Sanya Iyer: ಬಿಗ್ಬಾಸ್ ನಿಂದ ಹೊರಬಂದ ಸಾನ್ಯಾಗೆ ಸಿಕ್ಕ ದುಬಾರಿ ಹಣ ವೈರಲ್
Sanya Iyer elimination Bigboss Kannada Season 9: ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಿಂದ ಸಾನ್ಯಾ ಅಯ್ಯರ್ ಅವರು ಹೊರಗಡೆ ಬಂದಿದ್ದು ಐಶ್ವರ್ಯಾ ಪಿಸ್ಸೆ ನವಾಜ್ ದರ್ಶ್ ಚಂದ್ರಪ್ಪ ಮಯೂರಿ ನೇಹಾ ಗೌಡ ನಂತರದಲ್ಲಿ ಸಾನ್ಯಾ ಅಯ್ಯರ್ ಅವರು ದೊಡ್ಮನೆಯಿಂದ ಹೊರಗಡೆ ಬಂದಿದ್ದಾರೆ.
ಹೌದು ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿಯೂ (Bigboss OTT) ಕೂಡ ಫೈನಲ್ ಆಗಿ ಸಾನ್ಯಾ ಅವರು ಟಿವಿ ಸೀಸನ್‌ಗೆ ಕಾಲಿಟ್ಟಿದ್ದರು. ಇನ್ನು ರೂಪೇಶ್ ಶೆಟ್ಟಿ ಜೊತೆ ಸಾನ್ಯಾ ಐಯ್ಯರ್ ಅವರು ಹೆಚ್ಚು ಕ್ಲೋಸ್ ಆಗಿದ್ದು ಸದಾ ಕಾಲ ಅವರಿಬ್ಬರು ಹೆಚ್ಚಾಗಿ ಜೊತೆಯಲ್ಲಿ ಇರುತ್ತಿದ್ದರು.
ಸಾನ್ಯಾ ಐಯ್ಯರ್ ಎಲಿಮಿನೇಟ್
ಹೌದು ಇಬ್ಬರ ನಡುವೆ ಸಿಕ್ಕಾಪಟ್ಟೆ ಆತ್ಮೀಯತೆ ಬೆಳೆದಿದ್ದು ಹಾಗಾಗಿ ಸಾನ್ಯಾ ಐಯ್ಯರ್ ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಸಖತ್ ಭಾವುಕರಾದರು. ಇನ್ನು ಎಲ್ಲರ ಎದುರಲ್ಲೂ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು ಅವರನ್ನು ಎಲ್ಲರೂ ಸಮಾಧಾನ ಮಾಡಿದ್ದಾರೆ.
ದೊಡ್ಮನೆಯಿಂದ ಹೊರಡುವಾಗ ಸಾನ್ಯಾ ಐಯ್ಯರ್ ಅವರು ರೂಪೇಶ್ ಶೆಟ್ಟಿಗೆ ಒಂದು ಉಂಗುರು ನೀಡಿ ಬಂದಿದ್ದು ನಾನು ಹೊರಗೆ ಬರುವವರೆಗೂ ನೀನು ಬದಲಾಗಬೇಡ ಎಂದು ರೂಪೇಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕಿರುತೆರೆಯಿಂದ ಬಂದ ಸಾನ್ಯಾ ಐಯ್ಯರ್ ಅವರು ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ಬಳಿಕ ಅವರ ಚಾರ್ಮ್ ಹೆಚ್ಚಿತು. ಅವರು 6ನೇ ವಾರದಲ್ಲೇ ಔಟ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ.
ಪ್ರಶಾಂತ್ ಸಂಬರ್ಗಿ ಸೇಫ್
ಇನ್ನು ಕೊನೆಗೂ ನಿರೀಕ್ಷಿತ ಮಟ್ಟದಲ್ಲಿ ವೋಟ್ ಪಡೆಯಲು ಸಾಧ್ಯವಾಗದೇ ಅವರು ಎಲಿಮಿನೇಟ್ ಆಗಿದ್ದು ಕೊನೇ ಹಂತದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಎಲಿಮಿನೇಷನ್ನಿಂದ ಸೇಫ್ ಆಗಿದ್ದಾರೆ.
