Sanchar Saathi: ಮೊಬೈಲ್ ಬಳಸುವವರಿಗೆ ಕೇಂದ್ರದಿಂದ ಬಂತು ಹೊಸ ಯೋಜನೆ, ಇನ್ನುಮುಂದೆ ಭಯಪಡುವ ಅಗತ್ಯವಿಲ್ಲ.

ನಿಮ್ಮ ಮೊಬೈಲ್ ಕಳೆದು ಹೋದರೆ ಚಿಂತಿಸುವ ಅಗತ್ಯ ಇಲ್ಲ, ಸಂಚಾರ್ ಸಾಥಿ ಮೂಲಕ ನೀವು ಕಳೆದುಕೊಂಡ ಫೋನ್ ಅನ್ನು ಮರಳಿ ಪಡೆಯಬಹುದು.

Sanchar Saathi Portal: ಕೇಂದ್ರ ಸರ್ಕಾರದಿಂದ ಇದೀಗ ಹೊಸ ಸುದ್ದಿ ಹೊರ ಬಿದ್ದಿದೆ. ಮೊಬೈಲ್ ಕಳೆದುಹೊದರೆ ಇನ್ನುಮುಂದೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಇದಕ್ಕಾಗಿದೆ ಹೊಸ ವ್ಯವಸ್ಥೆ ಒಂದನ್ನು ಮಾಡಿದೆ.

ಮೊಬೈಲ್ ಫೋನ್ ಕಳ್ಳತನದ ಸಮಸ್ಯೆಯನ್ನು ಪರಿಹರಿಸಲು ಮತ್ತು ವಯಕ್ತಿಕ ಡೇಟಾವನ್ನು ರಕ್ಷಿಸಲು ಸರ್ಕಾರ ಸಂಚಾರ ಸಾಥಿ ಪೋರ್ಟಲ್ ಅನ್ನು ಪರಿಚಯಿಸಿದೆ. ಸ್ಮಾರ್ಟ್ ಫೋನ್ ಕಳೆದುಹೋಗುವುದು, ಅದನ್ನು ಇನ್ನೊಬ್ಬರು ಕಳ್ಳತನ ಮಾಡುವುದು ಸಾಮಾನ್ಯವಾಗಿ ನಡೆಯುವ ಘಟನೆಯಾಗಿದೆ.

Sanchar Saathi Portal latest news update
Image Credit: Livehindustan

ಸಂಚಾರ್ ಸಾಥಿ ಪೋರ್ಟಲ್
ಈಗಿನ ಕಾಲದಲ್ಲಿ ಎಲ್ಲ ಕೆಲಸವನ್ನು ತಮ್ಮ ಸ್ಮಾರ್ಟ್ ಫೋನುಗಳ ಮೂಲಕವೇ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ವ್ಯಕ್ತಿಗಳ ಹೆಚ್ಚಿನ ದಾಖಲೆಗಳನ್ನು ಅವರು ಸ್ಮಾರ್ಟ್ ಫೋನ್ ನಲ್ಲಿಯೇ ಇಟ್ಟುಕೊಳ್ಳುತ್ತಾರೆ. ಒಂದು ವೇಳೆ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದರಲ್ಲಿರುವ ಎಲ್ಲ ಮಾಹಿತಿಯು ಹೋಗುತ್ತದೆ. ಜನರ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಚಾರ್ ಸಾಥಿ ಪೋರ್ಟಲ್ ವಿವಿಧ ಸೇವೆಗಳನ್ನು ಒದಗಿಸತ್ತದೆ.

ಸಂಚಾರ್ ಸಾಥಿ ಪೋರ್ಟಲ್ ಮೂಲಕ ದೂರು ಸಲ್ಲಿಸುವುದು ಹೇಗೆ
ಬಳಕೆದಾರರು ಪೋರ್ಟಲ್ ಮೂಲಕ ಸುಲಭವಾಗಿ ದೂರನ್ನು ನೋಂದಾಯಿಸಬಹುದಾಗಿದೆ. ಸಂಚಾರಿ ಸಾಥಿ ಪೋರ್ಟಲ್ ನಲ್ಲಿ ದೂರು ಸಲ್ಲಿಸಲು ಬಳಕೆದಾರರು ತಮ್ಮ ಕಳೆದುಹೋದ ಸಾಧನದ ಐ ಎಂ ಇ ಐ ಸಂಖ್ಯೆಯನ್ನು ಹೊಂದಿರಬೇಕು. https://sancharsaathi.gov.in/ ವೆಬ್ ಸೈಟ್ ನಲ್ಲಿ ಬಳಕೆದಾರರು ಮುಖಪುಟದಲ್ಲಿ ನಾಗರೀಕ ಕೇಂದ್ರಿತ ಸೇವೆಗಳು ಆಕೆಯನ್ನು ಕ್ಲಿಕ್ ಮಾಡಬೇಕು. ನಂತರ ಸಿಮ್ ಕಳೆದುಹೋದ, ಅಥವಾ ಕಳ್ಳತನವಾದ ಆಯ್ಕೆಯನ್ನು ಆಯ್ಕೆ ಮಾಡಬಹುದು ಮತ್ತು ಒದಗಿಸಿದ ಫಾರ್ಮ್ ಅನ್ನು ಭರ್ತಿ ಮಾಡಬಹುದು.

Sanchar Saathi Portal latest news update
Image Credit: Oneindia

ಫಾರ್ಮ್ ನಲ್ಲಿ ಕೇಳಲಾದ ಮಾಹಿತಿಯನ್ನು ಒದಗಿಸುವುದು ಮುಖ್ಯವಾಗಿದೆ. ಬಳಕೆದಾರರು ಎಫ್‌ ಐಆರ್ ನಕಲನ್ನು ನೀಡಬೇಕು ಮತ್ತು ಹೆಸರು, ಇಮೇಲ್ ಐಡಿ ಮತ್ತು ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

Join Nadunudi News WhatsApp Group

ಫಾರ್ಮ್ ಅನ್ನು ಸಲ್ಲಿಸಿದ ನಂತರ ಮತ್ತು ಹಕ್ಕುತ್ಯಾಗವನ್ನು ಆಯ್ಕೆ ಮಾಡಿದ ನಂತರ, ಸ್ಮಾರ್ಟ್ಫೋನ್ ಅನ್ನು ನಿರ್ಬಂಧಿಸಲಾಗುತ್ತದೆ.ಸಂಚಾರಿ ಸಾಥಿ ಪೋರ್ಟಲ್ ಮೊಬೈಲ್ ಫೋನ್ ಕಳ್ಳತನವನ್ನು ನಿಭಾಯಿಸುವಲ್ಲಿ ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸುವಲ್ಲಿ ಅತ್ಯಗತ್ಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

Join Nadunudi News WhatsApp Group