ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಕಂಡ ಖ್ಯಾತ ನಟ ಮತ್ತು ನಟಿಯರಲ್ಲಿ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಒಬ್ಬರು ಎಂದು ಹೇಳಬಹುದು. ಕೆಲವು ವರ್ಷಗಳ ಕಾಲ ನಾಲ್ಕು ವರ್ಷದ ಹಿಂದೆ ಮದುವೆಯನ್ನ ಮಾಡಿಕೊಂಡ ಈ ದಂಪತಿಗಳ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಎಂದು ಹೇಳಬಹುದು. ಹೌದು ನಟಿ ಸಮಂತಾ ಮತ್ತು ನಟ ನಾಗಚೈತನ್ಯ ವಿಚ್ಛೇಧನ ಪಡೆದುಕೊಳ್ಳುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯವನ್ನ ಹೇಳಿದರು ಎಂದು ಹೇಳಬಹುದು. ಹೌದು ಬಹಳ ಸಮಾಲೋಚನೆ ಮತ್ತು ಚಿಂತಿಸಿದ ನಂತರ ಚಾಯ್ ಮತ್ತು ನಾನು ನಮ್ಮದೇ ಹಾದಿಯನ್ನು ಅನುಸರಿಸಲು ಗಂಡ ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ.
ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧವು ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಸಮಂತಾ ಹೇಳಿಕೊಂಡಿದ್ದರು. ಇನ್ನು ವಿಚ್ಛೇಧನ ಪಡೆದುಕೊಂಡ ನಂತರ ಕೆಲವು ಪ್ರವಾಸವನ್ನ ಮಾಡಿದ ನಟಿ ಸಮಂತಾ ಈಗ ಮತ್ತೆ ತನ್ನ ಮಾಜಿ ಗಂಡ ನಾಗಚೈತನ್ಯ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟಿ ಸಮಂತಾ ನಾಗಚೈತನ್ಯ ಅವರಿಗೆ ಕೊಟ್ಟ ಆ ಶಾಕ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೆಡೊಯುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ವಿಚ್ಛೇಧನದ ನಂತರ ಪ್ರವಾಸವನ್ನ ಮಾಡಿದ ನಟಿ ಸಮಂತಾ ಅವರು ಈಗ ಮಾಜಿ ಪತಿಗೆ ಶಾಕ್ ಆಗುವಂತೆ ಹಿಂದೆ ಪತಿಯ ಜೊತೆ ತೆಗೆಸಿಕೊಂಡಿದ್ದ ಎಲ್ಲಾ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಸಮಂತಾ ಅವರು ನಾಗಚೈತನ್ಯ ಅವರ ಜೊತೆ ಮಾಡಿಕೊಂಡ ಮದುವೆಯ ಫೋಟೋಗಳನ್ನ ಕೂಡ ಅಳಿಸಿಹಾಕಿದ್ದಾರೆ. ಇನ್ನು ಮದುವೆಯ ಫೋಟೋಗಳು ಮಾತ್ರವಲ್ಲದೆ ಅವರ ವೆಕೇಷನ್ ಫೋಟೋಗಳನ್ನು ಅಳಿಸಿದ್ದಾರೆ. ವಿವಾಹ ವಿಚ್ಚೇದನೆಯ ವಾರಗಳ ನಂತರ ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಅವರೊಂದಿಗೆ ಇರುವ ಎಲ್ಲಾ ಫೋಟೋಗಳನ್ನು Instagramನಿಂದ ಡಿಲೀಟ್ ಮಾಡಿದ್ದಾರೆ.
ಸದ್ಯ ಸಮಂತಾ ಫೋಟೋ ಡಿಲೀಟ್ ಮಾಡಿದ್ದು ಅಭಿಮಾನಿಗಳು ಪ್ರಶ್ನೆಗಳ ಸುರಿಮಲೆಯನ್ನ ಸುರಿಸಿದ್ದು ಫೋಟೋಸ್ ಡಿಲೀಟ್ ಮಾಡುವಂತ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಇನ್ನು ಸಮಂತಾ ಅವರ ಫೀಡ್‌ನಲ್ಲಿ ಉಳಿದಿರುವ ಚೈತನ್ಯ ಅವರ ಫೋಟೋಗಳು ಅವರ ಮುದ್ದಿನ ಹ್ಯಾಶ್‌ನೊಂದಿಗಿನ ಫೋಟೋ, ಸ್ನೇಹಿತರೊಂದಿಗೆ ಗುಂಪು ಫೋಟೋ ಮತ್ತು ಅವರ ಒಟ್ಟಿಗೆ ಪ್ರವಾಸದ ಕೆಲವು ಹಳೆಯ ಫೋಟೋಗಳು. ಇನ್ನು ಸಮಂತಾ ತನ್ನ ಸೋಷಿಯಲ್ ಮೀಡಿಯಾದ ಮಾಧ್ಯಮ ಖಾತೆಗಳಲ್ಲಿ ತನ್ನ ಪೂರ್ಣ ಹೆಸರನ್ನು ಸಮಂತಾ ಅಕ್ಕಿನೇನಿ ಬದಲಿಗೆ ‘S’ ಎಂದು ಬದಲಾಯಿಸಿಕೊಂಡಿದ್ದಾರೆ. ಸ್ನೇಹಿತರೆ ಸಮಂತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.