Samantha: ಚಿಕಿತ್ಸೆಗೆ ಹಣ ಇಲ್ಲದೆ ನಟಿ ಸಮಂತಾ ಮಾಡಿದ್ದೇನು ಗೊತ್ತಾ…? ಈ ಸುದ್ದಿ ಕೇಳಿ ಬೇಸರ ಹೊರಹಾಕಿದ ಫ್ಯಾನ್ಸ್.

ಮಯೋಸಿಟೀಸ್ ಖಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ. ಬಗ್ಗೆ ಈಗ ಹಾರಿದಾಡುತ್ತಿದೆ ಈ ಸುದ್ದಿ.

Samantha Ruth Prabhu Treatment Expenses: ಸೌತ್ ನ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಅನಾರೋಗ್ಯದ ನಡುವೆಯೂ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಮಂತಾ ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ಚಿತ್ರೀಕರಣದಲ್ಲಿ ಕೂಡ ಬ್ಯುಸಿ ಆಗಿದ್ದಾರೆ.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ನಟಿ ಸಮಂತಾ ಇದೀಗ ವಿಜಯ್ ದೇವರಕೊಂಡ ಅವರ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಖುಷಿ ಚಿತ್ರ ಇನ್ನೇನು ಸದ್ಯದ್ಲಲೇ ತೆರೆಯ ಮೇಲೆ ಬರಲಿದೆ. ಸಮಂತಾ ಚಿತ್ರೀಕರಣದ ಜೊತೆ ತಮ್ಮ ಆರೋಗ್ಯದ ಕಡೆ ಕೂಡ ಗಮನಹರಿಸುತ್ತಿದ್ದಾರೆ.

Samantha Ruth Prabhu Treatment Expenses
Image Credit: Mid-Day

ಮಯೋಸಿಟೀಸ್ ಖಾಯಿಲೆಯಿಂದ ಬಳಲುತ್ತಿರುವ ಸ್ಯಾಮ್
ನಟಿ ಸಮಂತಾ ಅವರು ತಾವು ಮಯೋಸಿಟೀಸ್ ಖಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಸ್ಯಾಮ್ ಅನಾರೋಗ್ಯದ ವಿಚಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇನ್ನು ಅನಾರೋಗ್ಯದ ಕಾರಣ ನಟಿ ಕೆಲವು ಪ್ರೊಜೆಕ್ಟ್ ಗಳನ್ನೂ ತಿರಸ್ಕರಿಸಿದ್ದರು.

ಚಿಕಿತ್ಸೆಗೆ ಹಣ ಇಲ್ಲದೆ ಖ್ಯಾತ ನಟನ ಬಳಿ 25 ಕೋಟಿ ಹಣ ಪಡೆದ ಸ್ಯಾಮ್
ಇನ್ನು ಸಮಂತಾ ಅವರ ಆಗೋಗ್ಯದ ವಿಚಾರವಾಗಿ ಸುದ್ದಿಗಳು ವೈರಲ್ ಆಗುತ್ತವೆ. ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಾರೋಗ್ಯದ ಕಾರಣ ಆಗಾಗ ಸುದ್ದಿಯಾಗುತ್ತದೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಖ್ಯಾತ ನಟನ ಬಳಿ 25 ಕೋಟಿ ಹಣ ಪಡೆದಿದ್ದಾರೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗಿದ್ದವು. ಈ ಹಿಂದೆ ಕೂಡ ಈ ರೀತಿಯ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಿಸುತ್ತಿರುವವ ಬಗ್ಗೆ ಸ್ಯಾಮ್ ಕಿಡಿಕಾರಿದ್ದಾರೆ.

Samantha Ruth Prabhu Treatment Expenses updates
Image Credit: Businesstoday

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ವಿರುದ್ಧ ಸಮಂತಾ ಕಿಡಿ
“ಮಯೋಸಿಟೀಸ್ ಚಿಕಿತ್ಸೆಗೆ 25 ಕೋಟಿ? ಯಾರೋ ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಅದರ ಅಲ್ಪ ಭಾಗವನ್ನು ಮಾತ್ರ ಚಿಕಿತ್ಸೆಗೆ ವ್ಯಯಿಸಿದ್ದೇನೆ. ನಾನು ಸಿನಿಮಾಗಳಲ್ಲಿ ಬಿಟ್ಟಿಯಾಗಿ ನಟಿಸುವುದಿಲ್ಲ. ಅಲ್ಲಿ ನನಗೆ ಹಣ ನೀಡುತ್ತಾರೆ. ಆದ್ದರಿಂದ ನನ್ನನು ನಾನು ಚೆನ್ನಾಗಿ ನೋಡಿಕೊಳ್ಳುವಷ್ಟು ಸಶಕ್ತಳಾಗಿದ್ದೇನೆ.

Join Nadunudi News WhatsApp Group

ಮಯೋಸಿಟೀಸ್ ನಿಂದ ಸಾವಿರಾರು ಜನರು ಬಳಲುತ್ತಿದ್ದಾರೆ. ಚಿಕಿತ್ಸಾ ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಳ್ಳುಕೆ ಮುನ್ನ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸೋಣ” ಎಂದು ನಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.

Join Nadunudi News WhatsApp Group