Samantha In Palani Murugan Temple: 600 ಮೆಟ್ಟಿಲಿಗೆ ಕರ್ಪೂರ ದೀಪ ಹಚ್ಚಿದ ಸಮಂತಾ, ಹರಕೆ ಪೂರೈಸಿದ ಸಮಂತಾ.

Actress Samantha Visit Temple: ತೆಲುಗು ಖ್ಯಾತ ನಟಿ ಸಮಂತಾ ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ತಮ್ಮ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ನಟಿ ಸಮಂತಾ ತಮಿಳುನಾಡಿನ (Tamil Nadu) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಟಿ ದೇವಸ್ಥಾನದಲ್ಲಿರುವ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Samantha lit the camphor lamp at 600 steps, Samantha fulfilled her wish.
Image Credit: instagram

ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಸಮಂತಾ ಭೇಟಿ
ನಟಿ ಸಮಂತಾ ರುತ್ ಪ್ರಭು ಇದೀಗ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ 600 ಮೆಟ್ಟಿಲುಗಳನ್ನು ಹತ್ತಿದ್ದಾರೆ.

ಪ್ರತಿ ಮೆಟ್ಟಿಲುಗಳನ್ನು ಏರುತ್ತ ನಟಿ ಪ್ರತಿಯೊಂದು ಮೆಟ್ಟಿಲಲ್ಲು ಕರ್ಪೂರ ಹಚ್ಚಿ ಪೂಜೆ ಮಾಡಿದ್ದಾರೆ. ಅಲ್ಲಿನ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.

Samantha visits the Palani Murugan Temple in Tamil Nadu
Image Credit: indiatoday

ಸಮಂತಾ ಶಾಕುಂತಲಂ ಮೂವಿ ರಿಲೀಸ್
ನಟಿ ಸಮಂತಾ ರುತ್ ಪ್ರಭು ಮಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಟಿಯ ಶಾಕುಂತಲಂ ಚಿತ್ರದ ಬಗ್ಗೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Join Nadunudi News WhatsApp Group

ಸಮಂತಾ ಅವರ ಶಾಕುಂತಲಂ ಚಿತ್ರ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಇವರ ಶಾಕುಂತಲಂ ಚಿತ್ರದ ಬಿಡುಗಡೆ ಪೋಸ್ಟ್ ಫೋನ್ ಆಗುತ್ತಿದೆ. ಫೆಬ್ರವರಿ 17 ರಂದು ಸಮಂತಾ ನಟನೆಯ ಶಾಕುಂತಲಂ ತೆರೆಯ ಮೇಲೆ ಬರಲಿದೆ. ಶಾಕುಂತಲಂ ಚಿತ್ರದಲ್ಲಿನ ಸಮಂತಾ ನಟನೆಯನ್ನು ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ.

Actress Samantha Ruth Prabhu came to a temple in Tamil Nadu and paid her respects
Image Credit: instagram

ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಮಾತನಾಡಿದ ನಟಿ ಸಮಂತಾ
ನಟಿ ಸಮಂತಾ ತಮ್ಮ ಆರೋಗ್ಯದ ಕುರಿತು ಮಾಹಿತಿಗಳನ್ನು ಅಭಿಮನಿಗಳಿಗೆ ನೀಡುತ್ತಲೇ ಇರುತ್ತಾರೆ. ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುತ್ತ ನಟಿ ಅದೆಷ್ಟೋ ಬಾರಿ ಭಾವುಕರಾಗಿದ್ದರು.

” ನಾನು ಕಷ್ಟಗಳೊಂದಿಗೆ ಹೋರಾಡುತ್ತಾ ಜೀವನ ಸಾಗಿಸುತ್ತಿದ್ದೇನೆ. ನಾನು ಮಾತ್ರವಲ್ಲ, ಪ್ರತಿಯೊಬ್ಬಳರಿಗೂ ಏನಾದರು ಒಂದು ಸಮಸ್ಯೆ ಇದ್ದೆ ಇರುತ್ತದೆ. ಎಲ್ಲರು ಆ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಮುನ್ನುಗುತ್ತಾ ಇರುತ್ತಾರೆ. ಆದರೂ ಕೊನೆಗೂ ನಾನು ಗೆದ್ದೇ ಗೆಲ್ಲುತ್ತೇನೆ.

Samantha Ruth Prabhu lights camphor lamp on 600 steps of Palani Murugan temple in Tamil Nadu.
Image Credit: india

ನನ್ನ ಪ್ರಾಣಕ್ಕೆ ತೊಂದರೆ ಇದೆ ಎಂದು ಸೋಶಿಯಲ್ ಮಿಡಿಯಾ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿದ ಹಾಗೆ ಖಂಡಿತ ಜೀವಕ್ಕೆ ಏನು ತೊಂದರೆ ಇಲ್ಲ. ಆದರೆ ಗಂಬೀರವಾದ ಆರೋಗ್ಯ ಸಮಸ್ಯೆ ಇದೆ. ಇದರಿಂದ ಹೊರ ಬರಲು ಸ್ವಲ್ಪ ಸಮಯ ಬೇಕು” ಎಂದಿದ್ದರು.

Join Nadunudi News WhatsApp Group