Workers Salary: ಎಲ್ಲಾ ಉದ್ಯೋಗಿಗಳು ಪ್ರತಿ ತಿಂಗಳು ಈ ದಿನದಂದು ಸಂಬಳ ಪಡೆಯಲಿದ್ದಾರೆ, ಹೊಸ ನಿಯಮ ಜಾರಿಗೆ.
ತಿಂಗಳ ಸಂಬಳ ಇನ್ನುಮುಂದೆ ಈ ದಿನದಂದು ಖಾತೆಗೆ ಬರಲಿದೆ.
Sanitation Workers Salary Update: ದೇಶದಲ್ಲಿ ವಿವಿಧ ರೀತಿಯ ಉದ್ಯೋಗಿಗಳು ಇದ್ದಾರೆ. ಕೆಲವರು ಸರ್ಕಾರೀ ನೌಕರರಾಗಿದ್ದರೆ ಇನ್ನು ಕೆಲವು ಖಾಸಗಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಸರ್ಕಾರೀ ನೌಕರರಿಗೆ ಸರ್ಕಾರವು ವೇತನದ ಬಗ್ಗೆ ಆಗಾಗ ಮಾಹಿತಿಯನ್ನು ನೀಡುತ್ತಲೇ ಇರುತ್ತದೆ.
ಇದೀಗ ಸರ್ಕಾರದಿಂದ ಇಂತಹ ಉದ್ಯೋಗಿಗಳಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಈ ನೌಕರರಿಗೆ ಯಾವ ದಿನಾಂಕದಂದು ವೇತನ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ.
ನೈರ್ಮಲ್ಯ ಕಾರ್ಮಿಕರ (Sanitation worker) ವೇತನದ ಬಗ್ಗೆ ಮಹತ್ವದ ಮಾಹಿತಿ
ಇದೀಗ ಗುರುಗ್ರಾಮ್ ನ ಮನೇಸರ್ ಮುನ್ಸಿಪಲ್ ಕಾರ್ಪೊರೇಶನ್ ನೈರ್ಮಲ್ಯ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ನೈರ್ಮಲ್ಯ ಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ಸಿಗಲಿದೆ. ಇತ್ತೀಚೆಗೆ ದೆಹಲಿಯ ಪಕ್ಕದಲ್ಲಿರುವ ಸೈಬರ್ ಸಿಟಿ ಗುರುಗ್ರಾಮ್ ನ ಮನೇಸರ್ ಮುನ್ಸಿಪಲ್ ಕಾರ್ಪೊರೇಶನ್ ನ ನೈರ್ಮಲ್ಯ ಕಾರ್ಯಕರ್ತರು ಸಂಬಳದ ಬಗ್ಗೆ ಮಾನೇಸರ್ ಮುನ್ಸಿಪಲ್ ಕಾರ್ಪೊರೇಶನ್ ಕಮಿಷನರ್ ಅವರೊಂದಿಗೆ ಚರ್ಚಿಸಿದ್ದರು. ನೌಕರರ ಸಂಘದವರು ಪಾಲಿಕೆ ಆಯುಕ್ತ ಅಶೋಕ್ ಕುಮಾರ್ ಗಾರ್ಗ್ ಅವರ ಮುಂದೆ ತಮ್ಮ ಬೇಡಿಕೆಗಳನ್ನು ವಿವರಿಸಿದ್ದಾರೆ.
PF-ESI ಖಾತೆಗಳು ಮೊಬೈಲ್ ಗೆ ಲಿಂಕ್ ಆಗುವುದು ಕಡ್ಡಾಯ
ಎಲ್ಲಾ ನೈರ್ಮಲ್ಯ ಕಾರ್ಮಿಕರ ವೇತನವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದಲ್ಲದೇ ನೌಕರರ ವೇತನ ಖಾತೆ, ಪಿಎಫ್ ಮತ್ತು ಇಎಸ್ ಐ ಖಾತೆಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಜೋಡಿಸುವಂತೆ ಸೂಚನೆ ನೀಡಲಾಗಿದೆ. ನೈರ್ಮಲ್ಯ ಕಾರ್ಮಿಕರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಸಂಬಂಧಪಟ್ಟ ನೈರ್ಮಲ್ಯ ಸಂಸ್ಥೆಯೇ ಹೊಣೆಯಾಗಲಿದೆ ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ನಗರಸಭೆಯಲ್ಲಿ ಪ್ರಸ್ತುತ 1006 ನೌಕರರು ಕಾರ್ಯನಿರ್ವಹಿಸುತ್ತಿದ್ದು, ನಿಗದಿತ ಅವಧಿಯೊಳಗೆ ಅವರ ಖಾತೆಗಳಿಗೆ ನಿಯಮಿತವಾಗಿ ವೇತನ ಕಳುಹಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹಾಗೆಯೆ ನಗರಸಭೆ ರಚನೆಗೂ ಮುನ್ನ ಪಂಚಾಯಿತಿ ಇಲಾಖೆಯಿಂದ ನೇಮಕಗೊಂಡಿರುವ ನೈರ್ಮಲ್ಯ ಕಾರ್ಮಿಕರನ್ನು ಸರ್ಕಾರಿ ನಿಯಮಾವಳಿಯಂತೆ ಪಾಲಿಕೆ ವೇತನ ಪಟ್ಟಿಗೆ ಸೇರಿಸಬೇಕು ಎಂದು ಹೇಳಲಾಗಿದೆ.
ನಮ್ಮ ಕರ್ನಾಟಕದ ಕೆಲಸಗಾಗರೂ ಕೂಡ ಸಂಬಳದ ವಿಷಯದಲ್ಲಿ ಕೆಲವು ಮನವಿಯನ್ನ ಮಾಡಿಕೊಂಡಿದ್ದು ಸಿದ್ದರಾಮಯ್ಯ ಸರ್ಕಾರ ಯಾವ ರೀತಿಯಲ್ಲಿ ಇದಕ್ಕೆ ಸ್ಪಂಧಿಸುತ್ತದೆ ಎಂದು ಕಾದು ನೋಡಬೇಕಾಗಿದೆ.