Lawrence Bishnoi: ಏಪ್ರಿಲ್ 30 ರಂದು ಸಲ್ಮಾನ್ ಖಾನ್ ಅನ್ನು ಮುಗಿಸುತ್ತೇನೆ, ಆತಂಕದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗ,.

ಏಪ್ರಿಲ್ 30 ರಂದು ಸಲ್ಮಾನ್ ಖಾನ್ ಅವರನ್ನ ಮುಗಿಸುತ್ತೇನೆ ಎಂದು ಲಾರೆನ್ಸ್ ಬಿಷ್ನೋಯ್ ಹೇಳಿದ್ದಾರೆ.

Salman Khan and Lawrence Bishnoi: ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ನಟನೆಯ ಮೂಲಕ ಸಲ್ಮಾನ್ ಖಾನ್ ಅವರು ಸಿನಿಮಾದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ.ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚಿಯೇ ಬೆದರಿಕೆ ಕರೆ ಬರುತ್ತಿದೆ ಎಂಬ ವಿಚಾರ ಹೊರ ಬಿದ್ದಿದೆ. ಇದರಿಂದ ಸಲ್ಲು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Salman Khan and Lawrence Bishnoi
Image Source: India Tv News

ಏಪ್ರಿಲ್ 30 ರಂದು ನಟ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆಯ ಕರೆ
ಹಲವು ದಿನಗಳಿಂದ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಬರುತ್ತಿದ್ದು, ಸಲ್ಮಾನ್ ಖಾನ್ ಅವರು ಭಯದಲ್ಲಿ ಬದುಕುತ್ತಿದ್ದಾರೆ ಎನ್ನಬಹುದು. ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಲಾರೆನ್ಸ್ ಬಿಷ್ನೋಯ್ ತಂಡದವರು ಪ್ಲ್ಯಾನ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರಿಗೆ ಬಿಗಿ ಭರಾಟೆ ನೀಡಿದ್ದಾರೆ. ಹೋದಲ್ಲಿ ಬಂದಲ್ಲಿ ಅವರನ್ನು ಪೊಲೀಸರು ಕಾಯುತ್ತಿದ್ದಾರೆ. ಈಗಾಗಲೇ ಭಯದಲ್ಲಿರುವ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಬೆದರಿಕೆಯ ಕರೆ ಬಂದಿದೆ. ಏಪ್ರಿಲ್ 30 ರಂದು ಅವರನ್ನು ಕೊಲೆ ಮಾಡುವುದಾಗಿ ರಾಕಿ ಹೆಸರಿನ ವ್ಯಕ್ತಿ ಒಬ್ಬ ಕರೆ ಮಾಡಿದ್ದಾರೆ. ಇದರಿಂದ ನಟ ಸಲ್ಮಾನ್ ಖಾನ್ ಅವರಿಗೆ ಮತ್ತಷ್ಟು ಸಂಕಟ ಎದುರಾಗಿದೆ.

Salman Khan and Lawrence Bishnoi
Image Source: India Today

ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಯ ಕರೆ ಬರಲು ಕಾರಣ
ಕೊಲೆ ಬೆದರಿಕೆ ವಿಚಾರ ಕೇಳಿ ಸಲ್ಲು ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇನ್ನು ನಟ ಸಲ್ಮಾನ್ ಖಾನ್ ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಸಲ್ಮಾನ್ ಖಾನ್ ಮನೆ ಮುಂದೆ ಅಭಿಮಾನಿಗಳು ಬರದಂತೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ.

ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಲಾರೆನ್ಸ್ ಪ್ಲ್ಯಾನ್ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಬಿಷ್ನೋಯ್ ಸಮುದಾಯದವರಿಗೆ ಕೃಷ್ಣ ಮೃಗ ಎಂದರೆ ದೇವರ ಸಮಾನ. ಅದನ್ನೇ ನಟ ಸಲ್ಲು ಹತ್ಯೆ ಮಾಡಿದ್ದರಿಂದ ಲಾರೆನ್ಸ್ ಗೆ ದ್ವೇಷ ಹುಟ್ಟಿದೆ. ಈ ಕಾರಣದಿಂದಲೇ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆಯ ಕರೆ ಬರುತ್ತಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

Salman Khan and Lawrence Bishnoi
Image Source: India Today

Join Nadunudi News WhatsApp Group