Amrit Kalash: 4 ತಿಂಗಳಲ್ಲಿ ಅರ್ಜಿ ಸಲ್ಲಿಸದಿದ್ದರೆ ಸಿಗಲ್ಲ ಯೋಜನೆಯ ಲಾಭ, SBI ಖಾತೆ ಇದ್ದವರಿಗೆ ಕೊನೆಯ ಸೂಚನೆ.

SBI ಖಾತೆ ಹೊಂದಿರುವವರು ಜನರಿಗೆ ಅಮೃತ ಕಲಶ ಯೋಜನೆಯ ಲಾಭ ಪಡೆದುಕೊಳ್ಳಬಹುದು.

SBI Amrit Kalash Scheme: ಬ್ಯಾಂಕಿನಲ್ಲಿ ಗ್ರಾಹಕರು ತಮ್ಮ ಹಣವನ್ನು ಉಳಿಸಿಕೊಳ್ಳುವ ಸಲುವಾಗಿ ನಿಶ್ಚಿತ ಠೇವಣಿಯನ್ನು ಇಡುತ್ತಾರೆ. ಇದ್ದರಿಂದ ಗ್ರಾಹಕರಿಗೆ ತಮ್ಮ ಹಣಕ್ಕೆ ಸುರಕ್ಷತೆ ಮತ್ತು ಬಡ್ಡಿ ಪಡೆಯುವ ಉದ್ದೇಶ ಹೊಂದಿದ್ದು, ನಿಶ್ಚಿತ ಠೇವಣಿ ಅಥವಾ FD ಮೂಲಕ ಹೆಚ್ಚಿನ ಬಡ್ಡಿ ಹಣ ಪಡೆಯುವುದರಿಂದ ಗ್ರಾಹಕರು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ. ಬ್ಯಾಂಕ್ ಹಲವಾರು ನಿಶ್ಚಿತ ಠೇವಣಿ ಅಥವಾ FD ಯೋಜನೆಗಳನ್ನು ಜಾರಿಗೊಳಿಸಿದೆ.

Amrit Kalash Special Deposit Scheme
Image Credit: Computergyaan

ಅಮೃತ್ ಕಲಶ “ವಿಶೇಷ ಠೇವಣಿ ಯೋಜನೆ
SBI ತನ್ನ ಗರಿಷ್ಠ ಬಡ್ಡಿಯ ಯೋಜನೆಯಲ್ಲಿ ಒಂದಾದ ಅಮೃತ್ ಕಲಶ ಯೋಜನೆ ಕೂಡ ಒಂದು. ಇದನ್ನು ನಾಲ್ಕು ತಿಂಗಳ ಕಾಲ ಮುಂದೂಡಲಾಗಿದೆ. ಈ ಯೋಜನೆಯನ್ನು ದಿನಾಂಕ ಆಗಸ್ಟ್ 15 ಕೊನೆಯ ದಿನಾಂಕವಾಗಿತ್ತು. ಇದೀಗ ಆಸಕ್ತ ಹೂಡಿಕೆದಾರರು ಈ ಯೋಜನೆ ಅಡಿಯಲ್ಲಿ FD ಅನ್ನು ಡಿಸೆಂಬರ್ 31 2023 ರವಗೆ ಹೂಡಿಕೆ ಮಾಡಬಹುದಾಗಿದೆ. ಗ್ರಾಹಕರು ಕೂಡ ಹೆಚ್ಚಿನ ಬಡ್ಡಿ ದರದ ಲಾಭವನ್ನು ಪಡೆಬಹುದಾಗಿದೆ. ಅಮೃತ್ ಕಲಶ ಯೋಜನೆಯಲ್ಲಿ 400 ದಿನಗಳ ಅವಧಿಗೆ ಠೇವಣಿ ಇಟ್ಟು ಹೆಚ್ಚಿನ ಆದಾಯವನ್ನು ಪಡೆಬಹುದಾಗಿದೆ.

ಅಮೃತ್ ಕಲಶ ಯೋಜನೆಯ ಬಡ್ಡಿ ಎಷ್ಟು ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಅಮೃತ್ ಕಲಶ ವಿಶೇಷ FD ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವ ಸಾಮಾನ್ಯ ಗ್ರಾಹಕರಿಗೆ ಶೇ 7.10 ರಷ್ಟು ಬಡ್ಡಿ ಸಿಗಲಿದೆ. ಇದೇ ವೇಳೆಗೆ ಹಿರಿಯ ನಾಗರಿಕರಿಗೆ ಶೇ .7.60 ರಷ್ಟು ಬಡ್ಡಿ ದರದ ಲಾಭವನ್ನು ಪಡೆಯುತ್ತಾರೆ. ಈ ಹೂಡಿಕೆಯ ಯೋಜನೆಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿ ಕೂಡ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

State Bank Of India Amrit Kalash Scheme
Image Credit: News18

ಈ ಯೋಜನೆಯ ಬಡ್ಡಿದರ ಲಾಭ ಹೇಗೆ ದೊರೆಯಲಿದೆ
ಅಮೃತ್ ಕಲಶ ಯೋಜನೆಯಲ್ಲಿ ನಿಮಗೆ ಬಡ್ಡಿ ಹೇಗೆ ದೊರೆಯುತ್ತದೆ ಎಂದರೆ ಬ್ಯಾಂಕ್ ತಮ್ಮ ಗ್ರಾಹಕರಿಗೆ ಬಡ್ಡಿ ಯನ್ನು ಒಂದು ತಿಂಗಳಿಗೊಮ್ಮೆ , ಮೂರು ತಿಂಗಳಿಗೊಮ್ಮೆ ಹಾಗೂ ಆರು ತಿಂಗಳಿಗೊಮ್ಮೆ ಬಡ್ಡಿ ಯನ್ನು ನೀಡುತ್ತದೆ. ಅಮೃತ್ ಕಲಶ ಯೋಜನೆ ಅವಧಿ ಮುಗಿದ ನಂತರ ಗ್ರಾಹಕರು ತಮ್ಮ ಬಡ್ಡಿಯನ್ನು ಪಡೆಯಬಹುದು. ಯಾವುದೇ ವ್ಯಕ್ತಿ ಕೂಡ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಲು ಬಯಸಿದರೆ ಅಂತ ಗ್ರಾಹಕರಿಗೆ ಬ್ಯಾಂಕ್ ಶೇ.0.50 ರಷ್ಟು ಬಡ್ಡಿಯನ್ನು ಕಡಿತಗೊಳಿಸುತ್ತದೆ.

Join Nadunudi News WhatsApp Group

Join Nadunudi News WhatsApp Group