Loan Facility: ರಾಜ್ಯದಲ್ಲಿ ಜಾರಿಗೆ ಬಂತು “ಸಾಂತ್ವನ ಯೋಜನೆ”, ಇಂತವರಿಗೆ ಸಿಗಲಿದೆ 5 ಲಕ್ಷ ಸಾಲ ಮತ್ತು 2.5 ಲಕ್ಷ ರೂ ಸಬ್ಸಿಡಿ.
ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ ವಿಶೇಷ ಯೋಜನೆ.
Santvana Yojana Loan: ರಾಜ್ಯ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ರಾಜ್ಯದ ಜನರಿಗೆ ಆರ್ಥಿಕವಾಗಿ ಬೆಂಬಲ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ರಾಜ್ಯದಲ್ಲಿ ವಿಧಾನಸಭಾ ಪೂರ್ವದಲ್ಲಿ ಘೋಷಿಸಲಾದ ಐದು ಯೋಜನೆಗಳ ಜೊತೆಗೆ ಸಾಕಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ಪರಿಚಯುಸುತ್ತಿದೆ. ಸದ್ಯ ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ ವಿಶೇಷ ಯೋಜನೆಯನ್ನು ಹೂಡಿದೆ.
ಅಲ್ಪ ಸಂಖ್ಯಾತ ಸಮುದಾಯಕ್ಕೆ ಗುಡ್ ನ್ಯೂಸ್
ರಾಜ್ಯ ಸರ್ಕಾರ ಇದೀಗ ಅಲ್ಪ ಸಾಂಖ್ಯತ ಸಮುದಾಯದ ಅಭಿವೃದ್ದಿಗಾಗಿ ಹೊಸ ಹೆಜ್ಜೆ ಇಟ್ಟಿದೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ವಿಶೇಷ ಸೌಲಭ್ಯವನ್ನು ನೀಡುವ ಮೂಲಕ ಸರ್ಕಾರ ಅಲ್ಪ ಸಂಖ್ಯಾತರ ಏಳಿಗೆಗಾಗಿ ಶ್ರಮಿಸಲು ಮುಂದಾಗಿದೆ. ಇದೀಗ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ “ಸಾಂತ್ವನ ಯೋಜನೆ”ಯನ್ನು ಆರಂಭಿಸಿದೆ. ಈ ಸಾಂತ್ವನ ಯೋಜನೆಯಡಿ ಅರ್ಹರು 5 ಲಕ್ಷ ರೂ. ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
ಸಾಂತ್ವನ ಯೋಜನೆಯಡಿ ಯಾರು ಸಾಲವನ್ನು ಪಡೆಯಬಹುದು..?
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಆರಂಭಿಸಿರುವ ಸಾಂತ್ವನ ಯೋಜನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದ್ದಾರೆ. ಪ್ರವಾಹ, ಅಗ್ನಿ ದುರಂತ, ಕೋಮುಗಲಭೆ ಹಾಗೂ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ನೆರವಾಗಲು ಸಾಂತ್ವನ ಯೋಜನೆ ಜಾರಿಗೆ ತರಲಾಗಿದೆ.
ಸಾಂತ್ವನ ಯೋಜನೆಯಡಿ ಎಷ್ಟು ಬಡ್ಡಿದರದಲ್ಲಿ ಸಾಲ ಸಿಗಲಿದೆ..?
ಸಾಂತ್ವನ ಯೋಜನೆಯಡಿ ಅರ್ಹ ಸಂತ್ರಸ್ತ ಕುಟುಂಬಗಳು 5 ಲಕ್ಷ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯಡಿ ಶೇ. 50 ರಷ್ಟು 2.50 ಲಕ್ಷ ರೂ. ಸಾಲ, ಹಾಗೆಯೆ 2.50 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ. ಸಾಂತ್ವನ ಯೋಜನೆಯಡಿ ಸಾಲಕ್ಕೆ ಶೇ. 3 ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ.