Sanjjanaa Galrani: ಬುರ್ಕಾ ಧರಿಸಿದ ಸಂಜನಾ ಗಲ್ರಾನಿ, ಆದ್ಯಾತ್ಮಿಕ ಪಯಣದತ್ತ ನಟಿ.

ನಟಿ ಸಂಜನಾ ಗಲ್ರಾನಿ ಸೋಶಿಯಲ್ ಮೀಡಿಯಾದಲ್ಲಿ ಆದ್ಯಾತ್ಮದ ಪಯಣದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Actress Sanjjanaa Galrani Instagram Vedio: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ (Sanjjanaa Galrani) ಇದೀಗ ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿಂದೆ ನಟಿ ಡ್ರಗ್ ಕೇಸ್ ಪ್ರಕರಣದಲ್ಲಿ ಸಿಲುಕಿದ್ದು ಇದಾದ ಮೇಲೆ ನಟಿ ಚಿತ್ರರಂಗದಿಂದ ದೂರ ಇದ್ದಾರೆ. ಈ ಪ್ರಕರಣದ ಸಮಯದಲ್ಲಿ ಸಂಜನಾ ಮದುವೆಯ ವಿಚಾರಗಳು ರಿವೀಲ್ ಆಗಿದ್ದವು. ಇದೀಗ ನಟಿ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ಸಂಜನಾ ಗಲ್ರಾನಿ ಇದೀಗ ಸೋಶಿಯಲ್ ವೀಡಿಯೋಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಟಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆದ್ಯಾತ್ಮದ ಪಯಣದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Sanjjanaa Galrani Instagram Vedio
Image ource: Kannada News

ಬುರ್ಕಾ ಧರಿಸಿದ ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾನಿ ಇದೀಗ ತಮ್ಮ ಇನ್ಸ್ಟಾಗ್ರಾಮ್ (Sanjjanaa Galrani Instagram)ನಲ್ಲಿ ಬುರ್ಕಾ ಧರಿಸಿ ವಿಡಿಯೋ ಮಾಡಿ ಅಂಚಿಕೊಂಡಿದ್ದಾರೆ. ನಟಿಯ ವಿಡಿಯೋ ಕಂಡ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ವಿಡಿಯೋದಲ್ಲಿ ನಟಿ ತಾವು ಯಾವ ಕಾರಣಕ್ಕೆ ಬುರ್ಕಾ ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದ್ಯಾತ್ಮಿಕ ಪಯಣದತ್ತ ನಟಿ ಸಾಗುವ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Sanjjanaa Galrani Instagram Vedio
Image Source: Vistara News

ಆದ್ಯಾತ್ಮಿಕ ಪಯಣದತ್ತ ನಟಿ ಸಂಜನಾ ಗಲ್ರಾನಿ
ನಟಿ ಸೋಶಿಯಲ್ ಮೀಡಿಯಾದಲ್ಲಿ ಬುರ್ಕಾ ಧರಿಸಿರುವುದಕ್ಕೆ ಕಾರಣ ತಿಳಿಸಿದ್ದಾರೆ. ಆದ್ಯಾತ್ಮದ ಪಯಣ ಮಾಡುವುದಾಗಿ ನಟಿ ಹೇಳಿದ್ದಾರೆ. “ನನ್ನ ಆದ್ಯಾತ್ಮಿಕ ಪಯಣಕ್ಕೋಸ್ಕರ ಮೆಕ್ಕಾ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ನನ್ನ ಆದ್ಯಾತ್ಮದ ಪಯಣದ ಬಗ್ಗೆ ಯೂಟ್ಯೂಬ್ ನಲ್ಲಿ ಮಾಹಿತಿ ನೀಡುತ್ತೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದಾರೆ.

Sanjjanaa Galrani Instagram Vedio
Image Source: Ragalahari

Join Nadunudi News WhatsApp Group

Join Nadunudi News WhatsApp Group