Sanya Iyer Poetry: ಕವನ ಬರೆದ ಸಾನ್ಯ ಐಯ್ಯರ್, ಲೇಖಕಿ ಆಗ್ತೀರಾ ಎಂದ ಅಭಿಮಾನಿಗಳು.

Sanya Iyer Poem: ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಐಯ್ಯರ್ (Sanya Iyer) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿದ್ದಾರೆ. ಈ ನಡುವೆ ಸಾನ್ಯ ಐಯ್ಯರ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರು.

ನಟಿ ಈಗಾಗಲೇ ತಮ್ಮ ಟ್ರಡಿಷನಲ್ ಲುಕ್ ಹಾಗೂ ಮಾಡರ್ನ್ ಲುಕ್ ಎರಡನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತದೆ.

Fans say that Sanya Iyer, who wrote the poem, is the author.
Image Credit: instagram

ಇದೀಗ ನಟಿ ಸಾನ್ಯ ಐಯ್ಯರ್ ಕವನ ಬರೆದಿದ್ದಾರೆ. ಇದೀಗ ಸಾನ್ಯ ಐಯ್ಯರ್ ಬರೆದ ಕವನ ಬಾರಿ ವೈರಲ್ ಆಗುತ್ತಿದೆ. ಸಾನ್ಯ ಐಯ್ಯರ್ ನಟನೆ ಬಿಟ್ಟು ಕವಯತ್ರಿ ಆಗುತ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಕವನ ಬರೆದ ಸಾನ್ಯ ಐಯ್ಯರ್
“ನ ಯಾರೆಂದು ನ ಅರಿತರೆ ನನ್ನ ಸುತ್ತ ನಾ ಇರುವ ಜಗತ್ತು ನನ್ನ ಕನಸಿನೊಡನೆ ಬೆರೆಯುವುದು ನನ್ನ ಕನಸು ಬರಿ ನನ್ನದಲ್ಲ ಅಂತರಾತ್ಮಗಳನ್ನು ಗೂಡುವುದು.

Actress Sanya Iyer became news after writing the poem
Image Credit: news18

ಬೇರೆ ಯಾರೋ ಗೀಚಿದ ದಾರಿಯಲ್ಲಿ ನಡೆಯುದಕ್ಕಿಂತ ನನ್ನದೇ ಕುಂಟ ಬಿಲ್ಲೆಯ ಅಂಕು ಡೊಂಕಿನ ಬಿಲ್ಲೆಯ ದಾರಿಯೇ ನನ್ನನ್ನು ದೈವದ ದ್ರಷ್ಟಿಯತ್ತ ತಲುಪಿಸುತ್ತದೆ.

Join Nadunudi News WhatsApp Group

ನಾ ಯಾರೆಂದು ನಾ ಅರಿತರೆ ನನ್ನ ನಿಷ್ಚಿಂತೆಯ ಮನಸ್ಸಿನಿಂದ ಹೊಮ್ಮುವ ಪ್ರೀತಿ ಮಕರಂದವನ್ನು ಜಗತ್ತಿನ ದುಂಬಿಗಳಿಗೆ ಹಂಚಬಹುದು. ನಾ ಹೂವಾಗಿ ಅರಳಿದಾಗ ಪರರಿಗೆ ಅರಳಿ ಮರದಷ್ಟು ಆಸರೆಯಾಗಬಹುದು.

Sanya Iyer wrote the poem
Image Credit: instagram

ನಾ ಯಾರೆಂದು ನಾ ಅರಿತರೆ ನೀ ಯಾರಾಗಿದ್ದಾರು ಆ ಆತ್ಮದ ವ್ಯಾಖ್ಯಾನ ಬದಲಾಗದು” ಎಂದು ಸಾನ್ಯ ಐಯ್ಯರ್ ಕವನ ಬರೆದಿದ್ದಾರೆ.

ಇದೀಗ ಸಾನ್ಯ ಐಯ್ಯರ್ ಅವರ ಕವನ ಬಹಳ ವೈರಲ್ ಆಗುತ್ತಿದೆ. ಸಾನ್ಯ ಐಯ್ಯರ್ ಕವಯತ್ರಿ ಆಗಿದ್ದಾರಾ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸಾನ್ಯ ಐಯ್ಯರ್ ಅವರ ಕವನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group