Samantha Tattoo: ವೈರಲ್ ಆಗಿದೆ ಸಮಂತಾ ಸೊಂಟದ ಟ್ಯಾಟೂ ಗುಟ್ಟು, ಮಾಜಿ ಪತಿ ನೆನಪಿಗಾಗಿ.
ಸಮಂತಾ ಅವರ ಸೊಂಟದ ಮೇಲೆ ನಟ ನಾಗ ಚೈತನ್ಯ ಅವರ ಹೆಸರಿನ ಟಾಟೂ ಇದೆ.
Samantha Ruth Prabhu Waist Tattoo: ಟಾಲಿವುಡ್ ನ ಟಾಪ್ ಜೋಡಿಯಾಗಿದ್ದ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನ ಪಡೆದು ವರ್ಷಗಳೇ ಕಳೆದಿದೆ. ಆದರೂ ಕೂಡ ನಾಗ ಚೈತನ್ಯ ಹಾಗೂ ಸಮಂತಾ ತಮ್ಮ ವಿಚ್ಛೇಧನದ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.
ಇದೀಗ ನಟಿ ಸಮಂತಾ ಅವರ ದೇಹದ ಮೇಲೆ ನಾಗ ಚೈತನ್ಯ ಅವರ ಹೆಸರಿನ ಟ್ಯಾಟೂವನ್ನು ನೆಟ್ಟಿಗರು ಗಮನಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅವರ ಟ್ಯಾಟೂ ಸುದ್ದಿಯಲ್ಲಿದೆ.
ಸಮಂತಾ ಸೊಂಟದ ಮೇಲೆ ನಾಗ ಚೈತನ್ಯ ಟ್ಯಾಟೂ
ಸಮಂತಾ ನಟನೆಯ ಶಾಕುಂತಲಂ (Shaakuntalam) ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ನಟಿ ಸಮಂತಾ ರುತ್ ಪ್ರಭು ಅವರು ಖುಷಿ ಸಿನಿಮಾದ ಶೂಟಿಂಗ್ ಮುಗಿಸಿ ಇದೀಗ ಇಂಗ್ಲೆಂಡ್ ನಲ್ಲಿ ನಟ ವರುಣ್ ಧವನ್ ಜೊತೆ ಸಿಟಾಡೆಲ್ ಸೀರಿಸ್ ನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಲಂಡನ್ ನಲ್ಲಿ ನಡೆದ ಸಿಟಾಡೆಲ್ ಪ್ರೀಮಿಯರ್ ನಿಂದ ಸಮಂತಾ ರುತ್ ಪ್ರಭು ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಇನ್ನು ನಟಿಯ ವೈರಲ್ ಫೋಟೋಗಳಲ್ಲಿ ನೆಟ್ಟಿಗರು ಸಮಂತಾ ಅವರ ಟ್ಯಾಟೂವನ್ನು ಇನ್ನಷ್ಟು ವೈರಲ್ ಮಾಡುತ್ತಿದ್ದಾರೆ. ಸಮಂತಾ ಅವರ ಪಕ್ಕೆಲಿಬಿನ ಹಳೆಯ ಟ್ಯಾಟೂವನ್ನು ನೆಟ್ಟಿಗರು ಗುರುತಿಸಿದ್ದಾರೆ.
ಸಮಂತಾ ಮಾಜಿ ಪತಿ ಹೆಸರಿನ ಟ್ಯಾಟೊ ವೈರಲ್
ಸಮಂತಾ ಹಾಗೂ ನಾಗ ಚೈತನ್ಯ ಅವರು 2021 ರಲ್ಲಿ ತಮ್ಮ ವೈವಾಹಿಕ ಜೀವನದಿಂದ ದೂರ ಆಗಿದ್ದಾರೆ. ಈಗಲೂ ಕೂಡಾ ಸಮಂತಾ ಹಾಗೂ ನಾಗ ಚೈತನ್ಯ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತವೆ. ಸಮಂತಾ ತಮ್ಮ ಮಾಜಿ ಪತಿ ನಾಗ ಚೈತನ್ಯ ಅವರ ಹೆಸರನ್ನು ಪಕ್ಕೆಲುಬಿನಲ್ಲಿ ‘ಚೈ’ ಎಂದು ಟ್ಯಾಟೊ ಹಾಕಿಸಿಕೊಂಡಿದ್ದಾರೆ.
ವಿಚ್ಛೇಧನ ಆದರೂ ಕೂಡ ಟ್ಯಾಟೂವನ್ನು ಸಮಂತಾ ಅಳಿಸದೇ ಇರುವುದು ಗಮನಾರ್ಹವಾಗಿದೆ. ಇನ್ನು ನಾಗ ಚೈತನ್ಯ ಅವರಿಗೆ ಸಂಬಂಧಿಸಿದಂತೆ ಸಮಂತಾ ಅವರ ಕುತ್ತಿಗೆಯ ಕೆಳಭಾಗದಲ್ಲಿ ‘ymc’ ಟ್ಯಾಟೂವನ್ನು ಕೂಡಾ ಹಾಕಿಸಿಕೊಂಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅವರ ಟ್ಯಾಟೂ ಬಾರಿ ಚರ್ಚೆಗೆ ಕಾರಣವಾಗಿದೆ.