Chitti Babu: ಚಿಟ್ಟಿ ಬಾಬು ಕಿವಿ ಕೂದಲನ್ನ ನೋಡಿ ಕೌಂಟರ್ ಕೊಟ್ಟ ನಟಿ ಸಮಂತಾ.
ಚಿಟ್ಟಿ ಬಾಬು ಕಿವಿಯ ಮೇಲಿನ ಕೂದಲನ್ನ ಕಂಡು ನಟಿ ಸಮಂತಾ ಕೌಂಟರ್ ಕೊಟ್ಟಿದ್ದಾರೆ.
Samantha Ruth Prabhu About Chitti Babu: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಿದೆ.
ಸಮಂತಾ ಅಭಿನಯದ ಶಾಕುಂತಲಂ ಚಿತ್ರಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ನಟಿ ಸಮಂತಾ ಅವರು ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ. ಹಲವು ಸಿನಿಮಾದಲ್ಲಿ ನಟಿಸಲು ನಟಿ ಸಮಂತಾ ಮುಂದಾಗಿದ್ದಾರೆ.
ಸಮಂತಾ ಬಗ್ಗೆ ಹೀಯಾಳಿಕೆಯ ಕಮೆಂಟ್ ಮಾಡಿದ ಚಿಟ್ಟಿಬಾಬು
ಶಾಕುಂತಲಂ ಸಿನಿಮಾದ ಪ್ರಚಾರದ ವೇಳೆ ಆರೋಗ್ಯ ಸರಿಯಿಲ್ಲದ ಕಾರಣ ಸಮಂತಾ ಮನೆಯಲ್ಲಿಯೇ ಉಳಿಯಬೇಕಾಯಿತು. ಅದರಲ್ಲೂ ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನಟ ಹಾಗೂ ನಿರ್ಮಾಪಕ ತ್ರಿಪುರನೇನಿ ಚಿಟ್ಟಿಬಾಬು (Tripuraneni Chittibabu) ಅವರು ಸಮಂತಾ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ.
ಸಮಂತಾ ಮುಖ ಮುದುಕಿಯಂತಾಗಿದೆ ಎಂದು ಹಿಯಾಳಿಸಿದ್ದರು. ತನಗೆ ಅನಾರೋಗ್ಯವಿಲ್ಲ ಎಂಬಂತೆ ವರ್ತಿಸುವುದರಿಂದ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರುತ್ತಾರೆ ಎಂದು ಸಮಂತಾ ಅಂದುಕೊಂಡಿದ್ದಾರೆ. ಸಿಂಪತಿಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಸಮಂತಾ ಬಗ್ಗೆ ಚಿಟ್ಟಿ ಬಾಬು ಕಮೆಂಟ್ ಮಾಡಿದ್ದರು.
ಚಿಟ್ಟಿಬಾಬು ಅವರಿಗೆ ತಿರುಗೇಟು ಕೊಟ್ಟ ನಟಿ ಸಮಂತಾ
ಇದೀಗ ಸಮಂತಾ ಚಿಟ್ಟಿಬಾಬು ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಅವರ ಕಿವಿಯಲ್ಲಿ ಕೂದಲಿರುವ ವಿಷಯವನ್ನು ಪ್ರಸ್ತಾಪಿಸಿ ಕಮೆಂಟ್ ಮಾಡಿದ್ದಾರಂತೆ. ಜನರ ಕಿವಿಯಿಂದ ಕೂದಲು ಏಕೆ ಬರುತ್ತದೆ ಎಂದು ಗೂಗಲ್ ಸರ್ಚ್ ಮಾಡಿದರೆ, ಟೆಸ್ಟೋಸ್ಟೆರಾನ್ ಅಂಶ ಹೆಚ್ಚಿರುವುದರಿಂದ ಎನ್ನುತ್ತಾರೆ ವೈದ್ಯರು.
ಚಿಟ್ಟಿ ಬಾಬುಗೆ ಟೆಸ್ಟೋಸ್ಟೆರಾನ್ ಹೆಚ್ಚಿ ಈ ರೀತಿ ಮಾತನಾಡುತ್ತಾರೆ ಎಂಬರ್ಥದಲ್ಲಿ ನಟಿ ಸಮಂತಾ ತಿರುಗೇಟು ನೀಡಿದ್ದಾರೆ. ಇನ್ನು ನಟಿ ಸಮಂತಾ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ಅವರು ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ.