ನಿಜಾಮುದ್ದೀನ್‌ ಎಂ.ಸೈಯದ್‌ ಆಗಿದ್ದ ಇವರು ಸತ್ಯಜಿತ್ ಆಗಿದ್ದು ಹೇಗೆ ಗೊತ್ತಾ, ಬಸ್ ಚಾಲಕನ ಕಥೆ ನೋಡಿ.

ನಟ ಸತ್ಯಜಿತ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಅಮೋಘವಾದ ನಟನೆಯ ಮೂಲಕ ರಾಜ್ಯದಲ್ಲಿ ಅಪಾರವಾದ ಅಭಿಮಾನಿಗಳನ್ನ ನಟ ಸತ್ಯಜಿತ್ ಅವರು ಗಳಿಸಿಕೊಂಡಿದ್ದರು ಎಂದು ಹೇಳಬಹುದು. ವಿಷ್ಣುವರ್ಧನ್, ಅಂಬರೀಷ್, ಸುದೀಪ್, ದರ್ಶನ್, ಪುನೀತ್ ಹೀಗೆ ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿದ ಸತ್ಯಜಿತ್ ಅವರು ನಿನ್ನೆ ವಯೋಸಹಜ ಖಾಯಿಲೆಯಿಂದ ತಮ್ಮ ಕುಟುಂಬ ಮತ್ತು ಅಭಿಮಾನಿಗಳನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ಬಹಳ ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯಜಿತ್ ಅವರ ಕಾಲಿಗೆ ಗ್ಯಾಂಗ್ರಿನ್ ಆದಕಾರಣ ಅವರನ್ನ ಒಂದು ಕಾಲನ್ನ ಕೂಡ ಕಟ್ ಮಾಡಲಾಗಿತ್ತು.

ಕಳೆದ ಮೂರೂ ನಾಲ್ಕು ದಿನಗಳಿಂದ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಆದಕಾರಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 2 ಘಂಟೆ ಸುಮಾರಿಗೆ ನಟ ಸತ್ಯಜಿತ್ ಅವರು ಇಹಲೋಕವನ್ನ ತ್ಯಜಿಸಿದ್ದಾರೆ. ಸ್ನೇಹಿತರೆ ನಿಮಗೆ ಸತ್ಯಜಿತ ಅವರ ಬಗ್ಗೆ ಹಲವು ವಿಷಯಗಳು ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಬಹುದು. ಸ್ನೇಹಿತರೆ ಸತ್ಯಜಿತ್ ಅವರ ಮೂಲ ಹೆಸರು ನಿಜಾಮುದ್ದೀನ್‌ ಎಂ.ಸೈಯದ್‌. ಹಾಗಾದರೆ ನಿಜಾಮುದ್ದೀನ್‌ ಎಂ.ಸೈಯದ್‌ ಅವರು ಸತ್ಯಜಿತ್ ಆಗಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

News of satyajit

ಸ್ನೇಹಿತರೆ ಆಟೊ, ಕಾರ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ಸತ್ಯಜಿತ್ ಅವರು 1975ರಲ್ಲಿ ಕೆಎಸ್‌ಆರ್‌ಟಿಸಿ ಧಾರವಾಡ ಡಿಪೋದಲ್ಲಿ ಚಾಲಕ ಹುದ್ದೆಗೆ ಸೇರಿದ್ದರು. ಹವ್ಯಾಸಿ ರಂಗಭೂಮಿ ತಂಡದ ಜೊತೆಗೂಡಿ ಕಲಾಜೀವನ ಆರಂಭಿಸಿದ್ದರು. ನಾಟಕ ತಂಡದ ಸದಸ್ಯರೇ ನಿಜಾಮುದ್ದೀನ್‌ ಎಂ.ಸೈಯದ್‌ ಹೆಸರು ಉದ್ದವಾಯಿತೆಂದು ಸತ್ಯಜಿತ್‌ ಎಂದು ನಾಮಕರಣ ಮಾಡಿದ್ದರು. ತಮ್ಮ ಜೀವನದ ಮೊದಲ ಚಿತ್ರವಾದ ಅಂಕುಶ್‌ ನಟನೆ ಮಾಡಿದ ಸತ್ಯಜಿತ್ ಅವರು ಈ ಚಿತ್ರದ ಮೂಲಕ ತಮ್ಮ ಸಿನಿ ಜೀವನವನ್ನ ಆರಂಭ ಮಾಡಿದರು. ತಮ್ಮ ಮೊದಲ ಚಿತ್ರದಲ್ಲೇ ಸತ್ಯಜಿತ್ ಅವರು ಖಳನಾಯಕನಾಗಿ ಕಾಣಿಸಿಕೊಂಡರು. ಅಲ್ಲಿಂದ ಸತ್ಯಜಿತ್‌ ಅವರಿಗೆ ಕನ್ನಡ ಚಿತ್ರಗಳಲ್ಲಿ ಬೇಡಿಕೆ ಆರಂಭವಾಯಿತು.

1986ರಲ್ಲಿ ತೆರೆಕಂಡ ಕೆ.ವಿ.ಜಯರಾಮ್‌ ಅವರ ಅರುಣರಾಗ ಚಿತ್ರದ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅವರಿಗೆ ನಂತರ ಸಾಲು ಸಾಲು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳು ಅರಸಿಕೊಂಡು ಬಂದಿದ್ದವು. ರಾಜ್‌ಕುಮಾರ್‌ ಅವರ ಜೊತೆಗೆ ಸತ್ಯಜಿತ್‌ ಅವರು ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್‌ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ನಿಧನರಾದರು.

Join Nadunudi News WhatsApp Group

News of satyajit

Join Nadunudi News WhatsApp Group