Samantha And Naga Chaitanya Latest News: ಚಿತ್ರರಂಗದಲ್ಲಿರುವ ಸ್ಟಾರ್ (Star) ದಂಪತಿಗಳ ಬದುಕಿನಲ್ಲಿ ಏನೆಲ್ಲ ನಡೀತಾ ಇದೆ ಅಂದು ತಿಳಿದುಕೊಳ್ಳುದಕ್ಕೆ ಎಲ್ಲರಿಗೂ ಕೂತುಹಲ ಇರುತ್ತದೆ. ಅದರಲ್ಲೂ ಮದುವೆ ಆದ ಜೋಡಿಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲ ಜಾಸ್ತಿನೇ ಇರುತ್ತದೆ.
ತೆಲುಗು ಚಿತ್ರರಂಗದಲ್ಲಿ ಕಳೆದ ವರ್ಷ ಒಬ್ಬ ಸ್ಟಾರ್ ನಟ ಹಾಗು ನಟಿಯ ಜೋಡಿಯ ಬಗ್ಗೆ ಬಹಳ ಸುದ್ದಿಯಲ್ಲಿತ್ತು. ಆ ಸುದ್ದಿಯಾಗಿರುವುದಕ್ಕೆ ಮುಖ್ಯ ಕಾರಣ ವೆಂದರೆ ಅವರಿಬ್ಬರೂ ವೈವಾಹಿಕ ಜೀವನದಿಂದ ಬೇರಾಗಿರುವುದು.
ತೆಲುಗು ಸಿನಿ ಪ್ರೇಕ್ಷಕರು ಅತಿ ಹೆಚ್ಚಾಗಿ ಇಷ್ಟ ಪಡುತ್ತಿರುವ ಜೋಡಿ ಎಂದರೆ ಸಮಂತಾ ರುತ್ ಪ್ರಭು (Samantha Rut Prabhu) ಮತ್ತು ನಾಗ ಚೈತನ್ಯ (Naga chaithanya). ಇವರಿಬ್ಬರು ತಮ್ಮ ಮದುವೆ ಜೀವನವನ್ನು ಕಡಿದುಕೊಳ್ಳಲು ಮುಂದಾದಾಗ ಅಭಿಮಾನಿಗಳಲ್ಲೂ ನೋವನ್ನು ವ್ಯಕ್ತಪಡಿಸುತ್ತಾರೆ.
ಇವರಿಬ್ಬರು ತಮ್ಮ ಮದುವೆಯನ್ನು ಕೊನೆಗೊಳಿಸುವಾಗ ಜಂಟಿ ಹೇಳಿಕೆಯನ್ನು ಘೋಷಿಸಿದಾಗ ಅಭಿಮಾನಿಗಳು ಒಂದು ಕ್ಷಣ ದಿಗ್ಬ್ರಮೆ ವ್ಯಕ್ತ ಪಡಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಸಮಂತಾ ಮತ್ತು ನಾಗ ಚೈತನ್ಯ
ಇವರಿಬ್ಬರು ಜೊತೆಯಲ್ಲಿರುವಾಗ ಇವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿರುವ (Social Media Account) ಪುಟಗಳು ಅವರ ಸಿನಿಮಾ, ಪರಸ್ಪರರ ಬಗ್ಗೆ ಮೆಚ್ಚುಗೆ ಮಾತುಗಳು ಇವರು ಒಟ್ಟಿಗಿದ್ದ ಮಧುರ ಕ್ಷಣಗಳ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿದ್ದರು.
ಅಷ್ಟೇ ಅಲ್ಲದೆ ಇವರಿಬ್ಬರು ಬೇರ್ಪಟ್ಟಾಗಲು ಸಹ ಇನ್ನೂವರೆಗೂ ನಟಿ ಸಮಂತಾ ತನ್ನ ಗಂಡ ನಾಗ ಚೈತನ್ಯ ಅವರ ಬಗ್ಗೆ ನೆನಪಿಸಿ ಕೊಳ್ಳುತ್ತಾ ಇದ್ದರತಂತೆ. ಅದೇ ರೀತಿ ನಟ ನಾಗ ಚೈತನ್ಯ ಸಹ ತನ್ನ ಹೆಂಡತಿ ಸಮಂತಾ ಅವರ ಬಗ್ಗೆ ನೆನಪಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಸಮಂತಾ ಮತ್ತು ನಾಗ ಚೈತನ್ಯ
ಈಗ ಮತ್ತೊಂದೆಡೆ ನಾಗ ಚೈತನ್ಯ ನಟಿ ಸಮಂತ ಅವರಿಗೆ ಹೇಗೆ ಭೇಟಿಯಾದರು. ಸಮಂತ ಅವರರಿಗೆ ಯಾವಾಗ ಪ್ರಪೋಸ್ ಮಾಡಿದರು ಎಂಬ ಸುದ್ದಿ ಹರಡುತ್ತಿದೆ. ಹಿಂದೊಮ್ಮೆ ಪ್ರತಿಕಾಗೋಷ್ಠಿಯಲ್ಲಿ ರಾಹುಲ್ ರವೀಂದ್ರನ್ (Rahul Ravindran) ಅವರೊಂದಿಗೆ ಸಂಭಾಷಣೆಯಲ್ಲಿ ಸಾಮಂತ ರುತ್ ಪ್ರಭು ಅವರೊಂದಿಗಿನ ತಮ್ಮ ಸಂಭಂದವನ್ನು ತೆಲುಗು ನಟ ತೆರೆದಿದ್ದರು.
ಸುಮಾರು ಹತ್ತು ವರ್ಷಗಳ ಹಿಂದೆಯೇ ‘ಯೇ ಮಾಯಾ ಚೆಸಾವೆ’ ಚಿತ್ರದ ಚಿತ್ರೀಕರಣದಲ್ಲಿ ಭೇಟಿಯಾದೆವು ಮತ್ತು ಕಳೆದ ಏಳು ವರ್ಷಗಳಿಂದ ಸಮಂತ ನನ್ನ ಮೆಚ್ಚಿಸಲು ನಾನು ಪ್ರಯತ್ನ ಮಾಡಿದ್ದೇನೆ. ಅವಳನ್ನು ಮದುವೆ ಆಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ತೆಲುಗು ನಟ ಹೇಳಿದ್ದಾರೆ.