಬರ ನಡುವೆ ಬ್ರೇಕ್ ಆಗಿದೆ ಎನ್ನುವ ಸುದ್ದಿ ತಿಳಿದುಬಂದಿದೆ.
ಸಲ್ಮಾನ್ ಖಾನ್ ಗೆ ಕೆಲವು ಕಂಡೀಷನ್ ಹಾಕಿದ್ದರಂತೆ ಐಶ್ವರ್ಯ ರೈ
ನಟ ಸಲ್ಮಾನ್ ಖಾನ್ ಐಶ್ವರ್ಯ ಅವರ ಬಗ್ಗೆ ಹೆಚ್ಚು ಪೊಸೆಸಿವ್ ಭಾವನೆಯನ್ನು ಹೊಂದಿರುವುದೇ ಬ್ರೇಕಪ್ ಗೆ ಒಂದು ರೀತಿಯ ಕಾರಣ ಎನ್ನಲಾಗುತ್ತಿದೆ. ಇನ್ನು ನಟಿ ಐಶ್ವರ್ಯ ರೈ ಸಲ್ಮಾನ್ ಖಾನ್ ಗೆ ಒಂದಿಷ್ಟು ಕಂಡೀಷನ್ ಹಾಕಿರುವ ಬಗ್ಗೆ ಕೂಡ ವರದಿಯಾಗಿದೆ.
ಸಲ್ಮಾನ್ ಸಹೋದರರ ಸೊಹೈಲ್ ಮತ್ತು ಅರ್ಬಾಜ್ ಅವರ ಯಾವುದೇ ಪ್ರಾಜೆಕ್ಟ್ ಗಳಲ್ಲಿ ಸಹಾಯ ಮಾಡಬಾರದು. ಅವರ ಚಲನಚಿತ್ರಗಳಲ್ಲಿ ಯಾವುದೇ ರೀತಿಯಲ್ಲೂ ಹಣವನ್ನು ಹೂಡಿಕೆ ಮಾಡಬಾರದು. ಸಲ್ಮಾನ್ ಖಾನ್ ತಮ್ಮ ಕುಟುಂಬದಿಂದ ದೂರ ಇರಬೇಕು ಎನ್ನುವ ರೀತಿ ವಿವಿಧ ಕಂಡೀಷನ್ ಅನ್ನು ಐಶ್ವರ್ಯ ರೈ ಸಲ್ಮಾನ್ ಖಾನ್ ಗೆ ಹೇಳಿದ್ದಾರೆ. ಐಶ್ವರ್ಯ ರೈ ಅವರು ಹಾಕಿರುವ ಕಂಡೀಷನ್ ಗಳು ಕೂಡ ಒಂದು ರೀತಿಯಲ್ಲಿ ಈ ಇಬ್ಬರ ಬ್ರೇಕಪ್ ಗೆ ಕಾರಣವಾಗಿದೆ.