Sapta Saagaradaache Ello: ಜನರ ಕಣ್ಣಲ್ಲಿ ನೀರು ತರಿಸಿದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು….? ಭರ್ಜರಿ ಕಲೆಕ್ಷನ್.

ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ

Sapta Sagaradaache Ello Movie First Day Collection: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗಾ ಚಂದನವನದಲ್ಲಿ ಬಾರಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ (Sapta Saagaradaache Ello Movie) ಚಿತ್ರ. ಸಿನಿ ಪ್ರಿಯರ ಬಹುನೀರಿಕ್ಷಿತ ಸಪ್ತ ಸಾಗರದಾಚೆ ಎಲ್ಲೋ ಚಿತ್ರ  ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ಪ್ರತಿ ಸಿನಿಮಾ ಕೂಡ ನೋಡುಗರ ಕಣ್ಅಂಚಿನಲ್ಲಿ ನೀರು ತರಿಸುತ್ತದೆ. ಅಷ್ಟೊಂದು ಭಾವುಕತೆಯಿಂದ ರಕ್ಷಿತ್ ಶೆಟ್ಟಿ ನಟಿಸುತ್ತಾರೆ. ಇದೀಗ ತೆರೆ ಕಂಡಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಬಾರಿ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

Rakshit Shetty's Sapta Saagaradaache Ello made a record collection on the first day
Image Credit: imdb

ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಂಡ ಸಪ್ತ ಸಾಗರದಾಚೆ ಎಲ್ಲೋ ಚಿತ್ರ
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಶ್ವಾನದ ಜೊತೆಗಿನ ರಕ್ಷಿತ್ ಬಾಂಧವ್ಯ ಎಲ್ಲರ ಮನ ಮುತ್ತಿಟ್ಟು. ಚಾರ್ಲಿ ಚಿತ್ರ ಕೂಡ ಎಮೋಷನಲ್ ಸಿನಿಮಾವಾಗಿದ್ದು ಈ ಚಿತ್ರ ಕೂಡ ಎಲ್ಲರನ್ನು ಅಳುವಂತೆ ಮಾಡಿತ್ತು.

ಇನ್ನೂ ರಕ್ಷಿತ್ ಅಭಿನಯದ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ಹೇಮಂತ್ ಅವರು ನಿರ್ದೇಸಿದ್ದರು.ಈ ಚಿತ್ರದಲ್ಲಿ ಕೂಡ ಪ್ರೇಕ್ಷಕರ ಮನ ಮುಟ್ಟುವ ಸಾಕಷ್ಟು ಸನ್ನಿವೇಶಗಳಿದ್ದವು . ಇದೀಗ ಇಬ್ಬರ ಕಾಂಬಿನೇಷನ್ ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 1 ಚಿತ್ರ ಮೂಡಿ ಬಂದಿದೆ. ಈ ಚಿತ್ರ ಕೂಡ ಬರಿ ಎಮೋಷನಲ್ ಆಗಿದ್ದು ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.

ಸಿನಿ ಪ್ರಿಯರನ್ನು ಮೋಡಿ ಮಾಡಿದ ಸಪ್ತ ಸಾಗರದಾಚೆ ಎಲ್ಲೋ
ರಕ್ಷಿತ್ ಶೆಟ್ಟಿ ಅವರಿಗೆ ಮೊದಲ ಬಾರಿಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ. ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದ ಈ ಜೋಡಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸದ್ಯ ಬಾರಿ ಸೆನ್ಸೆಷನ್ ಕ್ರಿಯೇಟ್ ಮಾಡುತ್ತಿದೆ.

Join Nadunudi News WhatsApp Group

sapta saagaradaache ello first day collection
Image Credit: imdb

ಚಿತ್ರ ಬಿಡುಗಡೆಗೊಂಡ ಮೊದಲ ದಿನದ ರಿಯಾಕ್ಷನ್ ತುಂಬಾ ಪಾಸಿಟಿವ್ ಆಗಿದೆ. ಇನ್ನೂ ಅಡ್ವಾನ್ಸ್ ಬುಕಿಂಗ್, ಪ್ರೀಮಿಯರ್ ಶೋ ಕಂಡ ಚಿತ್ರ ಬಾಕ್ಸ್ ಓಫೀಸ್ ಅನ್ನು ದೂಳೀಪಟ ಮಾಡಲಾಯಿದೆ. ಇದೀಗ ಮೂಲಗಳಿಂದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ವರದಿಯಾಗಿದೆ.

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ದಿನದ ಕಲೆಕ್ಷನ್
ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸಂಪೂರ್ಣ ಪ್ರೇಮ ಕಥೆಯಾಗಿದ್ದು ಭಗ್ನ ಪ್ರೇಮಿಗಳ ಪ್ರೇಮಿಗಳಿಗೆ ಹತ್ತಿರವಾಗಿದೆ. ಸುಮಾರು 400 ಕ್ಕೂ ಹೆಚ್ಚಿನ ಚಿತ್ರಮಂದಿರದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಅದ್ದೂರಿ ಪ್ರದರ್ಶನ ಕಂಡಿದೆ. ಇನ್ನೂ 52 ಪ್ರೈಡ್ ಪ್ರೀಮಿಯಂ ಶೋ ಗಳಿಂದ 40 ಲಕ್ಷ ಗಳಿಕೆಯಾಗಿದೆ ಎನ್ನಲಾಗುತ್ತಿದೆ.

ಇನ್ನೂ ತೆರೆ ಕಂಡ ಮೊದಲ ದಿನವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಬರೋಬ್ಬರಿ 3.5 ರಿಂದ 4.5 ಕೋಟಿ ಹಣ ಗಳಿಸಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿರುವ ಕಾರಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲೇಶನ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group