Sangathan Se Samriddhi: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಿಗಲಿದೆ 1.5 ಲಕ್ಷ ರೂ., ಹೊಸ ಯೋಜನೆ ಬಿಡುಗಡೆ.
ಸಂಘಟನ್ ಸೇ ಸಮೃದ್ದಿ ಯೋಜನೆಯ ಅಡಿಯಲ್ಲಿ ದೇಶದ ಮಹಿಳೆಯರಿಗೆ ಸಿಗಲಿದೆ 1.5 ಲಕ್ಷ ರೂಪಾಯಿ.
Sangathan Se Samriddhi Yojana for Womens: ಕೇಂದ್ರ ಸರ್ಕಾರ (Central Government) ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಜನತೆ ಸರ್ಕಾರ ಪರಿಚಯಿಸಿರುವ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಹೆಚ್ಚಾಗಿ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಯೋಜನೆಗಳನ್ನು ಪರಿಚಯಿಸಿದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಕಾರಣ ಹಲವಾರು ಯೋಜನೆಗಳು ಬಿಡುಗಡೆಗೊಂಡಿದೆ.
ಮಹಿಳೆಯರು ಸ್ವಾವಲಂಭಿಯಾಗಿ ಜೀವನ ನಡೆಸಲು ಸರ್ಕಾರದ ಸಾಕಷ್ಟು ಯೋಜನೆಗಳು ಸಹಾಯ ಮಾಡುತ್ತವೆ. ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.
ಗ್ರಾಮೀಣ ಮಹಿಳೆಯರಿಗಾಗಿ ಹೊಸ ಯೋಜನೆ
ಇದೀಗ ಕೇಂದ್ರ ಸರ್ಕಾರ ಗ್ರಾಮೀಣ ಮಹಿಳೆಯರಿಗಾಗಿ (Rural Women) ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಮಹಿಳೆಯರಿಗಾಗಿ ಸಂಘಟನ್ ಸೇ ಸಮೃದ್ದಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಗಿರಿರಾಜ್ ಸಿಂಗ್ ಅವರು ಸಂಘಟನ್ ಸೇ ಸಮೃದ್ದಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದ್ದಾರೆ.
ಸಂಘಟನ್ ಸೇ ಸಮೃದ್ದಿ ಅಭಿಯಾನ (Sangathan Se Samriddhi Yojana)
ಸಂಘಟನ್ ಸೇ ಸಮೃದ್ದಿ ಅಭಿಯಾನವು ಎಲ್ಲಾ ಅರ್ಹ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳ ಪಟ್ಟಿಗೆ ತರುವ ಮೂಲಕ ಅಂಚಿನಲ್ಲಿರುವ ಗ್ರಾಮೀಣ ಕುಟುಂಬಗಳನ್ನು ಸಬಲಗೊಳಿಸುತ್ತದೆ. ಈ ಅಭಿಯಾನದ ಬಗ್ಗೆ ಸಚಿವ ಗಿರಿರಾಜ್ ಅವರು ಮಾತನಾಡಿದ್ದಾರೆ.
ಈಗಿರುವ 10 ಕೋಟಿ ಮಹಿಳೆಯರನ್ನು ಸ್ವಸಹಾಯ ಸಂಘಗಳ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. ಮೇ 2014 ರಲ್ಲಿ ಕೇವಲ 2.35 ಕೋಟಿ ಇದ್ದ ಸದಸ್ಯರ ಸಂಖ್ಯೆ ಈಗ 9 ಕೋಟಿ ದಾಟಿದೆ. ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಪ್ರತಿಯೊಬ್ಬ ಮಹಿಳೆಯು ವರ್ಷಕ್ಕೆ ಒಂದು ಲಕ್ಷ ರೂಪಾಯಿಯನ್ನು ಗಳಿಸಬೇಕು ಎನ್ನುವ ಗುರಿ ಸರ್ಕಾರದ್ದಾಗಿದೆ ಎಂದು ಸಚಿವರು ಮಾತನಾಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ವ್ಯವಹಾರ ಮಾಡಲು ಸಾಲ ಮತ್ತು ಇತರೆ ಸವಲತ್ತುಗಳನ್ನ ಒದಗಿಸಲಾಗುತ್ತದೆ.