Mobile Lost: ಮೊಬೈಲ್ ಕಳೆದುಕೊಂಡವರ ಮೊಬೈಲ್ ಹುಡುಕಲು ಸರ್ಕಾರ ಮೇ 17 ರಿಂದ ಹೊಸ ಸೇವೆ ಆರಂಭ.

ಸಂಚಾರ ಸಾಥಿ ಪೋರ್ಟಲ್ ಮೂಲಕ ಈಗ ಕಳೆದುಹೋದ ಮೊಬೈಲ್ ಹುಡುಕಿಕೊಳ್ಳಬಹುದಾಗಿದೆ.

Government Portal For Lost Phone: ಇದೀಗ ಸರ್ಕಾರ ಜನರಿಗೆ ಅನುಕೂಲವಾಗಲು ಸಾಕಷ್ಟು ರೀತಿಯಲ್ಲಿ ಸಹಾಯವಾಗಲಿದೆ. ಸರ್ಕಾರ ಜನರಿಗೆ ತಾವು ಕಳೆದುಕೊಂಡ ಮೊಬೈಲ್ ಫೋನ್ (Mobile Phone) ಗಳನ್ನೂ ಹುಡುಕಿಕೊಡಲು ನಿರ್ಧರಿಸಿದೆ. ಇನ್ನು ಮುಂದಿನ ದಿನಗಳಲ್ಲಿ ನೀವು ನಿಮ್ಮ ಮೊಬೈಲ್ ಫೋನ್ ಗಳನ್ನೂ ಕಳೆದುಕೊಂಡಿದ್ದರೆ ಚಿಂತಿಸುವ ಅಗತ್ಯ ಇಲ್ಲ.

ಸರ್ಕಾರ ನಿಮ್ಮ ಮೊಬೈಲ್ ಫೋನ್ ಅನ್ನು ಹುಡುಕಿಕೊಡಲಿದೆ. ಇದಕ್ಕಾಗಿಯೇ ಸರ್ಕಾರ ಹೊಸ ಪೋರ್ಟಲ್ ಅನ್ನು ಜಾರಿಗೊಳಿಸಿದೆ. ಈ ಪೋರ್ಟಲ್ ನ ಮೂಲಕ ನೀವು ನಿಮ್ಮ ಕಳೆದುಹೋದ ಫೋನ್ ಅನ್ನು ಮರಳಿಪಡೆಯಬಹುದು.

Government Portal For Lost Phone
Image Credit: trustedreviews

ಸಂಚಾರ ಸಾಥಿ ಪೋರ್ಟಲ್ (Sanchar Saathi Portal)
ದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಂತೂ ಮೊಬೈಲ್ ಫೋನ್ ಅಗತ್ಯದ ವಸ್ತುವಾಗಿದೆ. ಇನ್ನು ಮೊಬೈಲ್ ಫೋನ್ ಗಳಲ್ಲಿ ವ್ಯಕ್ತಿಯ ವೈಯಕ್ತಿಕ ದಾಖಲೆಗಳ ವಿವರ ಕೂಡ ಇರುತ್ತದೆ. ಬ್ಯಾಂಕ್ ವಿವರ, ಎಟಿಎಂ ಪಾಸ್ ವಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ಮಾಹಿತಿಗಳು ಮೊಬೈಲ್ ಫೋನ್ ನಲ್ಲಿ ಇರುತ್ತದೆ.

ಇದೀಗ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ಇದೀಗ ಸ್ಮಾರ್ಟ್ ಫೋನ್ ಅನ್ನು ಹುಡುಕಿಸಲು ಸಂಚಾರ ಸಾಥಿ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಈ ಪೋರ್ಟಲ್ ನ ಬಗ್ಗೆ ಮಾಹಿತಿ ತಿಳಿಯೋಣ.

A lost mobile can now be traced through Sanchar Saathi portal.
Image Credit: standardmedia

ಮೇ 17 ರಿಂದ ಹೊಸ ಸೇವೆ ಲಭ್ಯ
ಇದೀಗ ಸರ್ಕಾರ ಸಂಚಾರ ಸಾಥಿ ಪೋರ್ಟಲ್ ಪರಿಚಯಿಸುವ ಮೂಲಕ ಜನರ ಮೊಬೈಲ್ ಫೋನ್ ಗಳ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಜನರ ಕಳ್ಳತನವಾದ ವಸ್ತುಗಳನ್ನು ಹುಡುಕಿಕೊಡುವುದು ಸರ್ಕಾರದ ಉದ್ದೇಶವಾಗಿದೆ. ಮೇ 17 ರಿಂದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಮೇ 17 ವಿಶ್ವ ಟೆಲಿಕಾಂ ದಿನವಾಗಿದ್ದು ಅಂದು ಸಂಚಾರ ಸಾಥಿ ಅನಾವರಣಗೊಳ್ಳಲಿದೆ.

Join Nadunudi News WhatsApp Group

ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಫೋನ್ ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಫೋನ್ ಅನ್ನು ಸ್ವಿಚ್ ಆಫ್ ಮಾಡಬಹುದು.

Join Nadunudi News WhatsApp Group