Actress Samantha: ಹೊಸ ಗೆಳೆಯನನ್ನ ಪರಿಚಯಿಸಿದ ನಟಿ ಸಮಂತಾ, ಜನರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ ಸಮಂತಾ.
ಹೊಸ ಗೆಳೆಯನ ಜೊತೆ ನಟಿ ಸಮಂತಾ ಕಾಣಿಸಿಕೊಂಡ ಕಾರಣ ಜನರಲ್ಲಿ ಸಮಂತಾ ಅವರ ಎರಡನೆಯ ಮದುವೆಯ ಬಗ್ಗೆ ಪ್ರಶ್ನೆ ಮೂಡಿದೆ.
Samantha Ruth Prabhu And Dr.jewel Gamadia: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಹಾಗು ನಟ ನಾಗ ಚೈತನ್ಯ ಸಾಕಷ್ಟು ವರ್ಷಗಳವರೆಗೂ ಪ್ರೀರ್ತಿಸಿ ಮದುವೆಯಾಗಿದ್ದರು. ನಂತರ ವಿಚ್ಚೇಧನ ಕೂಡ ಪಡೆದಿದ್ದಾರೆ. ಈ ವಿಚಾರ ಎಲ್ಲರಿಗೂ ತಿಳಿದೇ ಇದೆ.
ಹಾಗೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಚೇಧನ ಪಡೆದಿರುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ ಆಗಿದೆ. ಸಮಂತಾ ಹಾಗು ನಾಗ ಚೈತನ್ಯ (Naga Chaitanya)ಮತ್ತೆ ಒಂದಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋ ಹಂಚಿಕೊಂಡ ನಟಿ ಸಮಂತಾ
ನಟಿ ಸಮಂತಾ ಅವರು ವಿಚ್ಚೇಧನ ಪಡೆದಿದ್ದರು ಅವರಿಗೆ ಮದುವೆ ಮೇಲಿನ ನಂಬಿಕೆ ಕಡಿಮೆ ಆಗಲಿಲ್ಲ. ಇದೀಗ ತಮ್ಮ ಸ್ನೇಹಿತ ಒಬ್ಬನ ಮದುವೆಗೆ ಹೆಣ್ಣು ಹುಡುಕುತ್ತಿದ್ದಾರಂತೆ. ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ. ನಟಿ ಸಮಂತಾ ರುತ್ ಪ್ರಭು ಡಾಕ್ಟರ್ ಜ್ವೆಲ್ ಗಮಾಡಿಯಾ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸಮಂತಾ ಅವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಸ್ನೇಹಿತನಿಗೆ ಹುಡುಗಿ ಹುಡುಕುತ್ತಿರುವ ನಟಿ ಸಮಂತಾ
ಫೋಟೋ ಹಂಚಿಕೊಂಡ ನಟಿ ಸಮಂತಾ, ಇವರಿಗೆ ಒಂದು ಜೋಡಿ ಹುಡುಕುತ್ತಿದ್ದೇನೆ. ಇವರು ತುಂಬಾ ಸ್ಮಾರ್ಟ್ ಆಗಿದ್ದಾರೆ ಎಂದು ಬರೆದಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದೆ. ಇನ್ನು ಸಮಂತಾ ಅಭಿಮಾನಿಗಳು ಸಮಂತಾ ಕೂಡ ಮತ್ತೆ ಮದುವೆಯಾಗಲು ಬಯಸುತ್ತಿದ್ದಾರೆ.