Sanya Iyer About Trollers: ತಾಯಿ ಧರಿಸಿದ ಬಟ್ಟೆ ಬಗ್ಗೆ ಕಮೆಂಟ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸಾನ್ಯ, ಉಪದೇಶ ಮಾಡಲು ನೀವ್ಯಾರು.
Sanya Iyer And Deepa Iyer Troll: ಬಿಗ್ ಬಾಸ್ ಖ್ಯಾತಿಯ ಸಾನ್ಯ ಐಯ್ಯರ್ (Sanya Iyer) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ.
ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಸಾನ್ಯ ಐಯ್ಯರ್ ತಮ್ಮ ಹೊಸ ಲುಕ್ ಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುದರ ಜೊತೆಗೆ ಅಭಿಮಾನಿಗಳಿಗೆ ಹತ್ತಿರವಾಗುತ್ತಲೇ ಇದ್ದಾರೆ.
ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ತಾಯಿ ದೀಪ ಐಯ್ಯರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ದೀಪ ಐಯ್ಯರ್ (Deepa Iyer) ತೊಟ್ಟಿರುವ ಉಡುಗೆಯ ಬಗ್ಗೆ ನೆಟ್ಟಿಗರು ನೆಗೆಟಿವ್ ಕಮೆಂಟ್ ಮಾಡುವ ಮೂಲಕ ಟ್ರೊಲ್ ಮಾಡುತ್ತಿದ್ದಾರೆ. ಇದೀಗ ಸಾನ್ಯ ಐಯ್ಯರ್ ನೆಗೆಟಿವ್ ಕಮೆಂಟ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ.
View this post on Instagram
ಅಮ್ಮನ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ನಟಿ ಸಾನ್ಯ ಐಯ್ಯರ್
ಸಾನ್ಯ ಐಯ್ಯರ್ ಅವರು ಬಿಗ್ ಬಾಸ್ ನಲ್ಲಿ ಸ್ಪರ್ದಿಸುವ ಮೂಲಕ ಇನ್ನಷ್ಟು ಖ್ಯಾತಿ ಪಾಡೆದಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಸಾನ್ಯ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ಸಾನ್ಯ ಐಯ್ಯರ್ ಅವರು ತಮ್ಮ ತಾಯಿಯಾದ ದೀಪ ಐಯ್ಯರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಹುಟ್ಟುಹಬ್ಬದ ಸಮಭ್ರಮಾಚರಣೆಯಲ್ಲಿ ದೀಪ ಐಯ್ಯರ್ ತೊಟ್ಟ ಉಡುಗೆ ನೆಟ್ಟಿಗರ ಕೆಂಗಣ್ಣಿಗೆ ಗುರುಯಾಗಿದೆ. ಅವರ ಉಡುಗೆಯ ಬಗ್ಗೆ ವಿವಿಧ ರೀತಿಯ ಕಮೆಂಟ್ ಗಳನ್ನೂ ಮಾಡಿ ಟ್ರೋಲ್ ಮಾಡುತ್ತಿದ್ದರು. ಇದೀಗ ನಟಿ ಸಾನ್ಯ ಐಯ್ಯರ್ ನೆಟ್ಟಿಗರ ವಿರುದ್ಧ ಕಿಡಿಕಾರಿದ್ದಾರೆ. ಸಾನ್ಯ ಐಯ್ಯರ್ ನೀಡುರುವ ಉತ್ತರ ಇದೀಗ ಬಾರಿ ವೈರಲ್ ಆಗುತ್ತಿದೆ.
ನೆಟ್ಟಿಗರಿಗೆ ಖಡಕ್ ಉತ್ತರ ನೀಡಿದ ಸಾನ್ಯ
ತಮ್ಮ ಅಮ್ಮನ ಬಗ್ಗೆ ಮಾತನಾಡಿದವರ ವಿರುದ್ಧ ಸಾನ್ಯ ಐಯ್ಯರ್ ಕಿಡಿಕಾರಿದ್ದಾರೆ. ‘ನಾವ್ಯಾವ ಕಾಲದಲ್ಲಿವಿ, ನಮಗೆ ಬೇಕಾದ ಬಟ್ಟೆಯನ್ನು ಹಾಕಿಕೊಳ್ಳುವ ಸ್ವಾತಂತ್ರ್ಯವು ನಮಗಿಲ್ವ.
ಯಾರು ಯಾವ ಥರದ ಬಟ್ಟೆ ಹಾಕ್ಕೋಬೇಕು ಅಂತ ಉಪದೇಶ ಮಾಡೋದಿಕ್ಕೆ ನೀವ್ಯಾರು, ನಿಮಗೆ ಬೇಕಾದ ಬಟ್ಟೆ ನೀವು ಹಾಕಿ, ಅದು ಬಿಟ್ಟು ಉಳಿದೋರ ಬಟ್ಟೆ ಬಗ್ಗೆ ಹೀಗೆಲ್ಲ ಕಮೆಂಟ್ ಮಾಡೋದು ತಪ್ಪು’ ಎಂದು ನೆಟ್ಟಿಗರಿಗೆ ಸಾನ್ಯ ಐಯ್ಯರ್ ಖಡಕ್ ಉತ್ತರ ನೀಡಿದ್ದಾರೆ.