Samantha Costume: ವೈರಲ್ ಆಯಿತು ಸಮಂತಾ ಬಟ್ಟೆ ಮತ್ತು ನೆಕ್ಲೆಸ್ ಬೆಲೆ, ದುಬಾರಿ ನಟಿ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ನಟಿ ಸಮಂತಾ ಧರಿಸಿದ ಬಟ್ಟೆ ಮತ್ತು ಒಡವೆ ಬೆಲೆ.
Samantha Expensive Life: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಸಮಂತಾ ನಟನೆಯ ಶಾಕುಂತಲಂ (Shaakuntalam) ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ನಟಿ ಸಮಂತಾ ರುತ್ ಪ್ರಭು ಅವರು ಖುಷಿ ಸಿನಿಮಾದ ಶೂಟಿಂಗ್ ಮುಗಿಸಿ ಇದೀಗ ಇಂಗ್ಲೆಂಡ್ ನಲ್ಲಿ ನಟ ವರುಣ್ ಧವನ್ ಜೊತೆ ಸಿಟಾಡೆಲ್ ಸೀರಿಸ್ ನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ವರುಣ್ ಧವನ್ ಜೊತೆ ಫೋಟೋಶೂಟ್ ಮಾಡಿಸಿದ ನಟಿ ಸಮಂತಾ
ಮೊನ್ನೆ ರಾತ್ರಿ ಸಿಟಾಡೆಲ್ ಸೀರಿಸ್ ಪ್ರೀಮಿಯರ್ ಶೋ ಪ್ರದರ್ಶನಗೊಂಡಿತ್ತು. ಈ ವೇಳೆ ನಟ ವರುಣ್ ಧವನ್ ಜೊತೆ ನಟಿ ಸಮಂತಾ ರುತ್ ಪ್ರಭು ಅವರು ಫೋಟೋಶೂಟ್ ಮಾಡಿಸಿದ್ದಾರೆ. ನಟಿ ಸಮಂತಾ ಹಾಗು ವರುಣ್ ಧವನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಟಾಡೆಲ್ ಪ್ರೀಮಿಯರ್ ಶೋ ನಲ್ಲಿ ನಟಿ ಸಮಂತಾ ಧರಿಸಿದ ಕಾಸ್ಟ್ಯೂಮ್, ನೆಕ್ಲೆಸ್ ಹಾಗು ಬ್ರೇಸ್ಲೆಟ್ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ವರುಣ್ ಧವನ್ ಜೊತೆ ಬ್ಲ್ಯಾಕ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.
ನಟಿ ಸಮಂತಾ ಧರಿಸಿದ ಕಾಸ್ಟ್ಯೂಮ್ ಮತ್ತು ನೆಕ್ಲೆಸ್ ನ ಬೆಲೆ
ನಟಿ ಸಮಂತಾ ನಟ ವರುಣ್ ಧವನ್ ಜೊತೆ ಅನೇಕ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಟಿ ಸಮಂತಾ ಧರಿಸಿದ ಬ್ಲಾಕ್ ಡ್ರೆಸ್ ಗೆ 81,307 ರೂಪಾಯಿ ಆಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇನ್ನು ನಟಿ ಸಮಂತಾ ರುತ್ ಪ್ರಭು ಧರಿಸಿದ ನೆಕ್ಲೆಸ್ ಬೆಲೆ ಕೇಳಿ ಸಹ ನೆಟ್ಟಿಗರು ಶಾಕ್ ಆಗಿದ್ದಾರೆ. ಡ್ರೆಸ್ ಗೆ ಮ್ಯಾಚ್ ಆಗುವಂತೆ ನಟಿ ಸಮಂತಾ ಡೈಮೆಂಡ್ ನೆಕ್ಲೆಸ್ ಧರಿಸಿದ್ದಾರೆ. ಈ ನೆಕ್ಲೆಸ್ ಬೆಲೆ ಬರೋಬ್ಬರಿ 2,97,13,975 ರೂಪಾಯಿ.