Home Loan: ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕಿನಲ್ಲಿ ಸಿಗುತ್ತಿದೆ ಅಗ್ಗದ ಬಡ್ಡಿದರಕ್ಕೆ ಸಾಲ, ಇಂದೇ ಅರ್ಜಿ ಹಾಕಿ..

ಅಗ್ಗದ ಬಡ್ಡಿ ದರಕ್ಕೆ ಸಾಲ ನೀಡುತ್ತಿರುವ ಬ್ಯಾಂಕ್ ಗಳ ಬಗ್ಗೆ ಮಾಹಿತಿ ತಿಳಿಯಿರಿ.

SBI And HDFC Home Loan Interest Rate: ಜನರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಲು ಗೃಹ ಸಾಲ (Home Loan) ಉತ್ತಮ ಮಾರ್ಗವಾಗಿದೆ. ಗೃಹ ಸಾಲದಿಂದಾಗಿ ಕೋಟ್ಯಾಂತರ ಜನರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇನ್ನು ಗೃಹ ಸಾಲ ಪಡೆಯುವ ಸಮಯದಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಸಾಲ ಪಡೆಯುವ ಮುನ್ನ ಸಾಲದ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು.

SBI And HDFC Home Loan Interest Rate
Image Credit: Magicbricks

ಗೃಹ ಸಾಲ(Home Loan)
ಸಾಮಾನ್ಯವಾಗಿ ಗೃಹ ಸಾಲವನ್ನು ಪಡೆಯುವ ಸರ್ಕಾರೀ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಉತ್ತಮ. ಏಕೆಂದರೆ ಕೆಲ ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದೆ ಸರ್ಕಾರೀ ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇರುತ್ತದೆ. ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗಲಿದೆ.

ಗೃಹ ಸಾಲವನ್ನು ಪಡೆಯುವಾಗ ಬಡ್ಡಿದರದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರವನ್ನು ತಿಳಿದುಕೊಳ್ಳಬೇಕು. ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು.

ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ಗೃಹ ಸಾಲದ ಮೇಲಿನ ಬಡ್ಡಿದರವು ವಾರ್ಷಿಕ 8 % ದಿಂದ ಪ್ರಾರಂಭವಾಗುತ್ತದೆ. ಗೃಹ ಸಾಲದ ಮೇಲಿನ ಬಡ್ಡಿದರವು ಮಾಸಿಕ EMI ನ ಮೇಲೆ ಹೆಚ್ಚಿನ ಪ್ರಭಾವನ್ನು ಬೀರುತ್ತದೆ. ಇದೀಗ SBI ಮತ್ತು HDFC ಬ್ಯಾಂಕ್ ಹೋಮ್ ಲೋನ್ ಬಡ್ಡಿ ದರದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Join Nadunudi News WhatsApp Group

State Bank of India is offering home loan at low interest rates.
Image Credit: Economictimes

ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಅಗ್ಗದ ಬಡ್ಡಿದರಕ್ಕೆ ಸಾಲ
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)
ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಉದ್ಯೋಗದಲ್ಲಿರುವವರಿಗೆ ಹಾಗೂ ಸ್ವಂತ ವ್ಯಾಪಾರ ಹೊಂದಿರುವವರಿಗೆ SBI ಗೃಹ ಸಾಲ ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲದ ಮೊತ್ತ 5 ಲಕ್ಷದಿಂದ 10 ಕೋಟಿ ಸಿಗುತ್ತದೆ.

ಗೃಹ ಸಾಲದ ಅವಧಿಯು ಗರಿಷ್ಟ 30 ವರ್ಷದ ಅವಧಿಯನ್ನು ಹೊಂದಿರುತ್ತದೆ. SBI ಗೃಹ ಸಾಲದ ಬಡ್ಡಿದರವು 8.7% ರಿಂದ ಪ್ರಾರಂಭವಾಗುತ್ತದೆ. ಸಂಸ್ಕರಣಾ ಶುಲ್ಕ ಕನಿಷ್ಠ 5000 ರೂ. ಆಗಿದೆ.

HDFC Bank is offering home loans at low interest rates.
Image Credit: Fortuneindia

*ಹೆಚ್ ಡಿಎಫ್ ಸಿ(HDFC bank)
ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಹೆಚ್ ಡಿಎಫ್ ಸಿ ಬ್ಯಾಂಕ್ ಕೂಡ ಒಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲದ ಮೊತ್ತ 5 ಲಕ್ಷದಿಂದ 10 ಕೋಟಿ ಸಿಗುತ್ತದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಗರಿಷ್ಟ 10 ಕೋಟಿ ಸಾಲವನ್ನು ನೀಡಲಿದೆ. HDFC ಗೃಹ ಸಾಲದ ಬಡ್ಡಿದರವು 8.4% ರಿಂದ ಪ್ರಾರಂಭವಾಗುತ್ತದೆ. ಸಂಸ್ಕರಣಾ ಶುಲ್ಕ ಕನಿಷ್ಠ 3000 ರೂ. ಆಗಿದೆ. ಗೃಹ ಸಾಲದ ಅವಧಿಯು ಗರಿಷ್ಟ 30 ವರ್ಷದ ಅವಧಿಯನ್ನು ಹೊಂದಿರುತ್ತದೆ.

Join Nadunudi News WhatsApp Group