Sanya Iyer Latest Video: ಹೊಸ ಅವತಾರದಲ್ಲಿ ಸಾನ್ಯ ಅಯ್ಯರ್, ವಿಡಿಯೋ ವೈರಲ್.
ಇನ್ಸ್ಟಾಗ್ರಾಮ್ ನಲ್ಲಿ ಸಕತ್ ಆಗಿರುವ ವಿಡಿಯೋ ಶೇರ್ ಮಾಡಿದ ನಟಿ ಸಾನ್ಯ ಅಯ್ಯರ್.
Bigg Boss Sanya Iyer Instagram video: ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ (Sanya Iyer) ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ನಟಿ ಹೊಸ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ನಟಿ ಸಾನ್ಯ ಅಯ್ಯರ್ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸಾನ್ಯ ಅಯ್ಯರ್
ಕಲರ್ಸ್ ಕನ್ನಡದ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆಗೆ ಸಾನ್ಯ ಅಯ್ಯರ್ ಕಾಲಿಟ್ಟಿದ್ದರು. ಚಿಕ್ಕವಯಸ್ಸಿಯಲ್ಲೇ ತಮ್ಮ ನಟನೆಯ ಮೂಲಕ ಸಾಕಷ್ಟು ಕನ್ನಡಿಗರ ಮನ ಗೆದ್ದಿದ್ದರು. ನಂತರ ನಟಿ ಬಿಗ್ ಬಾಸ್ ಓಟಿಟಿ ಮೂಲಕ ಮತ್ತೆ ಕನ್ನಡಿಗರಿಗೆ ಹತ್ತಿರವಾಗಿದ್ದರು.
ಬಿಗ್ ಬಾಸ್ (Bigg Boss OTT) ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9 (Bigg Boss Season 9) ಗೆ ಸಾನ್ಯ ಅಯ್ಯರ್ ಆಯ್ಕೆಗೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ನಟಿ ಸೋಶಿಯಲ್ ಮೀಡಿಯಾದಲ್ಲಿ ಹತ್ತಿರವಾಗಿದ್ದರು.
ತಮ್ಮ ಹೊಸ ಹೊಸ ಲುಕ್ ಗಳನ್ನೂ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾಳೆ ಇರುತ್ತಾರೆ. ಇದೀಗ ಸಾನ್ಯ ಅಯ್ಯರ್ ಇನ್ಸ್ಟಾಗ್ರಾಮ್ ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಏನಿದೆ ಎಂದು ತಿಳಿದುಕೊಳ್ಳೋಣ.
View this post on Instagram
ಹೊಸ ಅವತಾರದಲ್ಲಿ ಸಾನ್ಯ ಅಯ್ಯರ್
ಸಾನ್ಯ ಅಯ್ಯರ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ತಲೆ ಕೂದಲನ್ನು ಶಾರ್ಟ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಾನ್ಯ ಶಾಕ್ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಶಾರ್ಟ್ ಹೇರ್ ಮಾಡಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಸಾನ್ಯ ತಮ್ಮ ಲಾಂಗ್ ಹೇರ್ ಅನ್ನು ಶಾರ್ಟ್ ಮಾಡಿಕೊಂಡಿರುವುದು ಕೆಲವರಲ್ಲಿ ಬೇಸರ ಮೂಡಿಸಿದೆ. ಇನ್ನು ಕೆಲವರು ಸಾನ್ಯ ಅಯ್ಯರ್ ನ್ಯೂ ಲುಕ್ ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾನ್ಯ ಅಯ್ಯರ್ ಅವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.