Nagashekhar: ಸಂಜು ವೆಡ್ಸ್ ಗೀತಾ ಪಾರ್ಟ್ 2 ನಲ್ಲಿ ರಮ್ಯಾ ಬಿಟ್ಟು ರಚಿತಾ ಯಾಕೆ, ಸತ್ಯ ತಿಳಿಸಿದ ನಾಗಶೇಖರ್.
ನಿರ್ದೇಶಕ ನಾಗಶೇಖರ್ ಅವರು ಸಂಚು ವೆಡ್ಸ್ ಗೀತಾ ಪಾರ್ಟ್ 2 ನಲ್ಲಿ ರಮ್ಯಾ ಯಾಕೆ ಇಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
Sanju Weds Geetha part 2: ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ರಮ್ಯಾ (Ramya) ಅವರು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ನಟಿ ರಮ್ಯಾ ಸುಮಾರು ವರ್ಷಗಳಿಂದ ಚಿತ್ರ ರಂಗದಿಂದ ದೂರ ಇದ್ದು ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಇತ್ತೀಚಿಗೆ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ವಿಷಯವಾಗಿ ಸುದ್ದಿಯಲ್ಲಿದ್ದರು.
ಇನ್ನು ರಮ್ಯಾ ಅವರು ಹೊಸ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ನಟನೆಯನ್ನು ನೋಡಲು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಇನ್ನು ನಟಿ ರಮ್ಯಾ ಅವರು ಶ್ರೀನಗರ ಕಿಟ್ಟಿ ಅವರ ಜೊತೆ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ನಟಿಯ ಸಿನಿ ಪಯಣಕ್ಕೆ ಮಹತ್ತರ ತಿರುವನ್ನು ನೀಡಿದೆ. ಈ ಚಿತ್ರವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದರು.
ಸಂಜು ವೆಡ್ಸ್ ಗೀತಾ ಪಾರ್ಟ್ 2
ಇನ್ನು ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗಶೇಖರ್ ಅವರು ಸಂಜು ವೆಡ್ಸ್ ಗೀತಾ ಪಾರ್ಟ್ 2 ಚಿತ್ರ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಘೋಷಣೆ ಕೂಡ ಆಗಿದ್ದು ಸ್ಯಾಂಡಲ್ ವುಡ್ ನ ಡಿಮ್ಪಲ್ ಕ್ವೀನ್ ರಚಿತಾ ರಾಮ್ ನಾಯಕಿ ಆಗಲಿದ್ದಾರೆ ಎನ್ನುವ ಬಗ್ಗೆ ಕೂಡ ವರದಿಯಾಗಿದೆ.
ಇನ್ನು ಸಂಜು ವೆಡ್ಸ್ ಗೀತಾ ಪಾರ್ಟ್ 1 ರಲ್ಲಿ ನಟಿ ರಮ್ಯಾ ನಾಯಕಿಯಾಗಿದ್ದು, ಪಾರ್ಟ್ 2 ಗೆ ರಮ್ಯಾ ಬದಲು ರಚಿತಾ ರಾಮ್ ನಟಿಯಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದೆ. ಇನ್ನು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ರಮ್ಯಾಇಲ್ಲದಿರುವುದಕ್ಕೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದರು. ಇದೀಗ ನಿರ್ದೇಶಕ ನಾಗಶೇಖರ್ ಅವರು ಸಂಚು ವೆಡ್ಸ್ ಗೀತಾ ಪಾರ್ಟ್ 2 ನಲ್ಲಿ ರಮ್ಯಾ ಯಾಕೆ ಇಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಂಚು ವೆಡ್ಸ್ ಗೀತಾ ಪಾರ್ಟ್ 2 ನಲ್ಲಿ ರಮ್ಯಾ ಯಾಕೆ ಇಲ್ಲ ಎನ್ನುವ ಪ್ರಶ್ನೆ ಉತ್ತರ ನೀಡಿದ ನಾಗಶೇಖರ್
ಬಹಳ ಹಿಂದೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ಲಾನ್ ಮಾಡಿದ್ದೆ ಆದರೆ ಸಾಂಗ್ ಆಗಬೇಕಿದ್ದಿತ್ತು. ಏಕೆಂದರೆ ಸಾಂಗ್ಸ್ ಆಗಿಲ್ಲ ಅಂದರೆ ಸಿನಿಮಾ ಕೂರುವುದಿಲ್ಲ. ಸಾಂಗ್ ಬಂದ ಮೇಲೆ ಕಥೆ ಬಿಲ್ಡ್ ಮಾಡಿದ್ದು. ರಮ್ಯಾ ಅವರೇ ನಾಯಕಿ ಆಗಬೇಕು ಎನ್ನುವ ಆಸೇ ತುಂಬಾ ಇತ್ತು ನನಗೆ, ಆದರೆ ರಮ್ಯಾ ಇಲ್ಲ ಅನ್ನೋದೇ ನನಗೆ ನೋವು ಏಕೆಂದರೆ ಸಂಜು ವೆಡ್ಸ್ ಗೀತಾ ಲೇಬಲ್, ಸಂಪರ್ಕ ಮಾಡಬೇಕು ಅನ್ಕೊಂಡೆ ಆದರೆ ಅವರು ರಾಜಕೀಯದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ರಾಜಕೀಯದಲ್ಲಿ ಅವರು ಮೇಲೆ ಬರಬೇಕು ಅನ್ನೋ ಆಸೆ ಅವರ ಟೈಮ್ ವೆಸ್ಟ್ ಮಾಡುವುದು ಬೇಡ.
ರಮ್ಯಾ ಇಲ್ಲ ಅಂದ್ರೆ ಯಾರು ಅನ್ನೋ ಯೋಚನೆ ಬಂದಿತ್ತು. ಆಗ ತ್ರಿಷಾ ಅವರನ್ನು ಸಂಪರ್ಕ ಮಾಡಿದೆ. ರಚಿತಾ ಕೂಡ ಕಥೆ ತುಂಬಾ ಎಕ್ಸೈಟ್ ಆಗಿಬಿಟ್ಟರು. ಕಲಾವಿದರಲ್ಲಿ ಆ ಆಕ್ಸೈಟ್ಮೆಂಟ್ ಇರಬೇಕು. ಸಿನಿಮಾ ಕಮರ್ಷಿಯಲ್ ಆದರೆ ಮಾತ್ರ ಸಾಲದು ಪಾತ್ರ ಘೋಷಣೆ ಮಾಡಬೇಕು. ನಮ್ಮ ಅನುಕೂಲಕ್ಕೆ ತಕ್ಕಂತೆ ರಚಿತಾ ರಾಮ್ ಡೇಟ್ ಫಿಕ್ಸ್ ಮಾಡಿಕೊಟ್ಟಿದ್ದಾರೆ. ಆಕೆ ಒಳ್ಳೆ ಕಲಾವಿದೆ ಖಂಡಿತ ಚೆನ್ನಾಗಿ ಅಭಿನಯಿಸುತ್ತಾರೆ ಎಂದು ನಾಗಶೇಖರ್ ಅವರು ಹೇಳಿಕೆ ನೀಡಿದ್ದಾರೆ.