SBI ATM Charges: SBI ಗ್ರಾಹಕರ ಖಾತೆಯಿಂದ 147 ರೂ. ಕಟ್, ಹಣ ಕಡಿತಗೊಳಿಸಲು ಇದೆ ಕಾರಣ.
SBI ATM Chareges Rupees 147.5 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಇತ್ತೀಚೆಗೆ ತಮ್ಮ ಖಾತೆಯಿಂದ 147.50 ಹಣ ಡೆಬಿಟ್ ಆಗಿರುವ ಸಂದೇಶವನ್ನು ಪಡೆದಿರುತ್ತೀರಿ. ಆದರೆ ಈ ಹಣ ಯಾವ ಕಾರಣಕ್ಕೆ ಡೆಬಿಟ್ ಆಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿಲ್ಲ. ಇದೀಗ SBI ನಿಮ್ಮ ಖಾತೆಯಿಂದ ಏಕೆ ಹಣವನ್ನು ಡೆಬಿಟ್ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಎಸ್ ಬಿಐ ಗ್ರಾಹಕರ ಖಾತೆಯಿಂದ ರೂ. 147.50 ಕಡಿತ
ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ಈಗಾಗಲೇ ನಿಮ್ಮ ಖಾತೆಯಿಂದ 147.50 ರೂ. ಡೆಬಿಟ್ ಆಗಿರುವ ಸಂದೇಶವನ್ನು ನೀವು ಪಡೆದಿರುತ್ತೀರಿ.
ನಿಮಗೆ ಈ ಬಗ್ಗೆ ಸಂದೇಶ ಬಂದಿಲ್ಲದಿದ್ದರೆ ನೀವು ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ ತಿಳಿಕೊಳ್ಳಬಹುದು. ಎಸ್ ಬಿಐ ಗ್ರಾಹಕರ ಖಾತೆಯಿಂದ ಯಾವ ಕಾರಣಕ್ಕೆ 147.50 ರೂ. ಗಳನ್ನೂ ಡೆಬಿಟ್ ಮಾಡಿದೆ ಎನ್ನುವ ಮಾಹಿತಿಯ ಬಗ್ಗೆ ನೀವು ತಿಳಿದುಕೊಳ್ಳಿ.
ಗ್ರಾಹಕರ ಖಾತೆಯಿಂದ ರೂ. 147.50 ಕಡಿತಗೊಳಿಸಲು ಕಾರಣ
ಎಸ್ ಬಿಐ ಭಾರತದ ಆಟೋದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಎಸ್ ಬಿಐ 45 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಎಸ್ ಬಿಐ ಗ್ರಾಹಕರಿಗೆ ನೀಡಲಾಗುವ ಎಲ್ಲ ಸೇವೆಗಳು ಉಚಿತವಲ್ಲ. ಕೆಲವು ಸೇವೆಗಳಿಗೆ ಶುಲ್ಕ ವಿಧಿಸಬಹುದು. ಎಸ್ ಬಿಐ ಗ್ರಾಹಕರ ಖಾತೆಯಿಂದ ರೂ. 147.50 ಕಡಿತಗೊಳಿಸಲು ಇದು ಕಾರಣವಾಗಿದೆ.
ಎಸ್ ಬಿಐ ಡೆಬಿಟ್ ಕಾರ್ಡ್ ಬಳಕೆದಾರರಿಂದ ಈ ಶುಲ್ಕವನ್ನು ಎಸ್ ಬಿಐ ಕಡಿತಗೊಳಿಸುತ್ತದೆ. ಎಸ್ ಬಿಐ ಗ್ರಾಹಕರು ವಾರ್ಷಿಕವಾಗಿ ರೂ. 147.50 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಾಸ್ತವವಾಗಿ ವಾರ್ಷಿಕ ನಿರ್ವಹಣೆಯ ಶುಲ್ಕ 125 ರೂ. ಹೆಚ್ಚುವರಿಯಾಗಿ 18 ಪ್ರತಿಶತ ಜಿಎಸ್ಟಿ ರೂ. 22 .50 ಸೇರಿದಂತೆ ಒಟ್ಟು ರೂ. 147.50 ಅನ್ನು ಬ್ಯಾಂಕ್ ವಿಧಿಸುತ್ತದೆ.