ಖ್ಯಾತ ನಟ ಸತ್ಯಜಿತ್ ಇನ್ನಿಲ್ಲ, ಅಷ್ಟಕ್ಕೂ ನಿನ್ನೆ ರಾತ್ರಿ 2 ಘಂಟೆಗೆ ಆಗಿದ್ದೇನು ಗೊತ್ತಾ, ಕಣ್ಣೀರಿನಲ್ಲಿ ಚಿತ್ರರಂಗ.

ಕನ್ನಡ ಚಿತ್ರರಂಗದ ಸಮಯ ಸರಿ ಇಲ್ಲ ಅನ್ನುವುದು ನಿನ್ನೆ ಇನ್ನೊಮ್ಮೆ ಸಾಭೀತಾಯಿತು ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಎನಿಸಿಕೊಂಡಿದ್ದ ಮತ್ತು ರಾಜ್ಯದಲ್ಲಿ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದ ಖ್ಯಾತ ನಟ ಸತ್ಯಜಿತ್ ಅವರು ನಿನ್ನೆ ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಷ್ಟೇ. ಕಳೆದ ಎರಡು ವರ್ಷದಲ್ಲಿ ಕನ್ನಡ ಚಿತ್ರರಂಗದ ಹಲವು ಹಿರಿಯ ಪ್ರತಿಭೆಗಳು ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಹಲವು ಕನ್ನಡ ಚಿತ್ರಗಳನ್ನ ನಟನೆಯನ್ನ ಮಾಡಿದ ಸತ್ಯಜಿತ್ ಅವರು ನಿನ್ನೆ ಆಸ್ಪತ್ರೆಯಲ್ಲಿ ಇಹಲೋಕವನ್ನ ತ್ಯಜಿಸಿದ್ದು ಈ ಖ್ಯಾತ ನಟನ ಅಗಲಿಕೆಗೆ ಇಡೀ ರಾಜ್ಯವೇ ಕಂಬನಿಯನ್ನ ಮಿಡಿದಿದೆ.

ಹಾಗಾದರೆ ಸತ್ಯಜಿತ್ ಅವರಿಗೆ ಏನಾಗಿತ್ತು ಮತ್ತು ಮೊನ್ನೆ ರಾತ್ರಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ಸಾಕಷ್ಟು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ನಟ ಅತ್ಯಜಿತ್ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ, ಸತ್ಯಜಿತ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಸುಮಾರು 72 ವರ್ಷ ವಯಸ್ಸಿನ ಸತ್ಯಜಿತ್ ಅವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

satyajith no more

ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಆಗಿದ್ದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ನಿನ್ನೆ ರಾತ್ರಿ ಎರಡು ಘಂಟೆ ಸುಮಾರಿಗೆ ಚಿಕ್ಸಿತೆ ಫಲಕಾರಿಯಾಗದೆ ನಟ ಸತ್ಯಜಿತ್ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರನ್ನ ಎಳೆದಿದ್ದಾರೆ. ಸತ್ತಜಿತ್ 650ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದರು. ಪುಟ್ನಂಜ, ಆಪ್ತಮಿತ್ರ, ಅಪ್ಪು, ಅಭಿ, ಯುದ್ಧಕಾಂಡ, ಪೊಲೀಸ್ ಸ್ಟೋರಿ, ಮಾಣಿಕ್ಯ, ಇಂದ್ರಜಿತ್, ಯುದ್ಧಕಾಂಡ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಖಡಕ್‌ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಇಂದು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.

ಹೆಗೆಡೆ ನಗರದ ಖಬರ್ ಸ್ಥಾನ್​ದಲ್ಲಿ ಸತ್ಯಜಿತ್​ರ ಅಂತ್ಯ ಸಂಸ್ಕಾರ ನಡೆದಿದ್ದು ಚಿತ್ರರಂಗದ ಅನೇಕ ಗಣ್ಯ ನಟ ನಟಿಯರು ಅವರ ಅಂತಿಮ ದರ್ಶನವನ್ನ ಪಡೆದುಕೊಂಡರು. ಸುದೀಪ್, ದರ್ಶನ, ಪುನೀತ್, ಅಂಬರೀಷ್, ವಿಷ್ಣುವರ್ಧನ್, ದ್ವಾರಕೀಶ್ ಹೀಗೆ ಹತ್ತು ಹಲವು ನಾಯಕ ನಟರ ನಟನೆಯನ್ನ ಮಾಡಿದ್ದ ಸತ್ಯಜಿತ್ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ನಟನೆಯ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದರು. ಕಾಲಿಗೆ ಗ್ಯಾಂಗ್ರಿನ್ ಆದಕಾರಣ ಅವರ ಒಂದು ಕಾಲನ್ನ ಕಟ್ ಮಾಡಲಾಗಿತ್ತು. ಏನೇ ಆಗಲಿ ಸತ್ಯಜಿತ್ ಅವರ ಅಗಲಿಕೆ ಚಿತ್ರರಂಗಕ್ಕೆ ಬಹಳ ಆಘಾತವನ್ನ ಉಂಟುಮಾಡಿದೆ ಎಂದು ಹೇಳಬಹುದು. ಸ್ನೇಹಿತರೆ ನಟ ಸತ್ಯಜಿತ್ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

satyajith no more

Join Nadunudi News WhatsApp Group