Sarath Babu Death: ಹಿರಿಯ ನಟ ಶರತ್ ಬಾಬು ನಿಧನ, ಕಂಬನಿ ಮಿಡಿದ ಚಿತ್ರರಂಗ.
ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ ಖ್ಯಾತ ನಟ ಶರತ್ ಬಾಬು ನಿಧನರಾಗಿದ್ದಾರೆ.
Actor Sarath Babu No More: ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ಶರತ್ ಬಾಬು (Sarat Babu) ಇದು ನಿಧನರಾಗಿದ್ದಾರೆ. ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಇಂದು ನಟ ಶರತ್ ಬಾಬು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ಸಾವಿನ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ಹಿರಿಯ ನಟ ಶರತ್ ಬಾಬು ನಿಧನ
ಕಳೆದ ಎರಡು ವಾರದ ಹಿಂದೆ ನಟ ಶರತ್ ಬಾಬು ಅವರ ಸಾವಿನ ಸುದ್ದಿಗಳು ವೈರಲ್ ಆಗಿದ್ದವು. ಆದರೆ ಶರತ್ ಬಾಬು ಅವರ ಸಹೋದರಿ ಅವರ ಸಾವಿನ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. ಆದರೆ ಇಂದು ನಟ ಮರಣ ಹೊಂದಿದ್ದಾರೆ.
ಉಸಿರಾಟದ ಸಮಸ್ಯೆಯಿಂದಾಗಿ ಶರತ್ ಬಾಬು ನಿಧನರಾಗಿದ್ದಾರೆ. ವೆಂಟಿಲೇಟರ್ ನಲ್ಲಿ ಶರತ್ ಬಾಬು ಅವರನ್ನು ಇರಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ನಟ ಬಳಲುತ್ತಿದ್ದು ನಟ ಶರತ್ ಬಾಬು ಇಂದು ನಿಧನರಾಗಿದ್ದಾರೆ.
ಅಮೃತವರ್ಷಿಣಿ ಚಿತ್ರದ ಮೂಲಕ ಖ್ಯಾತಿ ಪಡೆದ ನಟ ಶರತ್ ಬಾಬು
ನಟ ಶರತ್ ಬಾಬು ಅವರು ಕನ್ನಡ ಚಿತ್ರದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸತತ 4 ದಶಕಗಳಿಂದ 200 ಹೆಚ್ಚು ಚಿತ್ರಗಳನ್ನು ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ ಶರತ್ ಬಾಬು ಅವರು ಅಮೃತವರ್ಷಿಣಿ ಚಿತ್ರದಲ್ಲಿ ನಟಿಸುವ ಮೂಲಕ ಹೆಚ್ಚಿ ಖ್ಯಾತಿ ಪಡೆದು ಕನ್ನಡಿಗರ ಮನ ಗೆದ್ದಿದ್ದರು. ಆದರೆ ಇಂದು ನಟ ನಿಧನ ಹೊಂದಿರುವುದು ಭಾರತೀಯ ಚಿತ್ರರಂಗಕ್ಕೆ ತುಂಬರಲಾದ ನಷ್ಟವನ್ನು ತಂದೊಡ್ಡಿದೆ.