ಕತ್ರಿನಾ ಕೈಫ್ ಮದುವೆಗೆ ಬಂದ ಸಲ್ಮಾನ್ ಖಾನ್ ಕತ್ರಿನಾಗೆ ನೀಡಿದ ದುಬಾರಿ ಗಿಫ್ಟ್ ಏನು ಗೊತ್ತಾ, ಶಾಕ್ ಆದ ವಿಕ್ಕಿ ಕೌಶಲ್.
ನಟಿ ಕತ್ರಿನಾ ಕೈಫ್ ದೇಶಕಂಡ ಖ್ಯಾತ ನಟಿ ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಕತ್ರಿನಾ ಕೈಫ್ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮೊನ್ನೆ ಮೊನ್ನೆತಾನೆ ದೇಶದ ಇನ್ನೊಬ್ಬ ಖ್ಯಾತ ನಟ ಅನಿಸಿಕೊಂಡಿರುವ ವಿಕ್ಕಿ ಕೌಶಲ್ ಜೊತೆ ನಟಿ ಕತ್ರಿನಾ ಕೈಫ್ ಹಸೆಮಣೆಯನ್ನ ಏರಿದ್ದು ಸದ್ಯ ಇವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆಗೆ ದೇಶದಿಂದ ಮತ್ತು ವಿದೇಶದಿಂದ ಹಲವು ಗಣ್ಯರು ಆಗಮಿಸಿದ್ದು ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಬಹುದು.
ಇನ್ನು ಕತ್ರಿನಾ ಕೈಫ್ ಮದುವೆಗೆ ಬಾಲಿವುಡ್ ಚಿತ್ರರಂಗದ ಹಲವು ಗಣ್ಯ ನಟ ನಟಿಯರು ಕೂಡ ಆಗಮಿಸಿದ್ದು ಬಾಲಿವುಡ್ ಚಿತ್ರರಂಗದ ಬಿಗ್ ಸ್ಟಾರ್ ಅನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಕೂಡ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಬಹುದು. ಇನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್ ಮದುವೆಗೆ ಬಂದ ಸಲ್ಮಾನ್ ಖಾನ್ ಅವರಿಗೆ ಕತ್ರಿನಾ ಕೈಫ್ ಅವರಿಗೆ ಭಾರಿ ದುಬಾರಿ ಬೆಲೆಬಾಳುವ ಉಡುಗೊರೆಯನ್ನ ಕೊಟ್ಟಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಕತ್ರಿನಾ ಕೈಫ್ ನಟ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಖಾಸಗಿ ಮಂಟಪದಲ್ಲಿ ಅದ್ದೂರಿಯಾಗಿ ಮದುವೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆಗೆ ನಟ ಸಲ್ಮಾನ್ ಖಾನ್ ಕೂಡ ಬಂದಿದ್ದು ಮದುವೆಯ ಉಡುಗೊರೆಯಾಗಿ ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಅವರಿಗೆ ಸುಮಾರು 3 ಕೋಟಿ ರೂಪಾಯಿ ಬೆಲೆಬಾಳುವ ರೇಂಜ್ ರೋವರ್ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ ಅನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಕತ್ ಹರಿದಾಡುತ್ತಿದೆ ಎಂದು ಹೇಳಬಹುದು.
ಹೌದು ನಟ ಸಲ್ಮಾನ್ ಖಾನ್ ಅವರು ಕತ್ರಿನಾ ಮತ್ತು ವಿಕ್ಕಿ ಕೌಶಲ್ ದಂಪತಿಗೆ ಮೂರೂ ಕೋಟಿ ಬೆಲೆಬಾಳುವ ದುಬಾರಿ ರೇಂಜ್ ರೋವರ್ ಕಾರನ್ನ ಉಡುಗೊರೆಯಾಗಿ ನೀಡಿದ್ದಾರಂತೆ. ಇನ್ನು ಕತ್ರಿನಾ ಕೈಫ್ ಮದುವೆಗೆ ನಟ ರಣಭೀರ್ ಕಪೂರ್ ಕೂಡ ಬಂದಿದ್ದು ನಟ ರಣಭೀರ್ ಕಪೂರ್ ಅವರು ಕತ್ರಿನ್ ಮತ್ತು ವಿಕ್ಕಿ ಕೌಶಲ್ ದಂಪತಿಗಳಿಗೆ ಸುಮಾರು 2.7 ಕೋಟಿ ಬೆಲೆಯ ಡೈಮಂಡ್ ನಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಇದೊಂದು ಸುದ್ದಿಯಾಗಿದ್ದು ಇದರ ಕುರಿತು ಕತ್ರಿನಾ ಕೈಫ್ ಅಥವಾ ವಿಕ್ಕಿ ಕೌಶಲ್ ಎಲ್ಲಿಯೂ ಮಾಹಿತಿಯನ್ನ ಕೊಟ್ಟಿಲ್ಲ. ಸ್ನೇಹಿತರೆ ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.