Ads By Google

SBI Digital Locker: SBI ನಲ್ಲಿ ಖಾತೆ ಇದ್ದವರಿಗೆ ಹೊಸ ಸೇವೆ ಆರಂಭ, ಇಂದೇ ಬ್ಯಾಂಕಿಗೆ ಭೇಟಿನೀಡಿ ಸೌಲಭ್ಯ ಪಡೆದುಕೊಳ್ಳಿ.

Digital locker facility for SBI customers

Image Credit: forbesindia

Ads By Google

SBI Digital Locker Service: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಎಸ್ ಬಿಐ (SBI) ಇದೀಗ ತನ್ನ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆಯನ್ನು ತಂದಿದೆ. ಹೊಸ ಹಣಕಾಸು ವರ್ಷ ಆರಂಭಗೊಂಡ ಹಿನ್ನಲೆ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹಣಕಾಸು ವರ್ಷದ ಪ್ರತಿ ತಿಂಗಳು ಮುಗಿದ ನಂತರ ಕೂಡ ಬ್ಯಾಂಕ್ ಗಳು ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿವೆ.

ಇದೀಗ ಎಸ್ ಬಿಐ ಬ್ಯಾಂಕ್ ತನ್ನ ಲಾಕರ್ (Locker) ನಿಯಮದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ಲಾಕರ್ ನಿಯಮ ಬದಲಾವಣೆಯ ಜೊತೆಗೆ ಗ್ರಾಹಕರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೊಳಿಸಿದೆ. ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ಎಸ್ ಬಿಐ ಬ್ಯಾಂಕ್ ಬದಲಾಯಿಸಿರುವ ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Image Credit: News18

SBI ಗ್ರಾಹಕರಿಗಾಗಿ ಡಿಜಿಟಲ್ ಲಾಕರ್ ಸೌಲಭ್ಯ
ಎಸ್ ಬಿಐ ತನ್ನ ಗ್ರಾಹಕರಿಗಾಗಿ ಡಿಜಿಟಲ್ ಲಾಕರ್ ಸೌಲಭ್ಯವನ್ನು ಜಾರಿಗೊಳಿಸಿದೆ.ಈ ಸೌಲಭ್ಯದ ಮೂಲಕ ಗ್ರಾಹಕರು ನಿಮ್ಮ ಲಾಕರ್ ಅನ್ನು ಆನ್ಲೈನ್ ಮಾಧ್ಯಮದ ಮೂಲಕ ತೆರೆಯಬಹುದಾಗಿದೆ.

ಈ ಡಿಜಿಲಾಕರ್ ವ್ಯವ್ಯಸ್ಥೆಯು ನಿಮ್ಮ ಅಧಿಕೃತ ವರ್ಚುವಲ್ ಡಾಕ್ಯುಮೆಂಟ್ ಗಳ ಅನುಕೂಲವನ್ನು ನೀಡುತ್ತದೆ. ನೀವು ಈ ಲಾಕರ್ ಅನ್ನು ತೆರೆದಾಗ ಇದಕ್ಕಾಗಿ ಹಲವು ಧಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಈ ಲಾಕರ್ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುತ್ತದೆ.

ಗ್ರಾಹಕರಿಗೆ ಇನ್ನಷ್ಟು ಸಹಾಯವಾಗಲಿದೆ ಈ ಡಿಜಿಲಾಕರ್ ವ್ಯವಸ್ಥೆ
ಡಿಜಿಲಾಕರ್ ಸೌಲಭ್ಯವನ್ನು ಪಡೆಯಲು ಗ್ರಾಹಕರು ಪ್ರಮುಖ ದಾಖಲೆಗಳನ್ನು ನೀಡಬೇಕು. ಲಾಕರ್ ಗೆ ಸೈನ್ ಅಪ್ ಮಾಡುವ ಸಮಯದಲ್ಲಿ ಡಾಕ್ಯುಮೆಂಟ್ ಗಳನ್ನೂ ಅಪ್ಲೋಡ್ ಮಾಡಬೇಕು.

Image Credit: Dnaindia

ನೀವು ಲಾಕರ್ ನಲ್ಲಿ ಮೀಸಲಾದ ಕ್ಲೌಡ್ ಸ್ಟೋರೇಜ್ ಜಾಗವನ್ನು ಪಡೆಯಬಹುದು. ಲಾಕರ್ ನಲ್ಲಿ ಗ್ರಾಹಕರು ಖಾತೆ ಹೇಳಿಕೆ, ಫಾರ್ಮ್ 15 ಎ ಮತ್ತು ಗೃಹ ಸಾಲದ ಬಡ್ಡಿ ಪ್ರಮಾಣಪತ್ರವನ್ನು ಸಹ ಸಂಗ್ರಹಿಸಿಡಬಹುದು. ಇನ್ನು ಡಾಕ್ಯುಮೆಂಟ್ ಗಳು ಕಳೆದು ಹೋದಾಗ ಈ ಡಿಜಿಲಾಕರ್ ವ್ಯವಸ್ಥೆಯ ಮೂಲಕ ಸುಲಭವಾಗಿ ಮರು ಸೃಷ್ಟಿ ಮಾಡಬಹುದು.

ಎಸ್ ಬಿ ಐ ಗ್ರಾಹಕರಿಗೆ ಸೆಪ್ಟೆಂಬರ್ 30 ಕೊನೆಯ ದಿನಾಂಕ
ಎಸ್ ಬಿಐ ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು ಬ್ಯಾಂಕ್ ಗಳು ಸೆಪ್ಟಬರ್ 30 ರೊಳಗೆ ಅದನ್ನು ಜಾರಿಗೆ ತರಬೇಕು. ಬ್ಯಾಂಕ್ ಲಾಕರ್ ಒಪ್ಪಂದವನ್ನು ನವೀಕರಿಸಲು SBI ಗ್ರಾಹಕರಿಗೆ ಕೇಳಿದೆ.

Image Credit: Livemint

ಬ್ಯಾಂಕ್ ಗ್ರಾಹಕರ ಹಕ್ಕುಗಳನ್ನು ಒಳಗೊಂಡಿರುವ ಪರಿಷ್ಕೃತ ಪೂರಕ ಲಾಕರ್ ಒಪ್ಪಂದವನ್ನು ನೀಡಿದೆ. ಲಾಕರ್ ಹೊಂದಿರುವ ಜನರು ಪರಿಷ್ಕೃತ ಪೂರಕ ಒಪ್ಪಂದದ ಪ್ರಕಾರ ಬದಲಾವಣೆಗಳನ್ನು ಮಾಡಬೇಕು.ಸೆಪ್ಟೆಂಬರ್ 30 ರೊಳಗೆ ಎಲ್ಲ ಗ್ರಾಹಕರು ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯವಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in