Samantha Ruth Prabhu Shaakuntalam Movie Updates: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಹಲವು ತಿಂಗಳುಗಳಿಂದ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ರುತ್ ಪ್ರಭು ಅವರು ಇದೀಗ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ನಟಿ ಸಮಂತಾ ಇತ್ತೀಚಿಗೆ ದೇವರ ಮೊರೆ ಹೋಗುತ್ತಿದ್ದಾರೆ. ಶಾಕುಂತಲಂ (Shaakuntalam) ಸಿನಿಮಾ ಪ್ರಮೋಷನ್ ಆಗುವ ಮೊದಲೇ ನಟಿ ಸಮಂತಾ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
View this post on Instagram
ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ಸೀರೆ ಬಳೆಗಳನ್ನು ಅರ್ಪಿಸಿದ ನಟಿ ಸಮಂತಾ
ಶಾಕುಂತಲಂ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ಸಮಂತಾ ಸಿನಿಮಾ ಪ್ರಮೋಷನ್ ಆರಂಭಿಸವ ಮೊದಲು ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರು ಸುಂದರವಾದ ಸೀರೆ, ಗಾಜಿನ ಬಳೆಗಳನ್ನು ಪೆದ್ದಮ್ಮ ತಲ್ಲಿ ದೇವಿಗೆ ಅರ್ಪಿಸಿದ್ದಾರೆ. ನಟಿ ದೇವಸ್ಥಾನಕ್ಕೆ ಹೋಗುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಹೈದರಾಬಾದ್ ನ ಪ್ರಸಿದ್ಧ ದೇವಸ್ಥಾನ ಪೆದ್ದಮ್ಮ ತಲ್ಲಿ ದೇವಾಲಯಕ್ಕೆ ನಟಿ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ. ನಟಿ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ತಮ್ಮನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಶಾಕುಂತಲಂ ಸಿನಿಮಾ ಪ್ರಮೋಷನ್ ಆಗುವ ಮೊದಲು ದೇವಿಯ ದರ್ಶನ ಪಡೆದ ನಟಿ ಸಮಂತಾ
ನಾನು ನನ್ನ ಪ್ರತಿ ದಿನವನ್ನು ದೇವಿಯ ಪ್ರಾರ್ಥನೆಯೊಂದಿಗೆ ಆರಂಭಿಸುತ್ತೇನೆ. ನನ್ನ ಸಿನಿಮಾ ಶಕುಂತಲಂ ಸಿನಿಮಾ ಪ್ರಮೋಷನ್ ಕೂಡ ದೇವಿಯ ಪ್ರಾರ್ಥನೆಯೊಂದಿಗೆ ಶುರು ಮಾಡುತ್ತೇನೆ. ನೀವೆಲ್ಲರೂ ನನಗೆ ಬಹಳಷ್ಟು ಬೆಂಬಲ ಕೊಟ್ಟಿದ್ದೀರಿ. ಶಕ್ತಿಯನ್ನು ಕೊಟ್ಟಿದ್ದೀರಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.