Ads By Google

Satellite Toll System: ದೇಶದಲ್ಲಿ ಬಂದ್ ಆಗಲಿದೆ ಎಲ್ಲಾ Fastag, ಇನ್ನುಮುಂದೆ ಸ್ಯಾಟಲೈಟ್ ಮೂಲಕ ಟೋಲ್ ಪಾವತಿ

Satellite Toll System in india

Image Credit: Original Source

Ads By Google

Satellite Toll System Update: ಸದ್ಯ ದೇಶದಲ್ಲಿ ರಸ್ತೆ ಸಂಚಾರ ನಿಯಮಗಳು ಸಾಕಷ್ಟು ಬದಲಾಗುತ್ತಿವೆ. ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಸಂಚಾರ ನಿಯಮದಲ್ಲಿ ಹೊಸ ಹೊಸ ರೀತಿಯ ಬದಲಾವಣೆಯನ್ನು ಮಾಡುತ್ತಿದ್ದಾರೆ. ಇನ್ನು ರಸ್ತೆ ಸಂಚಾರ ನಿಯಮದಲ್ಲಿ ಬದಲಾವಣೆ ಆಗುವುದರ ಜೊತೆಗೆ ಟೋಲ್ ತೆರಿಗೆಯಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗಿವೆ. ಈಗಾಗಲೇ ದೇಶದಲ್ಲಿ ಟೋಲ್ ಸಂಗ್ರಹಣೆಗಾಗಿ ವಿವಿದ ರೀತಿಯ ತಂತ್ರಜ್ಞಾನಗಳನ್ನು ಬಳಸಲಾಗಿದೆ.

ಪ್ರಸ್ತುತ ಟೋಲ್ ಸಂಗ್ರಹಣೆಗಾಗಿ FASTag ಅನ್ನು ಬಳಸಲಾಗುತ್ತದೆ. ಈ ಫಾಸ್ಟ್ ಟ್ಯಾಗ್ ನ ಮೂಲಕ ಜನರು ಸರಳ ವಿಧಾನದಲ್ಲಿ ಟೋಲ್ ಅನ್ನು ಪಾವತಿಸುತ್ತಿದ್ದಾರೆ. ಆದರೆ ಇದೀಗ Toll ಸಂಗ್ರಹಣೆಗೆ Fastag ಬಳಸುವುದಕ್ಕೆ ಬ್ರೇಕ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಫಾಸ್ಟ್ ಟ್ಯಾಗ್ ನ ಬಳದಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲು ಸರ್ಕಾರ ನಿರ್ಧರಿಸಿದೆ.

Image Credit: team-bhp

ದೇಶದಲ್ಲಿ ಹೊಸ ಟೋಲ್ ಸಂಗ್ರಹಣಾ ವ್ಯವಸ್ಥೆ ಜಾರಿ
ಕೇಂದ್ರ ಸರ್ಕಾರ ಟೋಲ್ ಸಂಗ್ರಹಣೆಯಲ್ಲಿ FASTag ಅನ್ನು ರದ್ದುಗೊಳಿಸಲು ನಿರ್ಧರಿಸಿದೆ. ಫಾಸ್ಟ್ ಟ್ಯಾಗ್ ನ ಹೊರತಾಗಿ ಟೋಲ್ ಸಂಗ್ರಹಣೆಗೆ ಸ್ಯಾಟಲೈಟ್ ಟೋಲ್ ಸಿಸ್ಟಂ ಅನ್ನು ಜಾರಿಗೊಳಿಸಲು ನಿರ್ಧರಿಸಿದೆ. ಟೋಲ್ ಸಂಗ್ರಹಣೆಯ ಸಮಯದಲ್ಲಿ ಗ್ರಾಹಕರ ಸಮಯ ಇನ್ನಷ್ಟು ಉಳಿಸಲು ಸರ್ಕಾರ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಟೋಲ್ ಪಾವತಿದಾರರ ಸಮಯ ಸಾಕಷ್ಟು ಉಳಿತಾಯ ಆಗಲಿದೆ.

ಸದ್ಯದಲ್ಲೇ ಜಾರಿಗೆ ಬರಲಿದೆ ಸ್ಯಾಟಲೈಟ್ ಟೋಲ್ ಸಿಸ್ಟಂ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಬೂತ್‌ ಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಬುಧವಾರ ಪ್ರಕಟಿಸಿದ್ದು, ಅತ್ಯಾಧುನಿಕ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು (Satellite Toll System) ಪರಿಚಯಿಸಿದ್ದಾರೆ.

ಈ ಹೊಸ ವ್ಯವಸ್ಥೆಯಡಿಯಲ್ಲಿ, ಪ್ರಯಾಣದ ದೂರದ ಆಧಾರದ ಮೇಲೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಂದ ಹಣವನ್ನು ನೇರವಾಗಿ ಕಡಿತಗೊಳಿಸಲಾಗುತ್ತದೆ. ಟೋಲ್ ಸಂಗ್ರಹಣೆಯ ತಡೆರಹಿತ ಮತ್ತು ಪರಿಣಾಮಕಾರಿ ವಿಧಾನವನ್ನು ಖಚಿತಪಡಿಸುತ್ತದೆ. ಶೀಘ್ರದಲ್ಲೇ ಟೋಲ್ ಸಂಗ್ರಹಣೆಗಾಗಿ Satellite Toll System ಅನ್ನು ಜಾರಿಗೊಳಿಸುವುದಾಗಿ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.

Image Credit: The Hindu
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in