Samsung Galaxy A14: ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್, ಲಾಂಚ್ ಆಗಿದೆ ಕಡಿಮೆ ಬೆಲೆಯ Samsung Galaxy A14.
samsung galaxy A14 ಭಾರತದಲ್ಲಿ ಕಡಿಮೆ ಬೆಲೆಯ ಜೊತೆಗೆ,1000 ರೂಪಾಯಿ ಕ್ಯಾಶ್ ಬ್ಯಾಕ್ ಸಹ ನೀಡುತ್ತಿದೆ.
Samsung Galaxy A14 Smartphone: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗುತ್ತಿವೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಇದು ಹೊಸ ಸುದ್ದಿ ಆಗಿದೆ. ಇದೀಗ ಸ್ಯಾಮ್ ಸಂಗ್ (Samsung) ಹೊಸ ಸ್ಮಾರ್ಟ್ ಫೋನ್ ಒಂದನ್ನು ಪರಿಚಯ ಮಾಡಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ A14 ಸ್ಮಾರ್ಟ್ ಫೋನ್ ನ ಬೆಲೆ
ಸ್ಯಾಮ್ ಸಂಗ್ ಗ್ಯಾಲಕ್ಸಿ A14 (Samsung Galaxy A14) ಸ್ಮಾರ್ಟ್ ಫೋನ್ ಎರಡು ರೂಪಾಂತರದಲ್ಲಿ ಲಭ್ಯವಿದೆ. ಇದರ ಮೊದಲ ರೂಪಾಂತರವು 4 gb RAM ಮತ್ತು 64 gb ಸ್ಟೋರೇಜ್ ಬರುತ್ತದೆ. ಇದರ ಬೆಲೆ 13,999 ರೂಪಾಯಿ ಆಗಿದೆ. ಆದರೆ ಎರಡನೇ ರೂಪಾಂತರವು 4 gb RAM ಮತ್ತು 128 gb ಸ್ಟೋರೇಜ್ ಬರುತ್ತದೆ.
ಈ ಫೋನಿನ ಬೆಲೆ 14,999 ರೂಪಾಯಿ ಆಗಿದೆ. ಇದರೊಂದಿಗೆ ರೂಪಾಯಿ 1,000 ಕ್ಯಾಶ್ ಬ್ಯಾಕ್ ಸಹ ನೀಡಲಾಗುವುದು. ಈ ಬೆಲೆಯನ್ನು ಸದ್ಯಕ್ಕೆ ನೀವು ಸ್ಯಾಮ್ ಸಂಗ್ ಸೈಟ್ ಅಲಿ ಮಾತ್ರ ಪಡೆಯಬಹುದು.
ಸ್ಯಾಮ್ ಸಂಗ್ ಗ್ಯಾಲಕ್ಸಿ A14 ಸ್ಮಾರ್ಟ್ ಫೋನ್ ನ ವಿಶೇಷತೆ
ಸ್ಯಾಮ್ ಸಂಗ್ ಗ್ಯಾಲಕ್ಸಿ A14 ಸ್ಮಾರ್ಟ್ ಫೋನ್ ನ ವಿನ್ಯಾಸವು ನಯವಾದ ಮತ್ತು ಪಿಮಿಯಮ್ ಅನ್ನು ನಿಮಿಸಲಾಗಿದೆ. ಈ ಫೋನ್ 6.6 ಇಂಚಿನ ಪೂರ್ಣ HD + ಡಿಸ್ ಪ್ಲೇಯನ್ನು ಹೊಂದಿದೆ.
50 ಮೆಗಾಫೈಕ್ಸೆಲ್ ಗಳ ಪ್ರಾಥಮಿಕ ಸಂವೇದಕವನ್ನು ಫೋನ್ ಅಲ್ಲಿ ನೀಡಲಾಗಿದೆ. ಅದೇ ಸಮಯದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಫೋನ್ ಅಲ್ಟ್ರಾ ವೈಡ್ ಮತ್ತು ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. 5000 mAH ಬ್ಯಾಟರಿಯನ್ನು ಹೊಂದಿದ್ದು ಅದು 2 ದಿನಗಳ ವರೆಗೆ ಇರುತ್ತದೆ.