Galexy F54 5G: ಕಡಿಮೆ ಬೆಲೆಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ಬಿಡುಗಡೆ, 108 MP ಕ್ಯಾಮೆರಾ.

ಕಡಿಮೆ ಬೆಲೆಯ ಹೆಚ್ಚು ಫೀಚರ್ ಇರುವ ಸ್ಯಾಮ್ ಸಂಗ್ ಗ್ಯಾಲಕ್ಸಿ F54 5G ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ.

Samsung Galexy F54 5G Smartphone: ಸ್ಯಾಮ್ ಸಂಗ್ (Samsung) ಕಂಪನಿ ಹೊಸ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ F ಸರಣಿಯಲ್ಲಿ ಹಲವು ಭಿನ್ನ ಬೆಲೆಯ ಫೋನ್ ಗಳನ್ನೂ ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ಸಾಲಿಗೆ ಇದೀಗ ಹೊಸದಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ F54 5G ಸ್ಮಾರ್ಟ್ ಫೋನ್ ಸೇರ್ಪಡೆ ಮಾಡಲಿದೆ.

Samsung Galexy F54 5G Smartphone
Image Source: Gadgets360

ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ನ ವಿಶೇಷತೆ
ಸ್ಯಾಮ್ ಸಂಗ್ ಕಂಪನಿಯು ಶೀಘ್ರದಲ್ಲಿಯೇ ನೂತನವಾಗಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದ್ದು, ಈ ಫೋನ್ ಉತ್ತಮ ಫೀಚರ್ಸ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಫೋನ್ Exynos 1380 ಪ್ರೊಸೆಸರ್ ಹೊಂದಿರಲಿದೆ.

ಹಾಗೆಯೇ ಈ ಸ್ಮಾರ್ಟ್ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಇದೆ ಮೇ ಕೊನೆಯ ವಾರದಲ್ಲಿ ಅನಾವರಣ ಆಗುವ ನಿರೀಕ್ಷೆಗಳು ಇವೆ. ಈ ಸ್ಮಾರ್ಟ್ ಫೋನ್ ಸೂಪರ್ AMOLED ಡಿಸ್ಪ್ಲೇ ಯನ್ನು ಒಳಗೊಂಡಿರಲಿದೆ. 120 HZ ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇನ್ನು ಈ ಫೋನ್ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಫಿಕ್ಸೆಲ್ ಸೆನ್ಸಾರ್ ನಲ್ಲಿ ಇರಲಿದೆ.

Samsung Galexy F54 5G Smartphone
Image Source: Gadgets

ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ನ ಬೆಲೆ ಮತ್ತು ಕ್ಯಾಮೆರಾ ರಚನೆ
ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ನ ಬೆಲೆ 25,000 ರೂಪಾಯಿ ಎಂದು ಹೇಳಲಾಗುತ್ತಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ F54 5g ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ.

ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಪಡೆದಿರಲಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರುವ ನಿರೀಕ್ಷೆಗಳಿವೆ.

Join Nadunudi News WhatsApp Group

Samsung Galexy F54 5G Smartphone
Image Source: Gadgets

Join Nadunudi News WhatsApp Group