Samantha: Oo antava ಐಟಂ ಸಾಂಗ್ ಗೆ ಸಮಂತಾ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ, ಅಬ್ಬಾ ದುಬಾರಿ ಸಂಭಾವನೆ.

ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ನಟಿ ಸಮಂತಾ ಪಡೆದುಕೊಂಡ ಸಂಭಾವನೆ.

Samantha Remuneration Pushpa Movie Song: ಸೌತ್ ನ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಮಂತಾ ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ಚಿತ್ರೀಕರಣದಲ್ಲಿ ಕೂಡ ಬ್ಯುಸಿ ಆಗಿದ್ದಾರೆ.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ನಟಿ ಸಮಂತಾ ಇದೀಗ ವಿಜಯ್ ದೇವರಕೊಂಡ ಅವರ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಖುಷಿ ಚಿತ್ರ ಇನ್ನೇನು ಸದ್ಯದ್ಲಲೇ ತೆರೆಯ ಮೇಲೆ ಬರಲಿದೆ. ಪ್ರಸ್ತುತ ಸಮಂತಾ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.

Samantha Remuneration Pushpa Movie Song
Image Credit: Indiatoday

ಐಟೆಮ್ ಸಾಂಗ್ ನಲ್ಲಿ ಹೆಜ್ಜೆ ಹಾಕಿದ ಸ್ಯಾಮ್
ಇನ್ನು ನಟಿ ಸಮಂತಾ ರುತ್ ಪ್ರಭು ಅವರು ಅಲ್ಲೂ ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿ ಐಟೆಮ್ ಸಾಂಗ್ ವೊಂದರಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಪುಷ್ಪ ಚಿತ್ರ ಬಿಡುಗಡೆಗೊಂಡ ವೇಳೆ ನಟಿಯ ಸಾಂಗ್ ಭರ್ಜರಿ ಸದ್ದು ಮಾಡಿತ್ತು.

ಊ ಅಂಟವಾ ಮಾವ ಉಹೂ ಅಂಟವಾ ಮಾವ ಸಾಂಗ್ ಗೆ ನಟಿ ಸೊಂಟ ಬಳುಕಿಸಿದ್ದರು. ಇನ್ನು ಈ ಸಾಂಗ್ ನಲ್ಲಿ ನಟಿ ಪಡೆದಿರುವ ಸಂಭಾವನೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಉ ಅಂಟವಾ ಸಾಂಗ್ ಗೆ ಸ್ಯಾಮ್ ಪಡೆದ ಸಂಭಾವನೆಯ ಬಗ್ಗೆ ಮಾಹಿತಿ ಲಭಿಸಿದೆ.

Samantha Remuneration Pushpa Movie Song
Image Credit: Lehren

ಉ ಅಂಟವಾ ಐಟಂ ಸಾಂಗ್ ಗೆ ಸಮಂತಾ ಪಡೆದುಕೊಂಡ ಸಂಭಾವನೆ ಎಷ್ಟು
ನಟಿ ಸಮಂತಾ ಅವರು ತೆಲುಗು ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಯಾವುದೇ ಸಿನಿಮಾದಲ್ಲಿ ನಟಿಸಿದರು ಕೂಡ ಭರ್ಜರಿ ಸಂಭಾವನೆ ಪಡೆಯುತ್ತಾರೆ.

Join Nadunudi News WhatsApp Group

ಇನ್ನು ಮುಖ್ಯ ಪಾತ್ರದಲ್ಲಿ ನಟಿಸುವ ನಟಿ ಐಟೆಮ್ ಸಾಂಗ್ ನಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿರುತ್ತಾರೆ. ನಟಿ ಸಮಂತಾ ಅವರ ಊ ಅಂಟವಾ ಐಟೆಮ್ ಸಾಂಗ್ 3 ನಿಮಿಷ 48 ಸೆಕೆಂಡ್ ಗಳ ಕಾಲ ಬಹಳ ಅದ್ಭುತವಾಗಿ ಮೂಡಿಬಂದಿದೆ. ಈ ಸಾಂಗ್ ನಲ್ಲಿ ಸ್ಯಾಮ್ ಹೆಜ್ಜೆ ಹಾಕಲು ಬರೋಬ್ಬರಿ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

Join Nadunudi News WhatsApp Group