ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಬ್ಯಾಂಕ್ ಅಂದರೆ ಅದು ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಹೇಳಬಹುದು. ಹೌದು ತನ್ನ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಬಹಳ ಒಳ್ಳೆಯ ಸೇವೆಯನ್ನ ನೀಡುತ್ತಿದ್ದು ಜನರು ಈ ಕಾರಣದಿಂದ ಹೆಚ್ಚು ಹೆಚ್ಚು ಬ್ಯಾಂಕ್ ಖಾತೆಯನ್ನ ತೆರೆಯುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಖಾತೆ ಹೊಂದಿದವರು ಸಾಮಾನ್ಯವಾಗಿ ಏಟಿಎಂ ಕಾರ್ಡುಗಳನ್ನ ಹೊಂದಿರುತ್ತಾರೆ. ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಈಗ ತನ್ನ ಗ್ರಾಹಕರಿಗಾಗಿ ದೊಡ್ಡ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಗ್ರಾಹಕರು 2 ಲಕ್ಷ ರೂಪಾಯಿಯನ್ನ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಆ ಹೊಸ ಯೋಜನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲಾ ಜನ್ ಧನ್ ಖಾತೆದಾರರಿಗೆ ರೂ 2 ಲಕ್ಷದವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ಅನ್ನು ನೀಡುತ್ತಿದೆ. ಇನ್ನು ಗ್ರಾಹಕರಿಗೆ ಅವರ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್‌ಬಿಐ ನಿರ್ಧರಿಸುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಯನ್ನು ಆಗಸ್ಟ್ 28, 2018 ರ ವರೆಗೆ ತೆರೆದಿರುವ ಗ್ರಾಹಕರು ಅವರಿಗೆ ನೀಡಲಾದ RuPay PMJDY ಕಾರ್ಡ್‌ನಲ್ಲಿ ರೂಪಾಯಿ 1 ಲಕ್ಷದವರೆಗೆ ವಿಮಾ ಮೊತ್ತವನ್ನು ಪಡೆಯುತ್ತಾರೆ.
ಆಗಸ್ಟ್ 28, 2018 ರ ನಂತರ ನೀಡಲಾದ ರುಪೇ ಕಾರ್ಡ್‌ಗಳಲ್ಲಿ ರೂಪಾಯಿ 2 ಲಕ್ಷದ ವರೆಗಿನ ಆಕಸ್ಮಿಕ ಕವರ್ ಪ್ರಯೋಜನವು ಲಭ್ಯವಿರುತ್ತದೆ. ಇನ್ನು ಅಪಘಾತದ ದಿನಾಂಕದಿಂದ 90 ದಿನಗಳ ಒಳಗಾಗಿ ವಿಮೆದಾರರು ಯಾವುದೇ ಚಾನಲ್‌ನಲ್ಲಿ ಯಾವುದೇ ಯಶಸ್ವಿ ಹಣಕಾಸು ಅಥವಾ ಹಣಕಾಸೇತರ ವಹಿವಾಟು ನಡೆಸಿದಾಗ ಜನ್ ಧನ್ ಖಾತೆದಾರರು ರುಪೇ ಡೆಬಿಟ್ ಕಾರ್ಡ್ ಅಡಿಯಲ್ಲಿ ಅಪಘಾತ ಮರಣ ವಿಮೆಯ ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಅಂತಹ ಸಂದರ್ಭದಲ್ಲಿ ಮಾತ್ರ ಮೊತ್ತವನ್ನು ಪಾವತಿಸಲಾಗುತ್ತದೆ. ಇನ್ನು ಈ ಹಣವನ್ನ ಪಡೆದುಕೊಳ್ಳಲು ನೀವು ಮೊದಲು ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ಇನ್ನು ಇದಾದ ನಂತರ ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು. ಎಫ್‌ಐಆರ್‌ನ ಮೂಲ ಅಥವಾ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿಸಿ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್‌ಎಸ್‌ಎಲ್ ವರದಿಯೂ ಇರಬೇಕು. ಆಧಾರ್ ಕಾರ್ಡ್ ನಕಲು, ಕಾರ್ಡುದಾರರ ಬಳಿ ರುಪೇ ಕಾರ್ಡ್ ಹೊಂದಿರುವ ಅಫಿಡವಿಟ್ ಅನ್ನು ಬ್ಯಾಂಕ್ ಸ್ಟಾಂಪ್ ಪೇಪರ್‌ನಲ್ಲಿ ನೀಡಬೇಕು. ಇನ್ನು ಎಲ್ಲಾ ದಾಖಲೆಗಳನ್ನು 90 ದಿನಗಳಲ್ಲಿ ಸಲ್ಲಿಸಬೇಕು ಮತ್ತು ಪಾಸ್‌ಬುಕ್‌ನ ಪ್ರತಿಯೊಂದಿಗೆ ನಾಮಿನಿಯ ಹೆಸರು ಮತ್ತು ಬ್ಯಾಂಕ್ ವಿವರಗಳನ್ನು ಸಲ್ಲಿಸಬೇಕು. ಸ್ನೇಹಿತರೆ ಇದೊಂದು ಉತ್ತಮವಾದ ಯೋಜನೆ ಆಗಿದ್ದು ಅದೆಷ್ಟೋ ಜನರಿಗೆ ಈ ಯೋಜನೆ ಅಹಾಯಕವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಎಲ್ಲಾ ಜನರಿಗೆ ತಲುಪಿಸಿ.