Saving Account: ಉಳಿತಾಯ ಖಾತೆ ನಿಯಮದಲ್ಲಿ ಬದಲಾವಣೆ, ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ.
ಇನ್ಮುಂದೆ ಉಳಿತಾಯುಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇಟ್ಟರೆ ತೆರಿಗೆ ಕಟ್ಟಬೇಕು
Saving Account Rule: ಉಳಿತಾಯ ಖಾತೆ, ಚಾಲ್ತಿ ಖಾತೆ, ಸಂಬಳ ಖಾತೆ ಮತ್ತು ಜಂಟಿ ಖಾತೆ ಹೀಗೆ ಅನೇಕ ರೀತಿಯ ಖಾತೆಗಳ ಆಯ್ಕೆಯನ್ನು ಬ್ಯಾಂಕುಗಳು ನೀಡುತ್ತದೆ. ಇದರಲ್ಲಿ ಗ್ರಾಹಕರು ಹೆಚ್ಚಾಗಿ ಉಳಿತ್ಯಾ ಖಾತೆಯನ್ನು (Saving Account ) ತೆರೆಯುತ್ತಾರೆ. ಉಳಿತಾಯ ಖಾತೆಯು ಪ್ರಾಥಮಿಕ ಖಾತೆಯಾಗಿದೆ.
ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ. ಈ ಕಾರಣಕೆ ಹೆಚ್ಚಿನ ಜನರು ಉಳಿತಾಯ ಖಾತೆಯನ್ನೇ ಆರಿಸುತ್ತಾರೆ. ಇನ್ನು ಉಳಿತ್ಯಾ ಖಾತೆಯಲ್ಲಿ ಹೊಂದಬಹುದಾದ ಮೊತ್ತಕ್ಕೂ ಕೂಡ RBI ಮಿತಿಯನ್ನು ವಿಧಿಸಿದೆ. ಉಳಿತಾಯ ಖಾತೆಯಲ್ಲಿ ಖಾತೆದಾರರು ಎಷ್ಟು ಹಣವನ್ನು ಠೇವಣಿ ಮಾಡಬಹುದು ಎನ್ನುವುದಕ್ಕೆ RBI ಪ್ರತ್ಯೇಕ ನಿಯಮವನ್ನು ಪರಿಚಯಿಸಿದೆ.
ಉಳಿತಾಯ ಖಾತೆ ನಿಯಮದಲ್ಲಿ ಬದಲಾವಣೆ
ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣಕ್ಕೆ RBI ಯಾವುದೇ ಮಿತಿಯನ್ನು ನೀಡಿಲ್ಲ. ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇರಿಸಬಹುದಾಗಿದೆ. ಆದರೆ ನೀವು ITR ಸಲ್ಲಿಸುತ್ತಿದ್ದರೆ ಉಳಿತಾಯ ಖಾತೆಯ ಎಲ್ಲ ವಿವರವನ್ನು ನೀಡಬೇಕಾಗುತ್ತದೆ. ಆದಾಯ ಇಲಾಖೆಯು ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇದ್ದರೆ ಅದಕ್ಕೆ ಸರಿಯಾದ ದಾಖಲೆಯನ್ನು ಕೇಳುತ್ತದೆ.
ತೆರಿಗೆ ಇಲಾಖೆಯು ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ಗಿಂತ ಹೆಚ್ಚಿನ ನಗದು ಠೇವಣಿಯ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಮಿತಿಯು FDs, Mutual Funds, Bonds and Shares ಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ. ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಮೇಲೆ ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗಿದೆ ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ
*ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80TTA ಅಡಿಯಲ್ಲಿ, ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಗಳಿಸಿದ 10,000 ರೂ. ವರೆಗಿನ ಬಡ್ಡಿಗೆ ಸಾಮಾನ್ಯ ಜನರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
*ಬಡ್ಡಿ ಮೊತ್ತ ಇದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಹಿರಿಯ ನಾಗರಿಕರಿಗೆ 50 ಸಾವಿರ ರೂ. ತೆರಿಗೆ ಮಿತಿ ನೀಡಲಾಗಿದೆ.
*ದೇಶದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಉಳಿತಾಯ ಖಾತೆಗಳ ಮೇಲೆ 2.70 ಪ್ರತಿಶತದಿಂದ 4 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿವೆ.
*ಇನ್ನು 10 ಕೋಟಿ ರೂ. ವರೆಗಿನ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರ ಶೇ. 2.70 ಆಗಿದೆ. ಅನೇಕ ಸಣ್ಣ ಹಣಕಾಸು ಬ್ಯಾಂಕ್ ಗಳು ಷರತ್ತುಗಳೊಂದಿಗೆ ಉಳಿತಾಯ ಖಾತೆಗಳ ಮೇಲೆ 7 ಪ್ರತಿಶತದ ವರೆಗೆ ಬಡ್ಡಿಯನ್ನು ನೀಡುತ್ತಿವೆ.