Saptami Gowda Remuneration: ಯುವರಾಜನ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ಸಪ್ತಮಿ ಗೌಡ, ದುಬಾರಿಯಾದ ಕಾಂತಾರ ಬೆಡಗಿ.
Actress Saptami Gowda Salary In Yuva Kannada Movie: ಕಾಂತಾರ ಬೆಡಗಿ ಸಪ್ತಮಿ ಗೌಡ (Saptami Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಸಪ್ತಮಿ ಗೌಡ ಇದೀಗ ಯುವ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಬರಲಿದ್ದಾರೆ.
ಇನ್ನು ಯುವ ಚಿತ್ರದ ಬಗ್ಗೆ ಹೊಸ ಹೊಸ ಅಪ್ಡೇಟ್ ಗಳು ಸಿಗುತ್ತಲೇ ಇದೆ. ಇದೀಗ ಸಪ್ತಮಿ ಗೌಡ ಯುವ ಚಿತ್ರದಲ್ಲಿ ನಟಿಸಲು ಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.
ಹೊಸ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಬ್ಯೂಟಿ
ರಾಜ್ ಕುಮಾರ್ ವಂಶದ ಕೊನೆಯ ಕುಡಿ ಯುವರಾಜ್ ಕುಮಾರ್ (Yuva Rajkumar) ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯುವ ಸಿನಿಮಾದ ಮೂಲಕ ಯುವರಾಜ್ ಕುಮಾರ್ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಇದೀಗ ಯುವನ ಹೊಸ ಸಿನಿಮಾದಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಈ ಚಿತ್ರ ಬರಲಿದೆ. ಸಪ್ತಮಿ ಗೌಡ ಯುವ ಚಿತ್ರದಲ್ಲಿ ನಟಿಸುವ ಬಗ್ಗೆ ಚಿತ್ರತಂಡ ಘೋಷಿಸಿದೆ.
ಯುವರಾಜ್ ಕುಮಾರ್ ಗೆ ಜೋಡಿಯಾಗಲಿರುವ ನಟಿ ಸಪ್ತಮಿ ಗೌಡ
ಇತ್ತೀಚೆಗಷ್ಟೇ ಯುವರಾಜ್ ಕುಮಾರ್ ಅವರ ಯುವ ಚಿತ್ರದ ಮುಹೂರ್ತ ಅದ್ದೂರಿಯಾಗಿ ಮಾಡಲಾಗಯಿತು. ಟೈಟಲ್ ಅನಾವರ ಮಾಡುವ ಮೂಲಕ ಯುವ ಚಿತ್ರ ಸಾಕಷ್ಟು ಸದ್ದು ಮಾಡಿದೆ.
ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಯುವರಾಜ್ ಕುಮಾರ್ ಅವರ ಮೊದಲ ಚಿತ್ರ ಯುವ ಮೂಡಿಬರಲಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಯುವ- ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಬರಲಿದೆ. ಈ ಚಿತ್ರದ ಮೇಲೆ ಸಿನಿಪ್ರಿಯರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಯುವ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನು ಕೇಳಿದ ಸಪ್ತಮಿ ಗೌಡ
ಇನ್ನು ಯುವ ಚಿತ್ರಕ್ಕಾಗಿ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮಾಡುತಿದ್ದೇನೆ, ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿರುವ ನನಗೆ ಖುಷಿ ಸಂಗತಿಯಾಗಿದೆ.
ನಟ ಯುವ ರಾಜಕುಮಾರ್ ಅವರ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ನಟಿ ಸಪ್ತಮಿ ಗೌಡ. ಕಾಂತಾರ ಚಿತ್ರಕ್ಕಿಂತ ಹೆಚ್ಚು ಸಂಭಾವನೆಯನ ಕೇಳಿದ್ದಾರೆ ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾತ್ರಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೇನೆ, ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ ಎಂದು ನಟಿ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದರು. ಇನ್ನು ಯುವ ಚಿತ್ರದಲ್ಲಿ ನಟಿಸಲು ನಟಿ ಸಪ್ತಮಿ ಗೌಡ ದುಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ.