SARRVAD S-150: ಈ ಸಣ್ಣ ಜನರೇಟರ್ ಇದ್ದರೆ ಸಾಕು ಕರೆಂಟ್ ಬಿಲ್ ಕಟ್ಟೋದೆ ಬೇಡ, ಅತ್ಯಂತ ಕಡಿಮೆ ಬೆಲೆಗೆ

ವಿದ್ಯುತ್ ನಂಬಿಕೊಂಡು ಕೆಲಸ ಮಾಡುವವರಿಗಾಗಿ ಸಣ್ಣ ಜನರೇಟರ್ ಒಂದು ಬಿಡುಗಡೆಯಾಗಿದೆ.

SARRVAD Portable Solar Power Generator S-150:  ದೇಶದಲ್ಲಿ ಅನೇಕ ಜನರು ವಿದ್ಯುತ್ ಅನ್ನೇ ನಂಬಿಕೊಂಡು ಕೆಲಸ ಮಾಡುತ್ತಾರೆ. ಇದೀಗ ಮಳೆಗಾಲ ನಡೆಯುತ್ತಿದ್ದು ವಿದ್ಯುತ್ ನಂಬಿಕೊಂಡು ಕೆಲಸ ಮಾಡುವವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಅದರಲ್ಲೂ ಹಳ್ಳಿಗಳಲ್ಲಿ ಮಳೆಯಿಂದ ಏನಾದರೂ ವಿದ್ಯುತ್ ಲೈನ್ ಸಮಸ್ಯೆಗೆ ಒಳಗಾದರೆ ಅದು ರಿಪೇರಿಯಾಗಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. 

ಸೌರ ಪವರ್ ಜನರೇಟರ್
ಸಾಮಾನ್ಯವಾಗಿ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ವಿದ್ಯುತ್ ಅನ್ನು ನಂಬಿಕೊಳ್ಳಲು ಸಾಧ್ಯವಿಲ್ಲದೆ ಜನರೇಟರ್ ಅನ್ನು ಬಳಸುತ್ತಾರೆ. ಇದೀಗ ವಿದ್ಯುತ್ ಮೂಲಕ ಕೆಲಸ ಮಾಡುವವರಿಗಾಗಿ ಸಣ್ಣ ಜನರೇಟರ್ ಒಂದು ಬಿಡುಗಡೆಯಾಗಿದೆ. ಈ ಜನರೇಟರ್ ನಿಂದ ಅನೇಕ ಉಪಯೋಗವಾಗಲಿದೆ. ಅಂದರೆ ಟಿವಿ ಫ್ಯಾನ್, ಲ್ಯಾಪ್ ಟಾಪ್, ಕಂಪ್ಯೂಟರ್ ಸೇರಿದಂತೆ ಎಲ್ಲವನ್ನು ಬಳಕೆ ಮಾಡಬಹುದು. ಈ ಜನರೇಟರ್ ಹೆಸರು ಸೌರ ಪವರ್ ಜನರೇಟರ್.

SARRVAD Portable Solar Power Generator S-150
Image Credit: Zeenews

ಸೌರ ಪವರ್ ಜನರೇಟರ್ ನ ವಿಶೇಷತೆ
ಈ ಸೌರ ಪವರ್ ಜನರೇಟರ್ ನಿಂದ ವಿದ್ಯುತ್ ನಿಂದ  ಬಳಕೆಯಾಗುವ ಎಲ್ಲ ಕೆಲಸವನ್ನು ಮಾಡಬಹುದು. ಈ ಸೌರ ಜನರೇಟರ್ ನ ಹೆಸರು SARRVAD ಪೋರ್ಟಬಲ್ ಸೋಲಾರ್ ಪವರ್ ಜನರೇಟರ್ S-150 ಆಗಿದೆ. ಈ ಜನರೇಟರ್ ಅತಿ ಚಿಕ್ಕದಾಗಿದೆ. ಆದರೆ ಇದರಿಂದ ಅನೇಕ ಉಪಯೋಗಗಳು ಆಗಲಿದೆ.

ಈ ಸೌರ ಜನರೇಟರ್ 42000 mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ. ಅಂದರೆ ಇದನ್ನು ಬಳಕೆ ಮಾಡಿಕೊಂಡು ನೀವು ಐಫೋನ್ ಅನ್ನು ಸುಮಾರು 8 ಬಾರಿ ಚಾರ್ಜ್ ಮಾಡಬಾಹುದು. ಇದು ಸೌರ ಫಲಕದೊಂದಿಗೆ ಬರಲಿದೆ. ಈ ಜನರೇಟರ್ ಮೂರೂ ರೀಚಾರ್ಜಿನ್ಗ್ ಮೋಡ್ ಗಳನ್ನೂ ಹೊಂದಿದೆ. ಅದರಲ್ಲಿ AC 220V ವಾಲ್ ಸಾಕೆಟ್ ಮೂಲಕ ಸಂಪೂರ್ಣವಾಗಿ ರಿಚಾರ್ಜ್ ಮಾಡಲು ಸುಮಾರು 6 ರಿಂದ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

SARRVAD Portable Solar Power Generator S-150
Image Credit: Indiamart

ಸೌರ ಪವರ್ ಜನರೇಟರ್ ನ ಬೆಲೆ
ಈ ಸೌರ ಪವರ್ ಜನರೇಟರ್ ನ ಬೆಲೆ 19,000 ರೂಪಾಯಿ ಆಗಿದ್ದು. ಇದಕ್ಕೆ ಯಾವುದೇ ನೇರ ಡಿಸ್ಕೌಂಟ್ ನೀಡಿಲ್ಲ. ಗ್ರಾಹಕರು ಕೋಟಕ್, ಹೆಚ್ಚು ಡಿ ಎಫ್ ಸಿ, ಹೆಚ್ ಎಸ್ ಬಿ ಸಿ ಬ್ಯಾಂಕ್ ಕಾರ್ಡ್ ಗಳನ್ನೂ ಬಳಕೆ ಮಾಡಿಕೊಂಡು 1500 ರೂಪಾಯಿಗಳವರೆಗೆ ಡಿಸ್ಕೌಂಟ್ ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group