SBI Credit Card Charges: SBI ಗ್ರಾಹಕರಿಗೆ ಹೊಸ ಸುದ್ದಿ, ಕಾರ್ಡುಗಳಿಗೆ ಶುಲ್ಕವನ್ನ ಕಡ್ಡಾಯ ಮಾಡಿದ SBI.
SBI Credit Card New Rules: ಪ್ರಸ್ತುತ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದ ಜೀವನ ಅಸಾಧ್ಯವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸಹ ತಮ್ಮ ವ್ಯಾಲೆಟ್ ನಲ್ಲಿ ಕನಿಷ್ಠ ಒಂದೇ ಒಂದು ಕ್ರೆಡಿಟ್ ಕಾರ್ಡ್ ಆದರೂ ಹೊಂದಿರುತ್ತಾರೆ. ನೀವು ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಹೊಂದಿರುವವರಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ ಇದೆ.
ಭಾರತದ ಅತಿದೊಡ್ಡ ಸರ್ಕಾರೀ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಇಂದಿನಿಂದ ಜಾರಿಗೆ ಬರುವಂತೆ ಎಸ್ ಬಿ ಐ ಕಾರ್ಡ್ಗಳು ಮತ್ತು ಪಾವತಿ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ.
ಇಂದಿನಿಂದ ದುಬಾರಿಯಾಗಲಿದೆ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಶುಲ್ಕ
ಹೊಸ ನಿಯಮದ ಪ್ರಕಾರ ಇಂದು ಮಾರ್ಚ್ 17,2023 ಇಂದ ಎಸ್ ಬಿ ಐ ಕಾರ್ಡ್ ಗಳು ಮತ್ತು ಪಾವತಿ ಸೇವೆಗಳ ಶುಲ್ಕಗಳು ಹೆಚ್ಚಾಗಲಿವೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರಿಗೆ +99+ ತೆರಿಗೆ ಬದಲಿಗೆ ರೂಪಾಯಿ 199+ ಅನ್ವಯವಾಗುವ ತೆರಿಗೆಗಳನ್ನು ವಿಧಿಸಲಾಗುತ್ತದೆ.
ನೀವು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಾಗಿದ್ದು ಇನ್ನೂ ಕೂಡ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಪಡೆದಿಲ್ಲ ಎಂದಾದರೆ, ಕೆಲವು ದಾಖಲೆಗಳನ್ನು ಒದಗಿಸುವ ಮೂಲಕ ಕ್ರೆಡಿಟ್ ಕಾರ್ಡ್ ಪಡೆಯಬಹುದು.
ಇದಕ್ಕೂ ಮೊದಲು ಎಸ್ ಬಿ ಐ ಜನವರಿ 2023 ರಿಂದ ಜಾರಿಗೆ ಬರುವಂತೆ ಕಾರ್ಡ್ದಾರರಿಗಾಗಿ ಕೆಲವು ನಿಯಮಾವಳಿಗಳನ್ನು ನವೀಕರಿಸಿತ್ತು. ಇದರ ಅನ್ವಯ ಗಿಫ್ಟ್ ಕಾರ್ಡ್ಗಳು ಮತ್ತು ರಿವಾರ್ಡ್ ಪಾಯಿಂಟ್ಗಳ ರಿಡೆಂಪ್ಶನ್ ಗೆ ಸಂಬಂಧಿಸಿದ ನಿಯಮಗಳು ಬದಲಾಗಿದ್ದವು.
ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಪಾವತಿ ಸೇವೆಗಳ ಪ್ರಕಾರ, SimplyCLICK ಕಾರ್ಡ್ದಾರರಿಗೆ ನೀಡಲಾದ ಕ್ಲಿಯರ್ಟ್ರಿಪ್ ವೋಚರ್ ಅನ್ನು ಒಂದು ವಹಿವಾಟಿನೊಳಗೆ ರಿಡೀಮ್ ಮಾಡಿಕೊಳ್ಳಬೇಕು ಮತ್ತು ಅದನ್ನು ಯಾವುದೇ ಆಫರ್ ಅಥವಾ ವೋಚರ್ ನೊಂದಿಗೆ ಸಂಯೋಜಿಸಲಾಗುವುದಿಲ್ಲ ಎಂದು ಹೇಳಲಾಗಿದೆ.