Amrit Kalash Yojana: SBI ಗ್ರಾಹಕರಿಗೆ ಸಿಹಿಸುದ್ದಿ, ಅಮೃತ್ ಕಲಶ ಯೋಜನೆ ಜಾರಿ.

ಗ್ರಾಹಕರಿಗೆ ಬಹಳ ಉಪಯೋಗ ಆಗುವ ಅಮೃತ ಕಲಶ ಯೋಜನೆಯನ್ನ ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಜಾರಿಗೆ ತಂದಿದೆ.

Amrit kalash Scheme In SBI Bank: ಪ್ರತಿಷ್ಠಿತಾ ಸರ್ಕಾರಿ ಬ್ಯಾಂಕ್ ಆಗಿರುವ ಎಸ್ ಬಿಐ (SBI) ಇದೀಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇತ್ತೀಚೆಗಂತೂ ಬ್ಯಾಂಕ್ ಗಳ ನಿಯಮದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.

ಹೊಸ ನಿಯಮಗಳ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಹೊಸ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಇದೀಗ ಎಸ್ ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಒದಗಿಸಿದೆ. ನೀವು ಎಸ್ ಬಿಐ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.

Amrit kalash Scheme In SBI Bank
Image Source: Zee News

ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಎಸ್ ಬಿ ಐ ತನ್ನ ಗ್ರಾಹಕರಿಗಾಗಿ ಹೊಸ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ. ಎಸ್ ಬಿಐ ನ ಈ ಠೇವಣಿ ಯೋಜನೆಯಲ್ಲಿ ನೀವು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ಎಸ್ ಬಿಐ ನ ಈ ಹೊಸ ಠೇವಣಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Amrit kalash Scheme In SBI Bank
Image Source: India Today

ಎಸ್ ಬಿಐ ಅಮೃತ್ ಕಲಶ ಯೋಜನೆ (SBI Amrit Kalasha Yojana) 
ಎಸ್ ಬಿಐ ಗ್ರಾಹಕರಿಗಾಗಿ ಇದೀಗ ಎಸ್ ಬಿಐ ಅಮೃತ್ ಕಲಶ ಯೋಜನೆಯನ್ನು ಮರಳಿ ತಂದಿದೆ. ಎಸ್ ಬಿಐ ಅಮೃತ್ ಕಲಶ ಯೋಜನೆಯು 400 ದಿನಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರು ಇತರ ಎಫ್ಡಿ ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

ಎಸ್ ಬಿಐ ಅಮೃತ್ ಕಲಶ ಯೋಜನೆಯನ್ನು ಏಪ್ರಿಲ್ 15 2023 ರಂದು ಜಾರಿಗೆ ತರಲಾಗಿದೆ. ಇನ್ನು ಜೂನ್ ತಿಂಗಳ ಅಂತ್ಯದ ವರೆಗೆ ಈ ಯೋಜನೆ ಲಭ್ಯವಿದೆ. ಎಸ್ ಬಿಐ ಅಮೃತ್ ಕಲಶ ಯೋಜನೆಯು ಶೇ. 7 .1 ಬಡ್ಡಿದರವನ್ನು ನೀಡುತ್ತದೆ. ಹಾಗೆಯೆ ಹಿರಿಯ ನಾಗರಿಕರಿಗೆ ಶೇ,. 7 .6 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

Join Nadunudi News WhatsApp Group

Amrit kalash Scheme In SBI Bank
Image Source:Telugu Stop

Join Nadunudi News WhatsApp Group