Sapthami: ಅಭಿಮಾನಿಗಳ ಜೊತೆ ಮನದ ಮಾತು ಹಂಚಿಕೊಂಡ ಸಪ್ತಮಿ, ರಾಘವೇಂದ್ರ ರಾಜಕುಮಾರ್ ಜೊತೆ ಸಪ್ತಮಿ.
ರಾಘವೇಂದ್ರ ರಾಜಕುಮಾರ್ ಅವರ ಮನೆಯಲ್ಲಿ ನಟಿ ಸಪ್ತಮಿ ಗೌಡ ಅವರು ಕಾಣಿಸಿಕೊಂಡಿದ್ದಾರೆ.
Actress Sapthami Gowda IN Raghavendra Rajkumar Home: ಕಾಂತಾರ (Kantara) ಸಿನಿಮಾ ಯಾಶಸ್ಸಿನ ನಂತರ ನಟಿ ಸಪ್ತಮಿ ಗೌಡ (Sapthami Gowda) ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಾಂತಾರ ಸಿನಿಮಾದ ನಂತರ ಸಪ್ತಮಿ ಗೌಡ ಅವರಿಗೆ ಜನಪ್ರಿಯತೆ ಬಂದಿದೆ.
ಕಾಂತಾರ ಸಿನಿಮಾದ ಬಳಿಕ ಸಿನಿಮಾಗಳ ಆಫರ್ ಪಡೆದುಕೊಂಡ ಸಪ್ತಮಿ ಗೌಡ ಅವರು ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಡಾ. ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ (Yuva Rajkumar) ಜೊತೆ ಯುವ ಸಿನಿಮಾದಲ್ಲಿ ನಟಿಸಲು ಸಹ ಮುಂದಾಗಿದ್ದಾರೆ. ಇದರ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದೆ.
ರಾಘವೇಂದ್ರ ರಾಜ್ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಅವರು ಇದೀಗ ರಾಘವೇಂದ್ರ ರಾಜ್ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡು ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟ ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ ಸಪ್ತಮಿ ಗೌಡ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಕಳೆದ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ತಮ್ಮ ಮನದ ಮಾತನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ನಟಿ ಸಪ್ತಮಿ ಗೌಡ
ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತನಾಡಿದ ಸಪ್ತಮಿ ಗೌಡ, ನಾನು ಈ ದಿನವನ್ನು ಎಂದಿಗೂ ಮರೆಯಲಾರೆ ಎಂದು ನಟಿ ಸಪ್ತಮಿ ಗೌಡ ತಮ್ಮ ಮನದ ಮಾತನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ನಟಿ ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದ ನಂತರ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನು ಈ ನಟಿ ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ. ಸಪ್ತಮಿ ಅಭಿಮಾನಿಗಳು ಇವರ ಇನ್ನು ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ.
View this post on Instagram