Ads By Google

SB Account Cash Limit: ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನ ಡೆಪಾಸಿಟ್ ಮಾಡಬಹುದು, RBI ಮಾರ್ಗಸೂಚಿ ಪ್ರಕಟ.

saving account cash deposit limits

Image Credit: Original Source

Ads By Google

Saving Account Cash Limit: ಸಾಮಾನ್ಯವಾಗಿ ಜನರು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಹೆಚ್ಚು ಉಳಿತಾಯ ಖಾತೆಯನ್ನು ತೆರೆಯುತ್ತಾರೆ. ಗಳಿಕೆಯ ಆದಾಯವನ್ನು ಉಳಿತಾಯ ಮಾಡಲು Saving Account ಬೆಸ್ಟ್ ಆಗಿದೆ ಎನ್ನಬಹುದು. ಇನ್ನು ಬ್ಯಾಂಕ್ ನಿಮಗೆ ನೀಡುತ್ತಿರುವ ಉಳಿತಾಯ ಖಾತೆಗೆ RBI ಒಂಧಿಷ್ಟು ನಿಯಮವನ್ನು ಕೂಡ ವಿಧಿಸಿರುತ್ತದೆ.

ನೀವು ಖಾತೆಯಲ್ಲಿ ಹೂಡಿಕೆ ಮಾಡುವ ಮುನ್ನ ಉಳಿತಾಯ ಖಾತೆಯ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿರುತ್ತದೆ. ಉಳಿತಾಯ ಖಾತೆಯಲ್ಲಿ ಇರಬೇಕಾದ ಮಿನಿಮಮ್ ಬ್ಯಾಲೆನ್ಸ್ ನಿಂದ ಹಿಡಿದು ಖಾತೆಯಲ್ಲಿ ಠೇವಣಿ ಇಡಬಹುದಾದ ಮೊತ್ತಕ್ಕೂ ಮಿತಿಯನ್ನು RBI ನಿಗದಿಪಡಿಸಿದೆ. ಇದೀಗ ನಾವು ಈ ಲೇಖನದಲ್ಲಿ ಉಳಿತಾಯ ಖಾತೆಗಾಗಿ RBI ರೂಪಿಸಿರುವ ನಿಯಮಗಳ ಬಗ್ಗೆ ಮಾಹಿತಿ ತಿಳಿಯೋಣ.

Image Credit: idfcfirstbank

ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನ ಡೆಪಾಸಿಟ್ ಮಾಡಬಹುದು
ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇರಿಸಿಕೊಳ್ಳಬೇಕು. ಕನಿಷ್ಠ ಮೊತ್ತದ ಕೊರತೆಯಿಂದಾಗಿ, ಬ್ಯಾಂಕ್ ದಂಡ ಶುಲ್ಕವನ್ನು ಕಡಿತಗೊಳಿಸುತ್ತದೆ. ವಿವಿಧ ಬ್ಯಾಂಕ್‌ ಗಳು ತಮ್ಮದೇ ಆದ ಕನಿಷ್ಠ ಬ್ಯಾಲೆನ್ಸ್ ಮಿತಿಗಳನ್ನು ನಿಗದಿಪಡಿಸಿವೆ. ಕೆಲವು ಸಂದರ್ಭಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ 1,000 ರೂ.ಗಳು ಮತ್ತು ಇತರರಲ್ಲಿ 10,000 ರೂ. ಆಗಿರುತ್ತದೆ. ಇನ್ನು ಉಳಿತಾಯ ಖಾತೆಗಳಲ್ಲಿ ಹಣವನ್ನು ನಗದು ರೂಪದಲ್ಲಿ ಠೇವಣಿ ಮಾಡಲು ಮಿತಿಯೂ ಇದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಉಳಿತಾಯ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 10 ಲಕ್ಷ ರೂ. ಹಣವನ್ನು ಠೇವಣಿ ಇಡಬಹುದಾಗಿದೆ. ಇದಕ್ಕಿಂತ ಹೆಚ್ಚು ನಗದು ಠೇವಣಿ ಇಟ್ಟರೆ ಆ ವಹಿವಾಟಿನ ಬಗ್ಗೆ ಬ್ಯಾಂಕ್ ಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಖಾತೆಯಲ್ಲಿ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನೀವು ಜಮಾ ಮಾಡಿದಾಗ, ನೀವು ಅದರೊಂದಿಗೆ ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ನೀವು ಒಂದು ದಿನದಲ್ಲಿ 1 ಲಕ್ಷದವರೆಗೆ ಹಣವನ್ನು ಠೇವಣಿ ಮಾಡಬಹುದು.

Image Credit: Taxationnote

ಮಿತಿಗಿಂತ ಹೆಚ್ಚು ಹಣ ಇಟ್ಟರೆ ಏನಾಗುತ್ತದೆ…?
ನಿಮ್ಮ ಖಾತೆಯಲ್ಲಿ ನೀವು 10 ಲಕ್ಷ ರೂಪಾಯಿಗಳ ಮಿತಿಗಿಂತ ಹೆಚ್ಚಿನ ಹಣವನ್ನು ಜಮಾ ಮಾಡಿದರೆ ಮತ್ತು ಆದಾಯ ತೆರಿಗೆ ರಿಟರ್ನ್‌ ನಲ್ಲಿ ಅದರ ಮೂಲದ ಬಗ್ಗೆ ನೀಡದಿದ್ದರೆ ನೀವು ಸಮಸ್ಯೆಗೆ ಗುರಿಯಾಗುತ್ತೀರಿ. ಆದಾಯ ಇಲಾಖೆ ನಿಮ್ಮ ಹಣದ ಮೂಲದ ಬಗ್ಗೆ ತನಿಖೆ ನಡೆಸಿ ನಿಮಗೆ ಭಾರಿ ದಂಡ ವಿಧಿಸಬಹುದು. ನೀವು ಆದಾಯದ ಮೂಲವನ್ನು ಬಹಿರಂಗಪಡಿಸದಿದ್ದರೆ, ಠೇವಣಿ ಮೊತ್ತದ ಮೇಲೆ 60% ತೆರಿಗೆ, 25% ಸರ್ಚಾರ್ಜ್ ಮತ್ತು 4% ಸೆಸ್ ವಿಧಿಸಬಹುದು ಎಚ್ಚರ.

ಇನ್ನು ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಸಾಕಷ್ಟು ಹಣವನ್ನು ಇಟ್ಟುಕೊಂಡಿದ್ದರೆ, ನೀವು ಅದನ್ನು ಸ್ಥಿರ ಠೇವಣಿಯಾಗಿ ಪರಿವರ್ತಿಸಬೇಕು. ಇದು ನಿಮ್ಮ ಹಣಕ್ಕೆ ನ್ಯಾಯಯುತವಾದ ಲಾಭವನ್ನು ನೀಡುತ್ತದೆ. ಬ್ಯಾಂಕ್‌ಗಳಲ್ಲಿ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಅಂದರೆ ಕನಿಷ್ಠ ಏಳು ದಿನಗಳಿಂದ ಹತ್ತಾರು ವರ್ಷಗಳವರೆಗೆ ಠೇವಣಿ ಯೋಜನೆಗಳಿವೆ. ಇದು ನಿಮ್ಮ ಹಣದ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in