Sayi Pallavi Quit Film Industry: ಚಿತ್ರರಂಗಕ್ಕೆ ಸಾಯಿಪಲ್ಲವಿ ಗುಡ್ ಬಾಯ್, ಬೇಸರದಲ್ಲಿ ಅಭಿಮಾನಿಗಳು.
Sayi Pallavi Quit Film Industry: ತೆಲಗು (Telagu), ತಮಿಳು (Tamil), ಮತ್ತು ಮಲಯಾಳಂ (Malayalam) ಚಿತ್ರದಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದ ನಟಿ ಸಾಯಿಪಲ್ಲವಿ (Sayipallavi). ಅದರಲ್ಲೂ ಡಾನ್ಸ್ (Dance) ನ ಮೂಲಕ ಅಭಿಮಾನಿಗಳ ಮನಸ್ಸನ್ನು ಇನ್ನು ಹೆಚ್ಚುಗೆದ್ದಿದ್ದಾರೆ. ಸಾಯಿ ಪಲ್ಲವಿಯವರನ್ನು ರೌಡಿ ಬೇಬಿ ಎಂದು ಕರೆಯುತ್ತಾರೆ.
ಹೀಗಿರುವಾಗ ಸಾಯಿ ಪಲ್ಲವಿ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾವನ್ನು ಮಾಡಿಲ್ಲ. ಇದನ್ನು ಗಮನಿಸಿದ ಕೆಲವರು ಸಾಯಿ ಪಲ್ಲವಿ ಅವರು ಚಿತ್ರರ ರಂಗಕ್ಕೆ ಗುಡ್ ಬಾಯ್ (Good bye) ಹೇಳಿದ್ದಾರಾ! ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ನಟಿ ಸಾಯಿ ಪಲ್ಲವಿ
ಮಲಯಾಳಂ (Malayalam) ನಲ್ಲಿ ಸಾಯಿಪಲ್ಲವಿ ಮೊದಲ ಬಾರಿಗೆ ಪ್ರೇಮಂ (Premam) ಚಿತ್ರದಲ್ಲಿ ನಟಿಸಿದ್ದು, ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಅವರು ಯಾವುದೇ ಹೊಸ ಸಿನಿಮಾವನ್ನು ಮಾಡಲಿಲ್ಲ. ಸಾಯಿ ಪಲ್ಲವಿಯವರನ್ನು ನೋಡದ ಅಭಿಮಾನಿಗಳು ಸ್ವಲ್ಪ ಬೇಸರಗೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಡಾನ್ಸ್ ಅನ್ನು ಇಷ್ಟ ಪಡುತ್ತಿದ್ದ ಸಾಯಿಪಲ್ಲವಿ ಅವರು ಕಿರುತೆರೆಯ ಡಾನ್ಸ್ ಷೋ ಗಳಲ್ಲಿ ಕುಣಿಯಲು ಆರಂಭಿಸಿದ್ದರು. ತಮಿಳಿನ “ಕಸ್ತೂರಿ ಮಾನ್ ” (Kasturi Maan) ಚಿತ್ರದಲ್ಲಿ ಕಾಲೇಜು ಹುಡುಗಿ ಯಾಗಿ ಸಾಯಿಪಲ್ಲವಿ ಅವರು ಮಿಂಚಿದ್ದಾರೆ.”ಫಿದಾ” (Fida), “ಮಾರಿ” 2 (Mari 2) , “ಕಲಿ” (Kali), “ಶ್ಯಾಮ ಸಿಂಗ್ ರಾಯ್” (Shyam Sing Ray) ಸಾಯಿಪಲ್ಲವಿಯವರ ಕೆಲವು ಹಿಟ್ ಸಿನಿಮಾಗಳಾಗಿವೆ.
ಡಾಕ್ಟರ್ ಆಗಿ ಸೇವೆ ಸಲ್ಲಿಸಿದ ಸಾಯಿ ಪಲ್ಲವಿ
ಸಾಯಿಪಲ್ಲವಿ ಅವರು ನಟನೆ ಬಿಟ್ಟು ಡಾಕ್ಟರ್ ಆಗಿ ಸೇವೆ ಮಾಡಲಿದ್ದಾರೆ ಎನ್ನಲಾಗಿದೆ. ಸಾಯಿಪಲ್ಲವಿ ಅವರು ಇತ್ತೀಚಿಗೆ ನಟಿಸಿದ “ವಿರಾಟಪಾರ್ವಂ” (Virata Parvam), “ಗಾರ್ಗಿ” (Gargi) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಹೆಸರು ಮಾಡಲಿಲ್ಲ ಆದ್ದರಿಂದ ಸಾಯಿಪಲ್ಲವಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆಂದು ಹೇಳಲಾಗುತ್ತಿದೆ.
ಬರುವ ಅವಕಾಶಗಳನ್ನು ತಿರಸ್ಕರಿಸಿ ಆಸ್ಪತ್ರೆ ( Hospital) ಕಟ್ಟಿಸುತ್ತಿದ್ದು, ತಮ್ಮ ಮುಂದಿನ ಜೀವನವನ್ನು ಆಸ್ಪತ್ರೆಯಲ್ಲಿ ಡಾಕ್ಟಾರ್ (Doctor) ಆಗಿ ಸೇವೆ ಸಲ್ಲಿಸುತ್ತಾ ಕಾಲ ಕಳೆಯಬೇಕ್ಕೆನ್ನುವ ಆಶಯವನ್ನು ಹೊಂದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ವಿವಾದಗಳಿಗೆ ತುತ್ತಾದ ಸಾಯಿ ಪಲ್ಲವಿ
ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ, ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡು ಒಂದೇ ಎಂದು ಸಾಯಿ ಪಲ್ಲವಿ ಅವರು ನೀಡಿದ ಹೇಳಿಕೆ ಇತ್ತೀಚಿಗಷ್ಟೇ ಬಾರಿ ವಿವಾದವನ್ನು ಸ್ರಷ್ಟಿಸಿತ್ತು. ಇವರ ಈ ಹೇಳಿಕೆಯ ಬಗ್ಗೆ ಬಾರಿ ಆಕ್ರೋಶ ನಡೆಯಿತು.
ವಾದ ವಿವಾದಗಳ ನಂತರ ಸಾಯಿ ಪಲ್ಲವಿ ಅವರು ಸ್ಪಷ್ಟನೆ ಕೂಡ ಕೊಟ್ಟರು. ಆಕೆಯ ಈ ವಿವಾದಾತ್ಮಕ ಹೇಳಿಕೆಯಿಂದಾಗಿಯೇ “ವಿರಾಟಪಾರ್ವಂ”, “ಗಾರ್ಗಿ” ಚಿತ್ರ ಸೋಲಿತು ಎಂದು ಹೇಳಲಾಗುತ್ತಿದೆ.
ಇನ್ನು ಸಾಯಿಪಲ್ಲವಿ ಅವರು ಯಾವುದೇ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ, ಹಾಗಾಗಿ ಇವರು ಚಿತ್ರ ರಂಗಕ್ಕೆ ಗುಡ್ ಬಾಯ್ ಹೇಳಿ ಡಾಕ್ಟಾರ್ ಆಗುತ್ತಾರೆ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿಬಂದಿದೆ.