Shaakuntalam Collection: ನಟಿ ಸಮಂತಾಗೆ ಇನ್ನೊಂದು ಸೋಲು, ಕನಿಷ್ಠ ಕಲೆಕ್ಷನ್ ಮಾಡಿದ ಶಾಕುಂತಲಂ.
ನಟಿ ಸಮಂತಾ ಅಭಿನಯದ ಶಾಕುಂತಲಂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋಲನ್ನ ಅನುಭವಿಸಿದೆ.
Shaakuntalam Movie Collection: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ನಟನೆಯ ಶಾಕುಂತಲಂ (Shaakumtalam) ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಿದ್ದು ಜನರಿಂದ ಅಷ್ಟು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿಲ್ಲ.
ಸಾಕಷ್ಟು ದಿನಗಳಿಂದ ಸಮಂತಾ ಅಭಿಮಾನಿಗಳು ಶಾಕುಂತಲಂ ಸಿನಿಮಾದ ನಿರೀಕ್ಷೆಯಲ್ಲಿ ಇದ್ದಿದ್ದರು. ಆದರೆ ಈ ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ನಿರೀಕ್ಷೆ ಹಾಳಾಯಿತು. ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಗಳಿಕೆ ಮಾಡಲಿಲ್ಲ.
ಶಕುಂತಲಂ ಸಿನಿಮಾದಿಂದ ಟೀಕೆಗೆ ಒಳಗಾದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಅವರ ಶಾಕುಂತಲಂ ಸಿನಿಮಾ ರಿಲೀಸ್ ಆಗಿ ನಾಲ್ಕು ಐದು ದಿನವಾದರೂ ಸಹ ಅಷ್ಟೇನು ಗಳಿಕೆ ಮಾಡಲಿಲ್ಲ. ನಾಲ್ಕನೇ ದಿನಕ್ಕೆ ಕೇವಲ 60 ಲಕ್ಷ ರೂಪಾಯಿ ಆಗಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನು ಕಡಿಮೆ ಆಗುತ್ತಾ ಹೋಗುತ್ತದೆ.
ಹಾಗಾಗಿ ಹಾಕಿದ ಬಂಡವಾಳವೂ ನಿರ್ಮಾಪಕರಿಗೆ ಬರುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಸಮಂತಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ.
ನಾಲ್ಕೈದು ದಿನಕ್ಕೆ ಶಾಕುಂತಲಂ ಸಿನಿಮಾ ಮಾಡಿದ ಗಳಿಕೆ
ನಟಿ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ರಿಲೀಸ್ ಆದ ನಾಲ್ಕೈದು ದಿನಕ್ಕೆ ಸುಮಾರು 8 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ರಿಲೀಸ್ ಆಗುವ ಮುನ್ನವೇ ಭಾರಿ ಸದ್ದು ಮಾಡಿದ ಶಾಕುಂತಲಂ ಸಿನಿಮಾ ರಿಲೀಸ್ ಆದ ನಂತರ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ಶಾ
ಕುಂತಲಂ ಸಿನಿಮಾ ಸೋಲು ಕಂಡ ನಂತರ ಸಮಂತಾ ಅವರಿಗೆ ನೆಗೆಟಿವ್ ಕಾಮೆಂಟ್ ಮಾಡುವ ಮೂಲಕ ಟ್ರೊಲ್ ಮಾಡುತ್ತಿದ್ದಾರೆ. ಈ ಎಲ್ಲವದಕ್ಕೂ ಉತ್ತರ ಎನ್ನುವಂತೆ ನಟಿ ಸಮಂತಾ ಭಗವದ್ಗೀತೆಯ ಸಾಲುಗಳನ್ನು ಹಾಕಿದ್ದಾರೆ.