Vijay Devarakonda: ಪ್ರೀತಿಸುತ್ತಿರುವ ಹುಡುಗಿ ಯಾರೆಂದು ಹೇಳಿದ ವಿಜಯ್ ದೇವರಕೊಂಡ, ರಶ್ಮಿಕಾ ಕತೆ ಏನು…?

ವಿಜಯ್ ಅವರು ರಶ್ಮಿಕಾ ಅಲ್ಲದೆ ಬೇರೆ ಹುಡುಗಿಯನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Vijay Devarakonda About Crush: ಟಾಲಿವುಡ್ ನ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ಸದ್ಯ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಾಗಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಡೇಟಿಂಗ್ ವಿಚಾರವಾಗಿ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಾಗುತ್ತಾರೆ.

ಇತ್ತೀಚೆಗಷ್ಟೇ ರಶ್ಮಿಕಾ ಅವರು ಧರಿಸಿದ ಶರ್ಟ್ ವಿಜಯ್ ಹಾಗು ರಶ್ಮಿಕಾ ಲವ್ ಕಹಾನಿಗೆ ಇನ್ನೊಂದು ಟ್ವಿಸ್ಟ್ ನೀಡಿತ್ತು. ಸದ್ಯ ಚಿತ್ರರಂಗದಲ್ಲಿ ರಶ್ಮಿಕಾ ಹಾಗೂ ವಿಜಯ್ ಲವ್ ಸ್ಟೋರಿ ಹಾಟ್ ಟಾಪಿಕ್ ಆಗಿದೆ.

Vijay Devarakonda About Samantha
Image Credit: Ottplay

ವಿಜಯ್ ದೇವರಕೊಂಡ ಹಾಗೂ ಸಮಂತಾ ಮೂವಿ
ಇನ್ನು ನಟ ವಿಜಯ್ ದೇವರಕೊಂಡ ಅವರು ನಟಿ ಸಮಂತಾ (Samantha) ಅವರ ಜೊತೆ ಖುಷಿ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದಿದೆ. ಇದೆ. ಈಗಾಗಲೇ ಖುಷಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಇನ್ನು ಖುಷಿ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖುಷಿ ಚಿತ್ರದ ಒಂದಿಷ್ಟು ಪೋಸ್ಟರ್ ಗಳು ವೈರಲ್ ಆಗುತ್ತಿದೆ. ಹೀಗಿರುವಾಗ ನಟ ವಿಜಯ್ ದೇವರಕೊಂಡ ಇದೀಗ ಸ್ಯಾಮ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಮಂತಾ ನನ್ನ ಕ್ರಶ್ ಎಂದ ನಟ ವಿಜಯ್ ದೇವರಕೊಂಡ
ಟಾಲಿವುಡ್ ಅಂಗಳದಲ್ಲಿ ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ ಹೈಲೈಟ್ ಆಗಿತ್ತು. ವಿಜಯ್ ಹಾಗು ರಶ್ಮಿಕಾ ಗೀತಾ ಗೋವಿಂದಂ ಜೋಡಿ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಾರೆ. ರಶ್ಮಿಕಾ ವಿಜಯ್ ಪ್ರೀತಿಯ ಬಗ್ಗೆ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ವಿಜಯ್ ದೇವರಕೊಂಡ ಪ್ರೀತಿಸುವ ಹುಡುಗಿಯ ಬಗ್ಗೆ ಹೊಸ ಸುದ್ದಿ ಕೇಳಿಬಂದಿದೆ.

Join Nadunudi News WhatsApp Group

samantha ruth prabhu and vijay devarakonda latest news
Image Credit: Indulgexpress

ರಶ್ಮಿಕಾ ಅಲ್ಲದೆ ವಿಜಯ್ ಅವರಿಗೆ ಬೇರೆ ಅವರ ಮೇಲೆ ಕ್ರಶ್ ಆಗಿದೆಯಂತೆ. ಈ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ. ಸಮಂತಾ ನನ್ನ ಕ್ರಶ್ ಎಂದು ವಿಜಯ್ ದೇವರುಕೊಂಡ ಹೇಳಿದ್ದಾರೆ. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಸದ್ಯ ವಿಜಯ್ ಕ್ರಶ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ.

ಇನ್ನು ಸಮಂತಾ ನಿಮ್ಮ ಕ್ರಶ್ ಆದರೆ ರಶ್ಮಿಕಾ ಕತೆ ಏನು ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನು ನಟಿ ಸಮಂತಾ ತಮ್ಮ ಅನಾರೋಗ್ಯದ ಕಾರಣ ವಿದೇಶಕ್ಕೆ ತೆರಳಿದ್ದಾರೆ. ವಿಜಯ್ ಅವರ ಹೇಳಿಕೆಗೆ ಸಮಂತಾ ಯಾವ ರೀತಿ ಉತ್ತರ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group