ರೂಪೇಶ್ ಶೆಟ್ಟಿ ಜೊತೆಗಿನ ಅತಿಯಾದ ಸ್ನೇಹದಿಂದಾಗಿ ಸಾನ್ಯಾ ಐಯ್ಯರ್ ಅವರ ಆಟಕ್ಕೆ ತೊಂದರೆ ಆಗಿದೆ ಎಂಬ ಅಭಿಪ್ರಾಯ ಕೆಲವರದ್ದಾಗಿದ್ದು ಆದರೆ ನನಗೆ ರೂಪೇಶ್ ಜೊತೆಗಿನ ಒಡನಾಟದಿಂದ ಎಂದೂ ಸಮಸ್ಯೆ ಆಗಿಲ್ಲ. ಎಲ್ಲವೂ ನನಗೆ ಪಾಸಿಟಿವ್ ಆಗಿದೆ ಎಂದು ಸುದೀಪ್ ಎದುರಲ್ಲಿ ಸಾನ್ಯಾ ಐಯ್ಯರ್ ರವರು ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ವಿಷಯವನ್ನು ಹೇಳುವ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಕಿರಿಯರಾಗಿದ್ದು ಪ್ರಶಾಂತ್ ಸಂಬರಗಿ ಹಾಗೂ ಸಾನ್ಯಾ ಅಯ್ಯರ್ ನಡುವೆ ಯಾರು ಹೊರಗಡೆ ಹೋಗಬೇಕು ಎಂದಾಗ ಬಹುತೇಕರು ಸಾನ್ಯಾ ಅಯ್ಯರ್ ಹೋಗಲಿ ಎಂದು ಹೇಳಿದ್ದರು.
ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಅವರು ಸಾನ್ಯಾ ಅಯ್ಯರ್ ಮನೆಯಲ್ಲಿ ಇರಲಿ ಎಂದು ಹೇಳಿದ್ದರು.
ಬಿಗ್ ಬಾಸ್ ಮನೆಯಲ್ಲಿ ನಾನು ಉಳಿದುಕೊಂಡರೆ ಆಟ ನೋಡುವ ರೀತಿ ಬದಲಾಗತ್ತೆ, ಇನ್ನೂ ಹೆಚ್ಚಾಗಿ ನೇರವಾಗಿ ಮಾತನಾಡುತ್ತೇನೆ ಎಲ್ಲರ ಜೊತೆ ಚೆನ್ನಾಗಿ ಬೆರೆಯುತ್ತೇನೆ ಎಂದು ಸಾನ್ಯಾ ಅಯ್ಯರ್ ಹೇಳಿದ್ದು ಆದರೆ ದುರದೃಷ್ಟವಶಾತ್ ಸಾನ್ಯಾ ಅವರು ಈ ವಾರ ಮನೆಯಿಂದ ಹೊರಗಡೆ ಬಂದಿದ್ದಾರೆ.
ಫ್ಯಾಮಿಲಿ ಬಗ್ಗೆ ಪ್ರೀತಿ
ಇನ್ನು ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ 6 ವಾರ ಇದ್ದು ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಲ್ಲಿ 6 ವಾರ ಇದ್ದು ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆಗಿ ಬಂದಿದ್ದು ಇದು ಸಣ್ಣಮಾತಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಲೇಸ್ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ನನಗೆ ನನ್ನ ಫ್ಯಾಮಿಲಿ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೀಯಾ. ನನ್ನಲ್ಲಿ ಇಷ್ಟೊಂದು ಮೌಲ್ಯ ಬರುವಂತೆ ಮಾಡಿದ್ದಿಯಾ. ಸ್ಪರ್ಧಿಯಾಗಿ ನೀನು ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ.
ಸಂಭಾವನೆ ವಿಚಾರ
ನೀನು ಮನೆಯಿಂದ ಹೊರಗಡೆ ಹೋದಮೇಲೆ ದಯವಿಟ್ಟು ಬದಲಾಗಬೇಡ ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರೋದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ.
ಇದುವರೆಗೂ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೀನಿ ಅದು ನಿನ್ನ ವಿಚಾರಕ್ಕೆ ಎಂದು ರೂಪೇಶ್ ಶೆಟ್ಟಿ ಅವರು ಸಾನ್ಯಾ ಅಯ್ಯರ್ ಬಳಿ ಹೇಳಿಕೊಂಡಿದ್ದಾರೆ. ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಸಾನ್ಯಾಗೆ ಒಂದೂವರೆ ಲಕ್ಷ ರು ನೀಡಲಾಗಿದೆ.