Galaxy Z Fold 5: ಸೆಲ್ಫಿ ಪ್ರಿಯರಿಗಾಗಿ ಎರಡು ಸ್ಕ್ರೀನ್ ಇರುವ ಮೊಬೈಲ್ ಲಾಂಚ್ ಮಾಡಿದ ಸ್ಯಾಮ್ ಸಂಗ್, ಬೆಲೆ ಸ್ವಲ್ಪ ಅಧಿಕ.
4400mAh ಬ್ಯಾಟರಿ ಸಾಮರ್ಥ್ಯ ಹೊಂದಿದ ಸ್ಯಾಮ್ ಸಂಗ್ ನ ಡಬಲ್ ಸ್ಕ್ರೀನ್ ಮೊಬೈಲ್ ಬಿಡುಗಡೆ.
Samsung Galaxy Z Fold 5: ಸ್ಯಾಮ್ ಸಂಗ್ (Samsung Galaxy) ಕಂಪನಿಯು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಹೊಸ ವಿನ್ಯಾಸದ ಸ್ಯಾಮ್ ಸಂಗ್ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ.
ಇದೀಗ ಮತ್ತೊಂದು ಹೊಸ ಮಾದರಿಯ ಫೋನ್ ಅನ್ನು ಕಂಪನಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಜುಲೈ 26 ರಂದು ಸ್ಯಾಮ್ ಸಂಗ್ ಫೋಲ್ಡಬಲ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
Samsung Galaxy Z Fold 5 ಸ್ಮಾರ್ಟ್ ಫೋನ್
ಸ್ಯಾಮ್ ಸಂಗ್ ನ ಎರಡು ಫೋಲ್ಡಬಲ್ ಸ್ಮಾರ್ಟ್ ಫೋನ್ ನ ಫೀಚರ್ ಬಗ್ಗೆ ಮಾಹಿತಿ ಸೋರಿಕೆ ಆಗಿದೆ. ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8ನೇ Gen SoC ಚಿಪ್ ಅನ್ನು ಎರಡೂ ಹ್ಯಾಂಡ್‌ಸೆಟ್ ಗಳಲ್ಲಿ ಬಳಸಲಾಗಿಸಿದ್ದು ಈ ಫೋಲ್ಡಬಲ್ ಸ್ಮಾರ್ಟ್ ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Samsung Galaxy Z Fold 5 256GB ರೂಪಾಂತರದ ಬೆಲೆ 1,0,8900 ರೂ. ಆಗಿದ್ದು, 512GB ರೂಪಣತರಕ್ಕೆ 1,21,600 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ.
Samsung Galaxy Z Fold 5 ವಿಶೇಷತೆ
ಈ Samsung Galaxy Z Fold 5 ಫೋಲ್ಡಬಲ್ ಫೋನ್ ಗ್ರಾಹಕರಿಗೆ ಕ್ರೆಯಂ, ಗ್ರ್ಯಾಫೈಟ್, ಲ್ಯಾವೆಂಡರ್ ಮತ್ತು ವಾಟರ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 7.6 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, octa-core Snapdragon 8 Gen 2 SoC ಚಿಪ್ ಅನ್ನು ಫೋನ್ ನಲ್ಲಿ ಪ್ರೊಸೆಸರ್ ನಲ್ಲಿ ಅಳವಡಿಸಲಾಗಿದೆ. Samsung Galaxy Z Fold 5 12GB RAM ಹಾಗೂ 1TB ವರೆಗೆ ಅಂತರ್ಗತ ಸಂಗ್ರಹಣೆ ಹೊಂದಿದೆ.
ಸ್ಯಾಮ್ ಸಂಗ್ ಫೋಲ್ಡಬಲ್ ಫೋನ್ ನ ಕ್ಯಾಮರಾ ವಿಶೇಷತೆ
ಸ್ಯಾಮ್ ಸಂಗ್ ಫೋಲ್ಡಬಲ್ ಫೋನ್ ನ ಕ್ಯಾಮರಾ ಬಗ್ಗೆ ಹೇಳುವುದಾದರೆ ಬೆಸ್ಟ್ ಕ್ವಾಲಿಟಿ ಫೋಟಿಗ್ರಾಫಿಗಾಗಿ ಟ್ರಿಪಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 50 ಮೆಗಾಫಿಕ್ಸೆಲ್ ಪ್ರಾಥಮಿಕ ಸಂವೇದಕ, 12 ಮೆಗಾಫಿಕ್ಸೆಲ್ ಸಂವೇದಕ ಅಲ್ಟ್ರ ವೈಡ್ ಲೆನ್ಸ್ ಅನ್ನು ಹೊಂದಿದೆ.
ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಮುಂಭಾಗದಲ್ಲಿ 10 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಿದ್ದು, 4 ಮೆಗಾಫಿಕ್ಸೆಲ್ ಅಂಡರ್ ಡಿಸ್ ಪ್ಲೇ ಸಂವೇದಕವನ್ನು ಅಳವಡಿಸಲಾಗಿದೆ. ಇನ್ನು 25W ವೈಡ್ ಮತ್ತು 15W ವೈರ್ ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.