ನಟಿ ಸಮಂತಾ ದೇಶದ ಚಿತ್ರರಂಗ ಕಂಡ ಖ್ಯಾತ ನಟಿ ಎಂದು ಹೇಳಬಹುದು. ಹೌದು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಸಮಂತಾ ಅವರು ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಕಳೆದ ತಿಂಗಳು ತನ್ನ ಪತಿ ನಾಗಚೈತನ್ಯ ಅವರಿಗೆ ವಿಚ್ಛೇಧನ ಕೊಡುವುದರ ಮೂಲಕ ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗಿದ್ದರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಸಮಂತಾ ಅವರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು ಜನರು ಈ ಸುದ್ದಿಯನ್ನ ಕೇಳಿ ಶಾಕ್ ಆಗಿದ್ದಾರೆ ಎಂದು ಹೇಳಬಹುದು.
ಇನ್ನು ನಟಿ ಸಮಂತಾ ಅವರು ದೇಶದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಒಂದು ಡಾನ್ಸ್ ಮಾಡಲು ಪಡೆದ ಸಂಭಾವನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟನೆಯನ್ನ ಮಾಡಲು ನಟಿ ಸಮಂತಾ ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.
ಬಾಹುಬಲಿ ಮತ್ತು ಕೆಜಿಎಫ್ ಹಾದಿಯಲ್ಲಿ ಹಾಗುತ್ತಿರುವ ಈ ಚಿತ್ರವನ್ನ ನೋಡಲು ಇಡೀ ದೇಶದ ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಟಿ ಸಮಂತಾ ಸಿನಿಮಾದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಲ್ಲು ಅರ್ಜುನ್ ಜೊತೆಗೆ ಡ್ಯಾನ್ಸ್ ಮಾಡಲಿದ್ದಾರೆ ಎಂದು ಸಿನಿಮಾ ತಂಡ ತಿಳಿಸಿದೆ. ಇನ್ನು ಈ ಚಿತ್ರದಲ್ಲಿ ನಟಿ ಸಮಂತಾ ಅವರು ತನ್ನ ವೃತ್ತಿ ಜೀವನದಲ್ಲಿ ವಿಶೇಷವಾದ ಹೆಜ್ಜೆಯನ್ನ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ 5 ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 1.50 ಕೋಟಿ ಹಣವನ್ನು ಸಮಂತಾ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಕೇವಲ ಐದು ನಿಮಿಷದ ಹಾಡಿಗೆ 1.50 ಕೋಟಿ ಸಂಭಾವನೆಯನ್ನು ಮೈತ್ರಿ ಮೂವೀಸ್ ನೀಡುತ್ತಿದೆಯಂತೆ. ಇನ್ನು ಅಷ್ಟೇ ಅಲ್ಲದೆ ಈ ಹಾಡಿಗಾಗಿ ಮೈತ್ರಿ ಮೂವೀಸ್ ಬರೊಬ್ಬರು ಐದು ಕೋಟಿ ರೂಪಾಯಿ ಖರ್ಚು ಮಾಡಲಿದೆಯಂತೆ. ಮೂಲಗಳ ಪ್ರಕಾರ ಸಮಂತಾಗೂ ಮೊದಲು ಹಾಡಿನಲ್ಲಿ ನೃತ್ಯ ಮಾಡುವಂತೆ ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತಂತೆ, ಆದರೆ ಪೂಜಾ ಹೆಗ್ಡೆ ಇನ್ನೂ ದೊಡ್ಡ ಮೊತ್ತದ ಸಂಭಾವನೆ ಕೇಳಿದರಂತೆ. ಅಲ್ಲದೇ ಪೂಜಾ ಹೆಗ್ಡೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಸಹ ಇರುವ ಕಾರಣ ಪೂಜಾ ಹೆಗ್ಡೆ ಬದಲಿಗೆ ಸಮಂತಾರನ್ನು ಚಿತ್ರತಂಡ ಕೇಳಿದೆ. ಸ್ನೇಹಿತರೆ ಪುಷ್ಪ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.